POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಶ್ರೀಗಂಧ ಮರ ಅಕ್ರಮ ಕಡಿತಲೆ – ಆರೋಪಿ ಬಂಧನ , 39 ಕೆ ಜಿ ಶ್ರೀಗಂಧ ವಶಕ್ಕೆ.!

10000132002913096112829726827 1536x879

ಹೊಸನಗರ : ಹೊಸನಗರ ವಲಯದ ಅಕ್ರಮವಾಗಿ ಶ್ರೀಗಂಧಮರ ಮರಗಳನ್ನು ಕಡಿದಿದ್ದ ಆರೋಪಿಯನ್ನು ಬಂಧಿಸಿ, ಪ್ರಕರಣದಲ್ಲಿ ಬಂಧಿಸಲಾಗಿದೆ ಭಾಗಿಯಾಗಿದ್ದ ಇನ್ನೊಬ್ಬ ಆರೋಪಿ ತಪ್ಪಿಸಿಕೊಂಡಿದ್ದಾನೆ.

ಇಂದು ಅರಣ್ಯ ಸಂಚಾರಿ ದಳದ ನಿಖರ ಮಾಹಿತಿಯು ಹೊಸನಗರ ವಲಯದ ಕಾರ್ಯಾಚರಣೆಯನ್ನು ನಡೆಸಿ ಕಳ್ಳರಿಂದ 39.300 ಕೆ.ಜಿ. ಶ್ರೀಗಂಧವನ್ನು ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ದಯಾಕುಮಾರ ಅಲಿಯಾಸ್ ದಯಾನಂದ್ ಎಂಬಾತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಕೌಶಿಕ್ ಎಂಬಾತನು ತಪ್ಪಿಸಿಕೊಂಡಿದ್ದಾನೆ. ಆತನ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಕಾರ್ಯಚರಣೆಯಲ್ಲಿ ಪೊಲೀಸ್ ಅರಣ್ಯ ಸಂಚಾರಿದಳದ ಪಿಎಸ್ಐ ವಿನಾಯಕ ಕೆ ಮತ್ತು ಸಿಬ್ಬಂದಿ ಹಾಗೂ ಹೊಸನಗರ ವಲಯದ ವಲಯ ಅರಣ್ಯಾಧಿಕಾರಿಗಳಾದ. ಅನಿಲ್ ಕುಮಾರ್ ಎಸ್. ಮಂಜುನಾಥ, ಉಪ ವಲಯ ಅರಣ್ಯಾಧಿಕಾರಿ, ಶ್ರೀ ಭರತ್ ಕುಮಾರ್ ಗಸ್ತು ಅರಣ್ಯ ಪಾಲಕ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.