ಪ್ರಧಾನಿ ಮೋದಿಗೆ ಮನವಿ ನೀಡಲು ಬ್ಯಾರಿಕೇಡ್ ತಳ್ಳಿ ಮುನ್ನುಗ್ಗುತ್ತಿರುವ ವಿಎಸ್ ಐಎಲ್ ಹೋರಾಟಗಾರರು|vsil


ಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಗೆ ಕಾರ್ಖಾನೆ ಉಳಿಸುವಂತೆ ಮನವಿ ನೀಡಲೇಬೇಕು ಎಂದು ನಿರ್ಧರಿಸಿದ್ದ ಸಾವಿರಾರು ವಿಐಎಸ್ ಎಲ್ ಗುತ್ತಿಗೆ ನೌಕರರ ಕಾರ್ಯಕರ್ತರನ್ನು ಬಿಳಕಿ ಕ್ರಾಸ್ ಬಳಿ ಪೊಲೀಸರು ತಡೆದಿದ್ದಾರೆ.

ಪೊಲೀಸರು ತಡೆದರೂ ಗದ್ದೆಯಲ್ಲಿ ಎದ್ದು ಬಿದ್ದು ಓಡಿ ಶಿವಮೊಗ್ಗ ವಿಮಾನ ನಿಲ್ದಾಣದ ಕಡೆ ಹೋರಾಟಗಾರರು ತೆರಳುತಿದ್ದಾರೆ.

ಇಂದು ಬೆಳಗ್ಗಿನ ಜಾವವೇ ಸಂಘದ 40 ಕ್ಕೂ ಹೆಚ್ಚು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಇಂದು ಬೆಳಿಗ್ಗೆ ಭದ್ರಾವತಿ ಶಾಸಕ ಬಿ ಕೆ ಸಂಗಮೇಶ್ ನೇತೃತ್ವದಲ್ಲಿ ಬೈಕ್ ರ್ಯಾಲಿ ಮೂಲಕ ಹೊರಟ ನೌಕರರ ಸಂಘದ ಉಳಿದ ಕಾರ್ಯಕರ್ತರನ್ನು ಬಿಳಕಿ ಕ್ರಾಸ್ ಬಳಿ ತಡೆಯಲಾಗಿದೆ.

ಬ್ಯಾರಿಕೇಡ್ ನ್ನು ತಡೆದು ಮುನ್ನುಗ್ಗಲು ಯತ್ನಿಸಿದ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ತಿಕ್ಕಾಟ ನಡೆದಿದೆ. ಕೆಲ ಕಾರ್ಮಿಕರು ಗದ್ದೆಗಳಲ್ಲಿ ಓಡಿ ಹೋಗಿ ವಿಮಾನ ನಿಲ್ದಾಣದ ಉದ್ಘಾಟನೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾರೆ. ಬಿಳಿಕಿ ಕ್ರಾಸ್ ಬಳಿ ಪೊಲೀಸರು ತಡೆದರೂ ಪ್ರವಾಹದ ರೀತಿಯಲ್ಲಿ ಬಂದಿದ್ದ ಕಾರ್ಮಿಕರು ನುಗ್ಗಿ ಸಾಗಲು ಯತ್ನಿಸಿದ್ದಾರೆ.

Leave a Reply

Your email address will not be published. Required fields are marked *