ಹೊಸನಗರ ತಾಲೂಕಿನ ನೂತನ ತಹಶೀಲ್ದಾರರಾಗಿ ಕೆ ಪುರಂದರ ಅವರನ್ನು ನೇಮಕ ಮಾಡಿ ಕರ್ನಾಟಕ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಕೆ ಪುರಂದರ ಅವರು ಪ್ರಸ್ತುತ ಉಡುಪಿ ಜಿಲ್ಲೆಯ ಹೆಬ್ರಿ ತಾಲುಕಿನ ತಹಶೀಲ್ದಾರ್(ಗೇಡ್ 1) ಆಗಿ ಕಾರ್ಯ ನಿರ್ವಹಿಸುತಿದ್ದು ಅವರನ್ನು ಹೊಸನಗರ ತಾಲೂಕ್ ವಿ ರಾಜೀವ್ ವರ್ಗಾವಣೆಯಿಂದ ತೆರವಾಗಿರುವ ಸ್ಥಾನಕ್ಕೆ ನಿಯುಕ್ತಿಗೊಳಿಸಲಾಗಿದೆ.
ಹೊಸನಗರ ತಾಲೂಕಿನ ತಹಶೀಲ್ದಾರ್ ರಾಜೀವ್ ವಿ.ಎಸ್ ಕೊಡಗು ಚುನಾವಣೆ ತಹಶೀಲ್ದಾರ್ ಆಗಿ ವರ್ಗಾವಣೆಗೊಂಡಿದ್ದ ಹಿನ್ನಲೆಯಲ್ಲಿ ಕೆ ಪುರಂದರ ಅವರನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
ವರ್ಗಾವಣೆಯಾಗಿ ಹಲವು ದಿನಗಳು ಕಳೆದಿದ್ದರೂ ವಿ ಎಸ್ ರಾಜೀವ್ ನೂತನ ತಹಶೀಲ್ದಾರ್ ಬರುವವರೆಗೂ ಕೆಲಸ ನಿರ್ವಹಿಸಿದ್ದರು .ಚುನಾವಣೆ ಹಿನ್ನಲೆಯಲ್ಲಿ ಈ ವರ್ಗಾವಣೆ ನಡೆದಿದ್ದವು.