Headlines

ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷ ತೊರೆಯುವುದಿಲ್ಲ : ಬಾಳೂರು ಗ್ರಾಪಂ ಮಾಜಿ ಆಧ್ಯಕ್ಷ ಹೆಚ್.ಎಸ್.ಕೃಷ್ಣಮೂರ್ತಿ ಗೌಡ

ರಿಪ್ಪನ್‌ಪೇಟೆ;- ಇತ್ತೀಚೆಗೆ ಕಾಂಗ್ರೇಸ್ ಪಕ್ಷದ ಮುಖಂಡರು ನಮ್ಮ ಮನೆಗೆ ಭೇಟಿ ನೀಡಿ ನನ್ನನ್ನು ಕಾಂಗ್ರೇಸ್ ಪಕ್ಷ ಸೇರ್ಪಡೆಯಾಗುವಂತೆ ಒತ್ತಾಯಿಸಿದರು ಅದರೆ ನಾನು ಬಿಜೆಪಿಯ ತತ್ವಸಿದ್ದಾಂತ ಮತ್ತು ಕ್ಷೇತ್ರದ ಶಾಸಕ ಹರತಾಳು ಹಾಲಪ್ಪನವರ ಆಭಿವೃದ್ದಿ ಕಾರ್ಯಗಳನ್ನು ಮೆಚ್ಚಿಕೊಳ್ಳುವುದರೊಂದಿಗೆ ಅವರ ಆಭಿಮಾನಿಯಾಗಿರುವ ನಾನು ಬಿಜೆಪಿ ಪಕ್ಷವನ್ನು ಬಿಟ್ಟು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ ಎಂದು ಬಾಳೂರು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹೆಚ್.ಎಸ್.ಕೃಷ್ಣಮೂರ್ತಿಗೌಡ್ರು  ಸ್ಪಷ್ಟ ಪಡಿಸಿದ್ದಾರೆ.




ಮಾದ್ಯಮದವರೊಂದಿಗೆ ಮಾತನಾಡಿ ಕೆಲವರು ನಾನು ಕಾಂಗ್ರೇಸ್ ಪಕ್ಷ ಸೇರಿದ್ದಾರೆಂದು ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆಂದು ತಿಳಿದು ನಾನು ಬಹಿರಂಗವಾಗಿಯೇ ಪಕ್ಷವನ್ನು ಬಿಡದೇ ಶಾಸಕರ ಮತ್ತು ಬಿಜೆಪಿ ಪರವಾಗಿ
ಪ್ರಚಾರದಲ್ಲಿ ತೊಡಗಿದ್ದೇನೆಂದು ಪತ್ರಿಕಾ ಹೇಳಿಕೆಯ ಮೂಲಕ ಸ್ಪಷ್ಟನೆ ನೀಡಿ ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದರು.


ಇತ್ತೀಚೆಗೆ ಕೃಷ್ಣಮೂರ್ತಿ ಗೌಡ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ಹಿನ್ನಲೆಯಲ್ಲಿ ಕೃಷ್ಣಮೂರ್ತಿ ಗೌಡ ಮಾದ್ಯಮಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ.



Leave a Reply

Your email address will not be published. Required fields are marked *