ಕರ್ನಾಟಕ ರಾಜ್ಯದ 2022ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಗನ್ ಮ್ಯಾನ್ ಜೈಜಗದೀಶ್ ಸೇರಿದಂತೆ ಶಿವಮೊಗ್ಗ ಜಿಲ್ಲೆಯಿಂದ ಮೂವರು ಆಯ್ಕೆಯಾಗಿದ್ದಾರೆ.
2022 ನೇ ಸಾಲಿನ ಮುಖ್ಯಮಂತ್ರಿ ಪದಕ ಜಿಲ್ಲೆಯಲ್ಲಿ ಮೂವರಿಗೆ ಲಭಿಸಿದೆ. ಪೊಲೀಸ್ ಇಲಾಖೆಯಿಂದ ಪ್ರತಿ ವರ್ಷ ಕೊಡುವ ಮುಖ್ಯಮಂತ್ರಿಗಳ ಪದಕ ದೊಡ್ಡಪೇಟೆ ಪೊಲೀಸ್ ಠಾಣೆಯ ಪಿಐ ಅಂಜನ್ ಕುಮಾರ್, ಆಗುಂಬೆ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಕೆ.ಶಿವಕುಮಾರ್, ಡಿಎಆರ್ ನ ಸಿಬ್ಬಂದಿ ಜೈಜಗದೀಶ್ ಗೆ ಲಭಿಸಿದೆ.
ಮುಖ್ಯಮಂತ್ರಿ ಪದಕವನ್ನ ನೀಡುವ ಮೂಲಕ ಇಲಾಖೆಯ ಸಿಬ್ಬಂದಿಗಳಿಗೆ ಮತ್ತು ಅಧಿಕಾರಿಗಳಿಗೆ ಪ್ರೋತ್ಸಾಹ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ.
100 ಜನ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪದಕ ಘೋಷಣೆ ಆಗಿದೆ. ಇದರಲ್ಲಿ ಮೂವರು ಇತರೆ ಜಿಲ್ಲೆಯ ಸಿಬ್ವಂದಿ ಮತ್ತು ಅಧಿಕಾರಿಗಳಿಗೆ ತಡೆ ಹಿಡಿದು 97 ಜನರನ್ನ ಘೋಷಿಸಲಾಗಿದೆ. ಇದರಲ್ಲಿ ಜಿಲ್ಲೆಯ ಮೂವರಿಗೆ ಪದಕ ದೊರೆತಿದೆ.