ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಶಾಸಕ ಹರತಾಳು ಹಾಲಪ್ಪ ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೆ ಬಿಗ್ ಶಾಕ್ ನೀಡಿದ್ದು ಮಾಜಿ ಗ್ರಾಪಂ ಸದಸ್ಯೆ ಸೇರಿದಂತೆ ಅನೇಕ ಮುಖಂಡರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ರಿಪ್ಪನ್‌ಪೇಟೆ ಶಬರೀಶನಗರದ ಕಾಂಗ್ರೆಸ್ ಮುಖಂಡರಾಗಿದ್ದ ಮಂಜನಾಯ್ಕ್ ಮತು ಮಾಜಿ ಗ್ರಾಪಂ ಸದಸ್ಯರಾದ ಗಿರಿಜಾ ಎಂ ನಾಯ್ಕ್ ರವರು ಇಂದು ಶಾಸಕರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಮಳವಳ್ಳಿ ಗ್ರಾಮದ PLD ಬ್ಯಾಂಕ್ ನಿರ್ದೇಶಕರು ಹಾಗೂ ಜೆಡಿಎಸ್ ಮುಖಂಡರಾಗಿದ್ದ ಗೋಪಾಲಣ್ಣ ಹಾಗೂ ಅವರ ಬೆಂಬಲಿಗರಾದ ರಮೇಶ್, ಕುಮಾರ್, ಉಮಾಪತಿ, ಸೋಮಶೇಖರ್, ಮಹೇಶ್, ಪ್ರೇಮರಾಜ್, ಅರವಿಂದ್, ಸಚಿನ್, ಪ್ರಶಾಂತ್, ಯಶವಂತ್, ವೀರೇಶ್, ರಾಜು ಕಾರ್ತಿಕ್ ಮತ್ತಿತರರು ಕಾಂಗ್ರೆಸ್ ಹಾಗೂ ಜೆ.ಡಿ.ಎಸ್ ತೊರೆದು ಶಾಸಕರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು.
ಈ ಸಂಧರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಮಂಜುಳಾ ಕೆ ರಾವ್ ,ಮುಖಂಡರುಗಳಾದ ಆರ್ ಟಿ ಗೋಪಾಲ್ ,ವೀರೇಶ್ ಆಲುವಳ್ಳಿ ,ಎಂ ಬಿ ಮಂಜುನಾಥ್ ,ಆನಂದ್ ಮೆಣಸೆ, ನಾಗರಾಜ್ ಶೆಟ್ಟಿ ,ನಾಗರತ್ನಮ್ಮ , ಸುಧೀಂದ್ರ ಪೂಜಾರಿ,ಮಲ್ಲಿಕಾರ್ಜುನ್ ,ನಿರೂಪ್ ಕುಮಾರ್ ,ಕೇತಾರ್ಜಿರಾವ್ ಹಾಗೂ ಇನ್ನಿತರರಿದ್ದರು.