ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ‌ ನರೇಂದ್ರ ಮೋದಿ – ಬಿಎಸ್ ವೈ ಗೆ ಹಸಿರು ಶಾಲು ಹೊದಿಸಿ ವಿಶೇಷ ಸನ್ಮಾನ ಮಾಡಿದ ಮೋದಿ|modi


ಶಿವಮೊಗ್ಗ : ಪ್ರಧಾನಿ ನರೇಂದ್ರ ಮೋದಿ ರವರು ಸೋಗಾನೆಯ ನೂತನ ವಿಮಾನ ನಿಲ್ದಾಣದೊಂದಿಗೆ​ ವಿವಿಧ ಅಭಿವೃದ್ಧಿ ಕಾರ್ಯಗಳಿಗೂ ಚಾಲನೆ ನೀಡಿದ್ದಾರೆ. 7,165 ಕೋಟಿ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದರು.


995 ಕೋಟಿ ವೆಚ್ಚದ 96 ಕಿ.ಮೀ. ಉದ್ದದ ರೈಲು ಮಾರ್ಗಕ್ಕೆ ಅಡಿಗಲ್ಲು ಹಾಗೂ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗಕ್ಕೆ ಶಂಕುಸ್ಥಾಪನೆ , 105 ಕೋಟಿ ವೆಚ್ಚದಲ್ಲಿ ಕೋಟೆಗಂಗೂರಿನಲ್ಲಿ ರೈಲ್ವೇ ಕೋಚಿಂಗ್ ಡಿಪೋ, 953 ಕೋಟಿ ಮೊತ್ತದ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದಾರೆ.



66.44 ಕೋಟಿ ವೆಚ್ಚದ ಬೈಂದೂರು-ರಾಣೆಬೆನ್ನೂರು ರಸ್ತೆ ಬೈಪಾಸ್, 96.20 ಕೋಟಿ ವೆಚ್ಚದಲ್ಲಿ ತೀರ್ಥಹಳ್ಳಿ-ಮಲ್ಪೆ ದ್ವಿಪಥ ರಸ್ತೆ ಅಗಲೀಕರಣ ಮತ್ತು ಶಿವಮೊಗ್ಗ-ಮಂಗಳೂರು ರಸ್ತೆ ಭಾರತೀಪುರ ಬಳಿ ರಸ್ತೆ ನಿರ್ಮಾಣ, 896.16 ಕೋಟಿ ವೆಚ್ಚದ 44 ಸ್ಮಾರ್ಟ್‍ಸಿಟಿ ಯೋಜನೆಗಳ ಉದ್ಘಾಟನೆ ಮಾಡಿದರು.

 45 ಕೋಟಿ ವೆಚ್ಚದ ಶಿಮುಲ್​ ಹಾಲು, ಮೊಸರು ಮತ್ತು ಮಜ್ಜಿಗೆ ಪ್ಯಾಕಿಂಗ್ ಘಟಕ , ಎಪಿಎಂಸಿ ಆವರಣದಲ್ಲಿ 8 ಕೋಟಿ ವೆಚ್ಚದ ಮ್ಯಾಮ್‍ಕೋಸ್‍ ಆಡಳಿತ ಕಚೇರಿ, ಮೇಗರವಳ್ಳಿ-ಆಗುಂಬೆವರೆಗೆ 96 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ನೂರಾರು ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮಾಡಿದ್ದಾರೆ.



ಬಿಎಸ್ ವೈ ಗೆ ಹಸಿರು ಶಾಲು ಹೊದಿಸಿ ವಿಶೇಷ ಸನ್ಮಾನ :


ಏರ್‌ಪೋರ್ಟ್‌ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪನವರಿಗೆ ಹಸಿರು ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. ಇದು ಯಡಿಯೂರಪ್ಪನವರ 80ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯ ವಿಶೇಷ ಉಡುಗೊರೆಯನ್ನು ನೀಡಿ ಗೌರವಿಸಲಾಗಿದೆ. ಇದೇ ವೇಳೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೂ ಪ್ರಧಾನಿ ಚಾಲನೆ ನೀಡಿದ್ದಾರೆ.



Leave a Reply

Your email address will not be published. Required fields are marked *