SHIVAMOGGA | ವೈದ್ಯೆಯ ವಾಟ್ಸಪ್ ಹ್ಯಾಕ್ ಮಾಡಿ ಹಣ ವಂಚನೆ
ಶಿವಮೊಗ್ಗ: ವೈದ್ಯೆಯೊಬ್ಬರ ವಾಟ್ಸಪ್ ಹ್ಯಾಕ್ ಮಾಡಿ ವೈದ್ಯರೊಬ್ಬರ ಮೊಬೈಲ್‌ಗೆ ಮೆಸೇಜ್ ಕಳುಹಿಸಿ ೯೫,೦೦೦ ಹಣ ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
ಶಿವಮೊಗ್ಗದ ವೈದ್ಯೆಯೊಬ್ಬರ ವಾಟ್ಸಪ್ ನಂಬರ್ ಹ್ಯಾಕ್ ಮಾಡಿದ ದುಷ್ಕರ್ಮಿಗಳು ಹಣದ ತುರ್ತು ಅಗತ್ಯವಿದೆ ಎಂದು ಸಹೋದ್ಯೋಗಿಗೆ ಮೆಸೇಜ್ ಕಳುಹಿಸಿದ್ದರು. ಅದನ್ನು ನಂಬಿದ ಸಹೋದ್ಯೋಗಿ ಆ ವಾಟ್ಸಪ್ ಮೆಸೇಜ್‌ನಲ್ಲಿ ಕಳುಹಿಸಲಾಗಿದ್ದ ಮತ್ತೊಂದು ಮೊಬೈಲ್ ನಂಬರ್‌ಗೆ ಫೋನ್ ಪೇ ಮೂಲಕ ಎರಡು ಬಾರಿ ಒಟ್ಟು ೯೫,೦೦೦ ಹಣ ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸ್ವಲ್ಪ ಸಮಯದ ಬಳಿಕ ಇತರೆ ವೈದ್ಯರು ವೈದ್ಯೆಯ ವಾಟ್ಸಪ್ ನಂಬರ್ ಹ್ಯಾಕ್ ಆಗಿರುವ ವಿಷಯ ತಿಳಿಸಿದ್ದಾರೆ. ಹಣ ಕಳೆದುಕೊಂಡಿರುವ ಹಿನ್ನೆಲೆ ಸಹೋದ್ಯೋಗಿ ವೈದ್ಯ ಶಿವಮೊಗ್ಗದ ಸಿ.ಇ.ಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.