ಶಿವಮೊಗ್ಗ : ಕೇಂದ್ರ ಕಾರಗೃಹದಲ್ಲಿ ವಿಚಾರಣಾಧೀನ ಕೈದಿ ಸೆಲ್ ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕುಂದಾಪುರದ ಕರುಣಾಕರ ದೇವಾಡಿಗ(24) ನೇಣುಬಿಗಿದುಕೊಂಡು ಸಾವನ್ನಪ್ಪಿದ ಯುವಕ.
ಇಂದು ಮುಂಜಾನೆ ಜೈಲಿನಲ್ಲಿ ತಿಂಡಿ ಕೊಡುವ ಹೊತ್ತಿನಲ್ಲಿಯೇ ಕರುಣಾಕರ ಸೆಲ್ ನ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೈ ಉಜ್ಜುವ ನಾರನ್ನೇ ಹಗ್ಗವನ್ನಾಗಿ ಮಾಡಿಕೊಂಡು ಕರುಣಾಕರ ನೇಣು ಹಾಕಿಕೊಂಡಿದ್ದಾನೆ ಎನ್ನಲಾಗಿದೆ.
ದೇವಸ್ಥಾನದ ಮುಂದೆ ಭಿಕ್ಷೆ ಬೇಡುತಿದ್ದ ಅಜ್ಜಿಯನ್ನು ಹಣದಾಸೆಗೆ ಕೊಲೆ ಮಾಡಿದ್ದ ಕರುಣಾಕರ ದೇವಾಡಿಗ 2022 ರ ಡಿಸೆಂಬರ್ 3 ರಂದು ಭದ್ರಾವತಿಯ ಸುಣ್ಣದಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕೊಲೆ ಮಾಡಿ ಆರೋಪಿ ಬಂಗಾರದ ಓಲೆ ಮತ್ತು ಮೂಗುತಿಯೊಂದಿಗೆ ಪರಾರಿಯಾಗಿದ್ದನು.
ಶಂಕ್ರಮ್ಮ ಎಂಬ 70 ವರ್ಷದ ವೃದ್ದೆಗೆ ಗಂಡ ಮಕ್ಕಳು ಇಲ್ಲದ ಕಾರಣ ಇರುವ ಆಸ್ತಿಯನ್ನ ಮಾರಾಟ ಮಾಡಿ ಸುಣ್ಣದ ಹಳ್ಳಿ ದೇವಸ್ಥಾನದ ಬಳಿ ಭಿಕ್ಷೆ ಬೇಡುತ್ತಿದ್ದು ದೇವಸ್ಥಾನದ ಎದುರಿನಅಂತರಘಟ್ಟಮ್ಮ ದೇವಸ್ಥಾನದಲ್ಲಿ ಮಲಗುತ್ತಿದ್ದರು. ದೇವಸ್ಥಾನಕ್ಕೆ ಬರುವ ಭಕ್ತರಿಂದ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು.ದೇವಸ್ಥಾನದ ಕಟ್ಟೆಯ ಮೇಲೆ ಕುಳಿತು ಭಿಕ್ಷೆ ಬೇಡುತ್ತಿದ್ದ ಶಂಕ್ರಮ್ಮ 03-12-2022 ರಂದು ಸಾವನ್ನಪ್ಪಿದ್ದ ಪ್ರಕರಣದಲ್ಲಿ ಬಂಧಿತನಾಗಿದ್ದನು.
ಮಾನಸಿಕವಾಗಿ ಖಿನ್ನನಾಗಿದ್ದ ಕರುಣಾಕರ ದೇವಾಡಿಗನಿಗೆ ವೈದ್ಯರು ಕೌನ್ಸೆಲಿಂಗ್ ಮಾಡಿದ್ದರು.