ಅಪರೂಪದ ವನ್ಯಜೀವಿ ಮಚ್ಚೆ ಗೂಬೆಗಳ ಅಕ್ರಮ ಮಾರಾಟಕ್ಕೆ ಯತ್ನ – ಮಾಲು ಸಮೇತ ಇಬ್ಬರ ಬಂಧನ
ಅಪರೂಪದದ ವನ್ಯಜೀವಿ ಮಚ್ಚೆ ಗೂಬೆಗಳ ಅಕ್ರಮ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು  ಮಾಲು ಸಮೇತ ಬಂಧಿಸಿರುವ ಘಟನೆ ಶಿವಮೊಗ್ಗ ತಾಲೂಕಿನ ಕಲ್ಲೂಪುರ ಗ್ರಾಮದಲ್ಲಿ ನಡೆದಿದೆ.
ಮಚ್ಚೆ ಗೂಬೆ(ಅಥೀನ್ ಬ್ಲೆವಿನ್ )ಯನ್ನು ಅಕ್ರಮ ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ಸಾಗರ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್  ಸಬ್ ಇನ್ಸ್ಪೆಕ್ಟರ್ ವಿನಾಯಕ ನೇತ್ರತ್ವದಲ್ಲಿ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ, 2 ಗೂಬೆಗಳನ್ನು  ರಕ್ಷಣೆ  ಮಾಡಿದ್ದಾರೆ.
1972ರ ವನ್ಯ ಜೀವಿ ಸಂರಕ್ಷಣಾ  ಕಾಯಿದೆಯ  ಪ್ರಕಾರ  ಆರೋಪಿಗಳ  ಮೇಲೆ ಪ್ರಕರಣ  ದಾಖಲಿಸಿ ನ್ಯಾಯಲಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು  ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಕಾರ್ಯಾಚರಣೆಯಲ್ಲಿ ಸಾಗರ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ  ಗಣೇಶ್,ಗಿರೀಶ್ ,ವಿಶ್ವನಾಥ, ಕೃಷ್ಣ , ದಿನೇಶ, ಮಹೇಶ್, ಮತ್ತು ಚೈತ್ರ ಪಾಲ್ಗೊಂಡಿದ್ದರು.
 
                         
                         
                         
                         
                         
                         
                         
                         
                         
                        
