w
Headlines
Home » ಹೊಂಬುಜ : ಶ್ರವಣಬೆಳಗೊಳದ ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರಿಗೆ ಶ್ರದ್ಧಾಂಜಲಿ|hombuja

ಹೊಂಬುಜ : ಶ್ರವಣಬೆಳಗೊಳದ ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರಿಗೆ ಶ್ರದ್ಧಾಂಜಲಿ|hombuja

ಶ್ರವಣಬೆಳಗೊಳದ ಪರಮಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರಿಗೆ 
ಶ್ರದ್ಧಾಂಜಲಿಯ ನುಡಿನಮನಗಳು

ಆಧುನಿಕ ಬೆಳಗೊಳದ ಶಿಲ್ಪಿ, ಅತಿಶಯ ಶ್ರೀಕ್ಷೇತ್ರ ಶ್ರವಣಬೆಳಗೊಳದ ಪರಮಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು 54 ವರ್ಷ ಜನಸಮುದಾಯ ಹಾಗೂ ಶ್ರೀಮಠವನ್ನು ಮುನ್ನಡೆಸಿದ ಪ್ರಾತಃ ಸ್ಮರಣೀಯರು ಹಾಗೂ ಮಾರ್ಗದರ್ಶಕರೂ ಆಗಿದ್ದ ಅವರ ನೇತೃತ್ವವನ್ನು ಕಳೆದುಕೊಂಡ ನಮ್ಮ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. 


ಪೂಜ್ಯರು ತಮ್ಮ ಬಾಲ್ಯ ಜೀವನದ ವಿದ್ಯಾಭ್ಯಾಸವನ್ನು ಶ್ರೀಕ್ಷೇತ್ರ ಹೊಂಬುಜದ ಶ್ರೀಮಠದ ಗುರುಕುಲದಲ್ಲಿ ಮಾಡಿದ್ದರು ಎಂಬುದು ನಮ್ಮೆಲ್ಲರ ಹೆಮ್ಮೆಯ ಸಂಗತಿಯಾಗಿದೆ. ಅಲ್ಲದೇ ನಮ್ಮ ಮಠದ ಪೀಠಾಧಿಕಾರಿಯಾಗಿರುವ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ದೀಕ್ಷಾ ಗುರುಗಳು ಸಹ. ಹೀಗೆ ಹಲವಾರು ಕ್ಷೇತ್ರಗಳಿಗೆ ತಮ್ಮ ಶಿಷ್ಯಂದಿರನ್ನು ತಯಾರು ಮಾಡಿ ಕೊಟ್ಟಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. 


ಹೊಂಬುಜ ಸಮಸ್ತ ಜೈನ ಸಮಾಜ ಬಾಂಧವರು, ಶ್ರೀಮಠದ ಸಿಬ್ಬಂದಿಗಳು ಹಾಗೂ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ನಮ್ಮನೆಲ್ಲ ಅಗಲಿದ ಬೆಳಗೊಳದ ಬೆಳಕಾಗಿದ್ದ ದಿವ್ಯ ಚೇತನಕ್ಕೆ ನಮ್ಮೆಲ್ಲರ ಗೌರವ ಪೂರ್ವಕ ವಿನಯಾಂಜಲಿಯನ್ನು ಶ್ರೀ ಹೊಂಬುಜ ಜೈನ ಮಠದಲ್ಲಿ ದಿನಾಂಕ 25-03-2023ರ ಶನಿವಾರದಂದು ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ಹೊಂಬುಜ ಜೈನ ಸಮಾಜದ ಶ್ರೀ ಜಿ. ಮಂಜಪ್ಪನವರು, ಶ್ರೀಮಠದ ಆಡಳಿತಾಧಿಕಾರಿ ಶ್ರೀ ಸಿ.ಡಿ. ಅಶೋಕ ಕುಮಾರ್‌ರವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.