ರಿಪ್ಪನ್ ಪೇಟೆ : ಮೃತ ಯೋಧ ಸಂದೀಪ್ ಮನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ – ಕುಟುಂಬಕ್ಕೆ ಸಾಂತ್ವನ|araga

ರಿಪ್ಪನ್ ಪೇಟೆಯ ಮೃತ ಯೋಧನ ಮನೆಗೆ ಗೃಹ ಸಚಿವ  ಆರಗ ಜ್ಞಾನೇಂದ್ರ ಭೇಟಿ – ಕುಟುಂಬಕ್ಕೆ ಸಾಂತ್ವನ 

ರಿಪ್ಪನ್ ಪೇಟೆ :ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ಯೋಧ ಸಂದೀಪ್ ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್ ವಿಭಾಗದಲ್ಲಿ ಇಂದು ಕರ್ತವ್ಯದಲ್ಲಿದ್ದಾಗ ಮೃತಪಟ್ಟಿದ್ದಾರೆ.




ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತಿದ್ದ ಪಟ್ಟಣದ ಶಬರೀಶನಗರದ ನಿವಾಸಿ ಸಂದೀಪ್(27) ಮಣಿಪುರದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಮೃತಪಟ್ಟ  ಯೋಧನ ಮನೆಗೆ ಗೃಹಸಚಿವ ಆರಗ  ಜ್ಞಾನೇಂದ್ರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.


ನಂತರ ಮಾದ್ಯಮದೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ ದೇಶ ಸೇವೆಯನ್ನು ಮಾಡುವ ಸದುದ್ದೇಶ ದಿಂದ ಗ್ರಾಮೀಣ ಪ್ರದೇಶದ ಯುವಕನೂಬ್ಬ ಸೈನಕ್ಕೆ ಸೇರಿ  ಹಗಲಿರುಳು  ದೇಶದ ಜನರ ರಕ್ಷಣೆಗಾಗಿ ಕಾಯಕವನ್ನು ಮಾಡುತಿದ್ದದ್ದು ಹೆಮ್ಮೆಯ ಸಂಗತಿಯಾಗಿತ್ತು,ಇಂದು ಅವರ ಅಕಾಲಿಕ ಮರಣ ನನಗೆ ಅತೀವ ನೋವುಂಟು ಮಾಡಿದೆ,ಸೈನ್ಯಕ್ಕಾಗಿ ತುಡಿಯುತಿದ್ದ ಸಂದೀಪ್ ನ ಅಕಾಲಿಕ ಮೃತ್ಯು ನಮ್ಮ ದೇಶಕ್ಕೆ ಭರಿಸಲಾಗದ ನಷ್ಟವಾಗಿದೆ ಎಂದರು.




ಪಾರ್ಥಿವ ಶರೀರವನ್ನು ಮಣಿಪುರದಿಂದ ಊರಿಗೆ ತರಲು ಸರಕಾರದಿಂದ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು, ಈಗಾಗಲೇ ಈ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಲಾಗಿದೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ. ಕೆ.ರಾವ್  ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಎಂ.ಬಿ.ಮಂಜುನಾಥ್. ಮುಖಂಡರುಗಳಾದ ಕಗ್ಗಲಿ ಲಿಂಗಪ್ಪ, ಆರ್ ಟಿ ಗೋಪಾಲ್. ಸುಧೀಂದ್ರ ಪೂಜಾರಿ. ಎನ್. ಸತೀಶ್. ಪಿ ಸುಧೀರ್. ಇನ್ನಿತರರಿದ್ದರು.



Leave a Reply

Your email address will not be published. Required fields are marked *