ಶಿವಮೊಗ್ಗ ಪತ್ರಿಕಾ ರಂಗದಲ್ಲಿ ಸಂಚಲನ ಮೂಡಿಸಿದ್ದ ಜನವಾರ್ತೆ ಕನ್ನಡ ದಿನಪತ್ರಿಕೆಯ ಸಂಪಾದಕರಾದ ಜಿ.ಎಸ್. ನಾಗರಾಜ್ ನಿಧನರಾಗಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಅವರು ಸ್ಪಂದಿಸದೇ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ..
ಮುಂಗೋಪಿ, ಅಷ್ಟೇ ಮೃದು ಸ್ವಭಾವದ ನಾಗರಾಜ್ 1996 ರಲ್ಲಿ ಶಿವಮೊಗ್ಗ ಪತ್ರಿಕಾ ರಂಗದಲ್ಲಿ ಬದಲಾವಣೆ ತಂದು ಸಂಚಲನ ಮೂಡಿಸಿದ್ದ ಧೀಮಂತ ಪತ್ರಿಕಾ ಸಂಪಾದಕ ಹಾಗೂ ಸಂಸ್ಥಾಪಕರಾಗಿದ್ದರು. ಬಹುತೇಕ ಪತ್ರಕರ್ತರು ಇವರ ಗರಡಿಯಲ್ಲಿ ಬೆಳೆದುಬಂದಿದ್ದಾರೆ.
1996 ರಿಂದ 2016ರ ವರೆಗೆ ನಿರಂತರವಾಗಿ ಜನವಾರ್ತೆಯನ್ನ ನಡೆಸಿದರೂ ಮಧ್ಯದಲ್ಲಿ ಎರಡು ಮೂರು ವರ್ಷ ಪತ್ರಿಕೆ ಸ್ಥಗಿತವಾಗಿತ್ತು. ನಂತರ 2018 ರ ಆಜೂ ಬಾಜುವಿನಲ್ಲಿ ಪತ್ರಿಕೆ ಮತ್ತೆ ಆರಂಭಿಸಿದ್ದರು. ಆದರೆ ಅದೂ ಸಹ ಸುದೀರ್ಘವಾಗಿ ನಡೆಸಲು ಸಾಧ್ಯವಾಗಲಿಲ್ಲ.
ಅವರ ಅಂತ್ಯ ಕ್ರಿಯೆ ಸಂಜೆ 6 ರ ನಂತರ ನಡೆಯಲಿದೆ. ಇಂದು ಮಧ್ಯಾಹ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಶಿವಮೊಗ್ಗದಲ್ಲಿರುವ ರವೀಂದ್ರ ನಗರದ ಮನೆಗೆ ಅವರ ಪಾರ್ಥೀವ ಶರೀರವನ್ನ ಕರೆತರಲಾಗಿದೆ.
ಸಂಜೆಯ ವೇಳೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.