ಚೀಲೂರಿನ ಗೋವಿನ ಕೋವಿಯಲ್ಲಿ ನಡೆದಿದ್ದ ಡಬ್ಬಲ್ ಅಟ್ಯಾಕ್ ಪ್ರಕರಣ ಸಂಬಂಧ ದಾವಣಗೆರೆ ಪೊಲೀಸರು ಆರೋಪಿಗಳು ತನಿಖೆ ಇನ್ನೂ ಸಹ ಮುಂದುವರಿಸಿದ್ದಾರೆ. ಈ ಮಧ್ಯೆ ಆಂಧ್ರದಲ್ಲಿ ಆರೋಪಿಗಳು ಸೆರೆಂಡರ್ ಆಗಿದ್ದರು ಎಂಬ ಫೇಕ್ ನ್ಯೂಸ್ನ್ನ ಕೂಡ ಉದ್ದೇಶ ಪೂರ್ವಕ ಕಾಣದ ಕೈಯ್ಯೊಂದು ಹರಿಬಿಟ್ಟಿತ್ತು. ಆದರೆ ಇದೇ ಶರಣಾಗತಿ ಸುದ್ದಿ ಇದೀಗ ನಿಜವಾಗಿದೆ.
ಕಳೆದ ಮಾರ್ಚ್ 15 ರಂದು ಹಂದಿ ಅಣ್ಣಿ ಕೊಲೆಯ ಆರೋಪಿಗಳಾದ ಆಂಜನೇಯ ಮತ್ತು ಮಧು ಮೇಲೆ ತಮಿಳ್ ರಮೇಶ್ ನ ಗ್ಯಾಂಗ್ ಮಾರಕಾಸ್ತ್ರಗಳಿಂದ ದಾಳಿ ನಡೆಸಿತ್ತು. ಬೊಲೆರೋ ವಾಹನದಲ್ಲಿ ಬೈಕ್ಗೆ ಡಿಕ್ಕಿ ಹೊಡೆಸಿ ಇಬ್ಬರಿಗೂ ಮಚ್ಚಿನಿಂದ ಹಲ್ಲೆ ನಡೆಸಿದ್ದರು. ಈ ಘಟನೆಯಲ್ಲಿ ಆಂಜನೇಯ ಸಾವನ್ನಪ್ಪಿದ್ದು, ಮಧು ಚೇತರಿಸಿಕೊಳ್ತಿದ್ದಾನೆ.
ಘಟನೆ ಬೆನ್ನಲ್ಲೆ ದಾವಣಗೆರೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದರು. ಅಷ್ಟರಲ್ಲಿ ಹಾವೇರಿಯ ಶಿಗ್ಗಾವಿಯಲ್ಲಿ ನಾಲ್ವರು ಆರೋಪಿಗಳು ಸೆರೆಂಡರ್ ಆಗಿದ್ದರು. ಅದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಅವರು ಸೆರೆಂಡರ್ ಆಗಿಲ್ಲ ಅವರನ್ನಅರೆಸ್ಟ್ ಮಾಡಲಾಗಿದೆ ಎಂಬ ವಿಚಾರವೂ ಕೇಳಿಬಂದಿತ್ತು.
ಇದರ ನಡುವೆ ಘಟನೆಯ ಮಾಸ್ಟರ್ ಮೈಂಡ್ ತಮಿಳ್ ರಮೇಶ್ ಎಂಬುದು ಸ್ಪಷ್ಟವಾಗಿತ್ತಾದರೂ ಆತ ಎಸ್ಕೇಪ್ ಆಗಿದ್ದ, ಆತನ ಜೊತೆಗಿದ್ದ ದೀಪು ಸಹ ಅಬ್ಸ್ಕ್ಯಾಂಡ್ ಆಗಿದ್ದ,. ಇವರಿಬ್ಬರಿಗೂ ಹೆಬ್ಬಟ್ಟು ಮಂಜ ಶೆಲ್ಟರ್ ಕೊಡುತ್ತಿದ್ಧಾನೆ ಎಂಬ ಗುಮಾನಿಯು ದಟ್ಟವಾಗಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಇಬ್ಬರನ್ನು ಹಿಡಿಯುವ ಲಾಸ್ಟ್ ಮೂಮೆಂಟ್ನಲ್ಲಿ ಮಾಧ್ಯಮಗಳಿಗೆ ಆರೋಪಿಗಳಿಬ್ಬರ ಶರಣಾಗತಿ ಎಂಬ ಸುದ್ದಿ ಲೀಕ್ ಆಗಿತ್ತು.
ಸದ್ಯ ಲಭ್ಯ ಮಾಹಿತಿಯ ಪ್ರಕಾರ, ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಸ್ಟೇಷನ್ ಲಿಮಿಟ್ನಲ್ಲಿ ಆರೋಪಿ ತಮಿಳ್ ರಮೇಶ್ ಹಾಗೂ ದೀಪು ಸರೆಂಡರ್ ಆಗಿದ್ದಾರೆ ಎನ್ನಲಾಗಿದೆ. ಯಾವ ರೀತಿಯಲ್ಲಿ ಶರಣಾಗಿದ್ದಾರೆ. ಅದರ ಹಿನ್ನೆಲೆ ಏನು? ಎಂಬುದು ಇನ್ನಷ್ಟೆ ಸ್ಪಷ್ಟವಾಗಬೇಕಿದೆ. ಸದ್ಯ ದಾವಣಗೆರೆ ಪೊಲೀಸರು ಆರೋಪಿಗಳನ್ನ ಬೆಂಗಳೂರು ಪೊಲೀಸರು ಕೋರ್ಟ್ಗೆ ಅಟೆಂಡ್ ಮಾಡಿಸಿದ ನಂತರ, ತಮ್ಮ ವಶಕ್ಕೆ ಕೋರ್ಟ್ ಮೂಲಕ ಪಡೆದು ವಿಚಾರಣೆ ನಡೆಸಲಿದ್ದಾರೆ.