w
Headlines
Home » ಸೌಮ್ಯ ಪೆರ್ನಾಜೆಗೆ ಗಡಿನಾಡ ಧ್ವನಿ ” ಮಧು ಭೂಷಣ” ರಾಜ್ಯ ಪ್ರಶಸ್ತಿ ಪ್ರಧಾನ|award

ಸೌಮ್ಯ ಪೆರ್ನಾಜೆಗೆ ಗಡಿನಾಡ ಧ್ವನಿ ” ಮಧು ಭೂಷಣ” ರಾಜ್ಯ ಪ್ರಶಸ್ತಿ ಪ್ರಧಾನ|award

ಸೌಮ್ಯ ಪೆರ್ನಾಜೆಗೆ ಗಡಿನಾಡ ದ್ವನಿ ” ಮಧು ಭೂಷಣ”   ರಾಜ್ಯ ಪ್ರಶಸ್ತಿ ಪ್ರಧಾನ 

ಗಡಿನಾಡ ಧ್ವನಿ ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ (ರಿ) ಇದರ ಆರನೇ ಕರ್ನಾಟಕ ಗಡಿನಾಡ ಸಮ್ಮೇಳನದಲ್ಲಿ ಸೌಮ್ಯ ಪೆರ್ನಾಜೆ ರವರಿಗೆ ಮಧುಭೂಷಣ ರಾಜ್ಯ ಪ್ರಶಸ್ತಿ ಪ್ರಧಾನ  ಮಾಡಿರುತ್ತಾರೆ.


ಪ್ರಶಸ್ತಿ ಪ್ರಧಾನ ಮಹಾ ಸಮ್ಮೇಳನವು ಗಡಿನಾಡ ಪ್ರದೇಶವಾದ ಒಡ್ಯ ಸಹಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ 2023 (25) ಫೆಬ್ರವರಿ ರಂದು ನಡೆಯಿತು. ಮಿತ್ರಂಪಾಡಿ ಜಯರಾಮ್ ರೈ ಅಬುದಾಬಿ ಅವರು ಪ್ರಶಸ್ತಿ ಪ್ರಧಾನ ಮಾಡಿದರು. ಮಲಾರ್ ಜಯರಾಮ್ ರೈ ಸಮ್ಮೇಳನಾಧ್ಯಕ್ಷರು ದ.ಕ.ಜಿ ಸಾಹಿತ್ಯ ಪರಿಷತ್ ಪುತ್ತೂರು ಅಧ್ಯಕ್ಷರು  ಉಮೇಶ್ ನಾಯಕ್ , ಗಡಿನಾಡ ದ್ವನಿ ಅಧ್ಯಕ್ಷರು ಡಾ. ಹಾಜಿಎಸ್ ಅಬ್ಬುಬಕರ್ ಅರ್ಲಪದವು,  ಪ್ರ.ಕಾರ್ಯದರ್ಶಿ  ಈಶ್ವರ ಭಟ್ ಕಡಂದೇಲು , ಪ್ರಶಸ್ತಿ ವಿಜೇತ ಜೇನುತಜ್ಞ ಕುಮಾರ್ ಪೆರ್ನಾಜೆ , ಪಿ.ಜಿ ಶಂಕರ್ ನಾರಾಯಣ ಭಟ್ ದೈತೋಟ ,ಮಹಾಬಲೇಶ್ವರ  ಗಿಳಿಯಾಲು,ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರಗಳಲ್ಲಿ ನಾಡಿಗೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ನೀಡಲ್ಪಡುವ ರಾಜ್ಯ ಪ್ರಶಸ್ತಿಗೆ ವಿಶ್ವದಲ್ಲಿ ಪ್ರಪ್ರಥಮವಾಗಿ ಜೇನು ಗಡ್ಡ ತೋರಿಸಿಕೊಟ್ಟ ಸಾಧಕಿ ಮಹಿಳೆ ಜೇನು ಕೃಷಿ ವಿಶಿಷ್ಟ ಬರಹಗಳು ಕಲಾಪ್ರಿಯರು ಕಲಾ ಪೋಷಕರಾಗಿ ಗುರುತಿಸಿಕೊಂಡಿರುವ ಸೌಮ್ಯ ಪೆರ್ನಾಜೆ ಇವರನ್ನು ಈಗಾಗಲೇ ಈಶ್ವರಮಂಗಳದಲ್ಲಿ ಗ್ರಾಮದ ಸಾಹಿತ್ಯ ಸಂಭ್ರಮ ಮೂರನೇ ಸರಣಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. 

ಇವರು ಹವ್ಯಕ ರತ್ನ ರಾಷ್ಟ್ರೀಯ ಪುರಸ್ಕೃತ ಕುಮಾರ್  ಪೆರ್ನಾಜೆ  ಅವರ ಪತ್ನಿಯಾಗಿದ್ದು ಇಬ್ಬರು ಮಕ್ಕಳಾದ ನಂದನ್ ಕುಮಾರ್ , ಚಂದನ್ ಕುಮಾರ್ ಇದ್ದಾರೆ. ರಾಮಚಂದ್ರ ಭಟ್, ದೇವಕಿ ದಂಪತಿಗಳ ಸುಪುತ್ರಿಯಾದ ಇವರು ಇನ್ನಷ್ಟು ಹೆಚ್ಚಿನ ಸಾಧನೆಗೈಯಲಿ ಎಂದು ಪೋಸ್ಟ್ ಮ್ಯಾನ್ ಸುದ್ದಿಸಂಸ್ಥೆ ಆಶಿಸುತ್ತದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.