ನಿರ್ದೇಶಕರುಗಳು ಹಾಗೂ ಮುಖ್ಯಕಾರ್ಯ ನಿರ್ವಾಹಕರುಗಳು ಸಹಕಾರಿ ಸಂಸ್ಥೆಗಳ ಜ್ಞಾನದ ಆಸ್ತಿಯಾಗಬೇಕು – ಎ ಆರ್ ಪ್ರಸನ್ನ ಕುಮಾರ್|hombuja

ನಿರ್ದೇಶಕರುಗಳು ಹಾಗೂ ಮುಖ್ಯಕಾರ್ಯ ನಿರ್ವಾಹಕರುಗಳು ಸಹಕಾರಿ ಸಂಸ್ಥೆಗಳ ಜ್ಞಾನದ ಆಸ್ತಿಯಾಗಬೇಕು ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು ಇದರ ಉಪಾಧ್ಯಕ್ಷರಾದ ಎ.ಆರ್ ಪ್ರಸನ್ನಕುಮಾರ್ ಹೇಳಿದರು.

ಅವರು ಇಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮದ ಶ್ರೀಕ್ಷೇತ್ರ ಹೊಂಬುಜದಲ್ಲಿ ನಡೆದ ಸೌಹಾರ್ದ ಸಹಕಾರಿಗಳ ಆಡಳಿತ ಮಂಡಳಿ ನಿರ್ದೇಶಕರುಗಳಿಗೆ ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ ಎರಡು ದಿನದ “ಆಡಳಿತ ಪರಿಣಿತಿ ಅಭಿವೃದ್ಧಿ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಸಹಕಾರ ಸಂಸ್ಥೆಗಳ ನಿರ್ದೇಶಕರುಗಳು ಹಾಗೂ ಮುಖ್ಯಕಾರ್ಯನಿರ್ವಾಹಕರುಗಳು ತರಬೇತಿಯಿಂದ ಪಡೆದ ಜ್ಞಾನದ ಮೂಲಕ ತಮ್ಮ ಸಹಕಾರಿ ಸಂಸ್ಥೆಗಳ ಜ್ಞಾನದ ಆಸ್ತಿಯಾಗಿ ರೂಪುಗೊಳ್ಳಬೇಕೆಂದು ತಿಳಿಸಿದರು. 

ಸಂಯುಕ್ತ ಸಹಕಾರಿ ಹಾಗೂ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ ಇವರ ಸಂಯುಕ್ತ ಆಶ್ರಯದಲ್ಲಿ ನಡೆಸುತ್ತಿರುವ ಡಿಸಿಬಿಎಂ ಕೋರ್ಸ್ಗೆ ಸಹಕಾರಿಯ ಸಿಬ್ಬಂದಿಗಳು ಸೇರಿ ಸಹಕಾರ ಕ್ಷೇತ್ರ ಹೆಚ್ಚಿನ ಅರಿವನ್ನು ಪಡೆದು ಸಹಕಾರಿಯನ್ನು ಲಾಭದಾಯಕವಾಗಿ ಕಾರ್ಯನಿರ್ವಹಿಸಲಿ ಎಂದು ತಿಳಿಸಿದರು. ಸಹಕಾರಿಗಳಲ್ಲಿ ಸುಸ್ತಿಯಾದ ಸಾಲಗಳನ್ನು ಕಾನೂನು ಮೂಲಕ ವಸೂಲಿ ಮಾಡಿ ಸಹಕಾರಿಯನ್ನು ಲಾಭದಾಯಕವಾಗಿಸಲು ಕ್ರಮಕೈಗೊಳ್ಳಬೇಕೆಂದು ತಿಳಿಸಿದರು.

 ಸಹ್ಯಾದ್ರಿ ಸೌಹಾರ್ದ ಸಹಕಾರಿಗಳ ಒಕ್ಕೂಟ ನಿ., ಶಿವಮೊಗ್ಗದ ವತಿಯಿಂದ ಸಾಲ ವಸೂಲಾತಿಗೆ ಮಾರಾಟಾಧಿಕಾರಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ಮಾರಾಟಾಧಿಕಾರಿಯ ಸೇವೆಯನ್ನು ಜಿಲ್ಲೆಯ ಸೌಹಾರ್ದ ಸಹಕಾರಿಗಳು ಪಡೆದುಕೊಳ್ಳಬೇಕು,ಸಂಯುಕ್ತ ಸಹಕಾರಿಯು ಸದಸ್ಯ ಸಹಕಾರಿಗಳ ಅಧ್ಯಕ್ಷರು, ನಿರ್ದೇಶಕರುಗಳಿಗೆ ಹಾಗೂ ಸಿಬ್ಬಂದಿಗಳಿಗೆ ವಿಭಿನ್ನವಾದ ಸಹಕಾರ ಕ್ಷೇತ್ರದ ಕುರಿತು, ಹಣಕಾಸು ಕ್ಷೇತ್ರದ ಕುರಿತು ತರಬೇತಿಗಳನ್ನು ಆಯೋಜನೆ ಮಾಡುಲಾಗುತ್ತದೆ. ಈ ರೀತಿಯ ತರಬೇತಿಯ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು. 


ಇದೇ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ವತಿಯಿಂದ ತರಬೇತಿ ಕಾರ್ಯಾಗಾರಕ್ಕೆ ಸ್ಥಳಾವಕಾಶವನ್ನು ಕಲ್ಪಿಸಿದ ಶ್ರೀ ಪದ್ಮಾಂಬಾ ಪ್ರೌಢಶಾಲೆ, ಹುಂಚ, ಹೊಸನಗರ ಈ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಶಾಲಾ ಕೊಠಡಿಗೆ ಎರಡು ಗ್ರೀನ್ ಬೋರ್ಡ್ ನೆನಪಿನ ಕಾಣಿಕೆಯಾಗಿ ನೀಡಲಾಯಿತು.


ಸಮಾರೋಪ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಾದ  ಕೋಡಚಾದ್ರಿ ಅಡಿಕೆ ಸೌಹಾರ್ದದ ನಿರ್ದೇಶಕರಾದ ಜಗದೀಶ್ ಹೆಚ್ ಪಿ, ಭದ್ರಾ ಬಸವೇಶ್ವರ ಸೌಹಾರ್ದದ, ಯಡೇಹಳ್ಳಿ ಮುಖ್ಯ ಕಾರ್ಯನಿರ್ವಾಹಕರಾದ ಸುಮಾ ಕಿರಣ್‌ರವರು ರವರು ಎರಡು ದಿನದ ತರಬೇತಿಯ ಕುರಿತು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಈ ಸಮಾರೋಪ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಹಾಸ್ಯ ಕಲಾವಿದರಾದ  ವೈ ವಿ ಗುಂಡುರಾವ್‌ರವರು, ಸನ್ನದ್ದು ಲೆಕ್ಕಪರಿಶೋಧಕರಾದ  ಮಧುಕರ ಹೆಗಡೆಯವರು, ಸಹ್ಯಾದ್ರಿ ಒಕ್ಕೂಟದ ನಿರ್ದೇಶರಾದ  ಕಿರಣ್ ಜೆ ಪಿಯವರು, ಶಾಲೆಯ ಸಹ ಶಿಕ್ಷಕರಾದ ಶ್ರೀ ಪ್ರಶಾಂತ್‌ರವರು ಹಾಗೂ ಪ್ರಾಂತೀಯ ವ್ಯವಸ್ಥಾಪಕರಾದ ಶ್ರೀ ಸಂಜಯ್ ಕೋಟಕರ್‌ರವರು ಭಾಗವಹಿಸಿದ್ದರು.

ಎರಡು ದಿನದ ಕಾರ್ಯಕ್ರಮದ ನಿರ್ವಹಣೆಯನ್ನು ಮತ್ತು ವ್ಯವಸ್ಥೆಯನ್ನು ಸೌಹಾರ್ದ ಜಿಲ್ಲಾ ಸಂಯೋಜಕರಾದ ಶಶಿಕುಮಾರ್‌ರವರು ನಿರ್ವಹಿಸಿದರು. 

ಎರಡು ದಿನದ ತರಬೇತಿ ಕಾರ್ಯಾಗಾರದ ವಿಷಯಗಳು :  

ದಿನಾಂಕ 4-2-2023 ರಂದು ಮೊದಲ ಅವಧಿಯಲ್ಲಿ “ಸೌಹಾರ್ದ ಸಹಕಾರಿ ಕಾಯ್ದೆ 1997ರ ಮುಖ್ಯಾಂಶಗಳು ಹಾಗೂ ಆಶಯಗಳು ಮತ್ತು ಇತ್ತೀಚಿನ ತಿದ್ದುಪಡಿಗಳ ವಿಷಯ ಹಾಗೂ ಸಹಕಾರಿ ಆಡಳಿತ ಮಂಡಳಿ ಸಭೆ ಮತ್ತು ವಾರ್ಷಿಕ ಸಾಮಾನ್ಯ ಸಭೆ ನಡೆಸುವ ವಿಧಾನಗಳ ವಿಷಯದ ಕುರಿತು” ಸಂಪನ್ಮೂಲ ವ್ಯಕ್ತಿಯಾದ ಭಾಸ್ಕರ ಹೆಗಡೆ ಕಾಗೇರಿಯವರು ಉಪನ್ಯಾಸ ನೀಡಿದರು. 

ಮಧ್ಯಾಹ್ನದ ಅವಧಿಯಲ್ಲಿ “ಸಹಕಾರ ಸಂಸ್ಥೆಗಳನ್ನು ಉನ್ನತೀಕರಿಸುವಲ್ಲಿ ನಿರ್ದೇಶಕರ ಪಾತ್ರ” ವಿಷಯದ ಕುರಿತು ಸಹಕಾರ ಇಲಾಖೆಯ ಅಪರ ನಿಬಂಧಕರಾದ ಹೆಚ್ ಎಸ್ ನಾಗರಾಜಯ್ಯನವರು ಉಪನ್ಯಾಸ ನೀಡಿದರು. 

ನಂತರದ ಅವಧಿಯಲ್ಲಿ “ಜೀವನದ ಸಾಫಲ್ಯತೆ” ಕುರಿತು ಕಾರ್ಪೋರೇಟ್ ಟ್ರೆನರ್ ಆದ  ಡಾ.ಹರೀಶ್‌ರವರು ಉಪನ್ಯಾಸ ನೀಡಿದರು.

ದಿನಾಂಕ 5-2-2023 ರಂದು ಸಹಕಾರ ಸಂಸ್ಥೆಗಳ ಆರ್ಥಿಕ ಶಿಸ್ತು ನಿರ್ವಹಣೆಯಲ್ಲಿ ನಿರ್ದೇಶಕರುಗಳ ಪಾತ್ರ ಹಾಗೂ ಸೌಹಾರ್ದ ಸಹಕಾರಿಗಳಿಗೆ ಅನ್ವಯಿಸುವ ಕಾಯ್ದೆಗಳು ಎಂಬ ವಿಷಯದ ಕುರಿತು ಸನ್ನದ್ದು ಲೆಕ್ಕಪರಿಶೋಧಕರಾದ ಮಧುಕರ ಹೆಗಡೆಯವರು ಉಪನ್ಯಾಸ ನೀಡಿದರು. 

ಸಹಕಾರ ಕ್ಷೇತ್ರದ ಪ್ರಸಕ್ತ ವಿದ್ಯಮಾನಗಳುಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ನಿರ್ದೇಶಕರ ಪಾತ್ರದ ವಿಷಯ ಹಾಗೂ ಆಡಳಿತ ಮಂಡಳಿ ಸದಸ್ಯರ ಹಾಗೂ ಮುಖ್ಯಕಾರ್ಯನಿರ್ವಾಹಕರ ನಡುವಿನ ಆಂತರಿಕ ಸಂಬಂಧಗಳ ನಿರ್ವಹಣೆಯ ವಿಷಯದ ಕುರಿತು. ನಬಾರ್ಡ್ ನ ಉಪಪ್ರಧಾನ ವ್ಯವಸ್ಥಾಪಕರು ಹಾಗೂ ಹಾಸ್ಯ ಕಲಾವಿದರಾದ  ವೈ ವಿ ಗುಂಡುರಾವ್‌ರವರು ಉಪನ್ಯಾಸ ನೀಡಿದರು.

ಮೊದಲ ದಿನದ ತರಬೇತಿ ಶಿಬಿರದಲ್ಲಿ 42 ಜನ ಶಿಬಿರಾರ್ಥಿಗಳು ಹಾಗೂ ಎರಡನೇ ದಿನದ ತರಬೇತಿ ಶಿಬಿರದಲ್ಲಿ 54 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *