ರಿಪ್ಪನ್ ಪೇಟೆ : ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಸಬ್ ಜೂನಿಯರ್ ವಾಲಿಬಾಲ್ ಪಂದ್ಯಾಟಕ್ಕೆ, ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ತಂಡದಲ್ಲಿ ರಿಪ್ಪನ್ ಪೇಟೆಯ ಯುವ ವಾಲಿಬಾಲ್ ಆಟಗಾರ ಸೂಫಿಯಾನ್ ಸ್ಥಾನ ಪಡೆದಿದ್ದಾರೆ.
ರಾಷ್ಟೀಯ ಮಟ್ಟದ ಸಬ್ ಜೂನಿಯರ್ ವಾಲಿಬಾಲ್ (16ವರ್ಷದೊಳಗಿನ ವಯೋಮಿತಿ ) ಪಂದ್ಯವು ಜನವರಿ 3 ರಿಂದ ಜನವರಿ 7 ರವರೆಗೆ ದೆಹಲಿಯಲ್ಲಿ ನಡೆಯಲಿದೆ.
ರಿಪ್ಪನ್ ಪೇಟೆಯ ಶ್ರೀರಾಮನಗರ ನಿವಾಸಿಗಳಾದ ಶೇಖಬ್ಬ ಹಾಗೂ ಸೈಫುನ್ನಿಸಾ ದಂಪತಿಗಳ ಪುತ್ರನಾದ ಸೂಫಿಯಾನ್ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ SSLC ವ್ಯಾಸಂಗ ಮಾಡುತಿದ್ದಾನೆ.
ಸುಫಿಯಾನ್ ರಿಪ್ಪನ್ ಪೇಟೆಯ ಸಿದ್ದಿ ವಿನಾಯಕ ವಾಲಿಬಾಲ್ ಕ್ಲಬ್ ತಂಡದ ಆಟಗಾರರಾಗಿದ್ದರು.
ಕರ್ನಾಟಕ ರಾಜ್ಯ ಪ್ರತಿನಿದಿಸುವ ಅವಕಾಶ ಪಡೆದಿರುವುದರಿಂದ ರಿಪ್ಪನ್ ಪೇಟೆ ಯ ಸಿದ್ದಿ ವಿನಾಯಕ ವಾಲಿಬಾಲ್ ಕ್ಲಬ್ ಹಾಗೂ ಇನ್ನಿತರ ಸಂಘ ಸಂಸ್ಥೆಗಳು ಯುವ ಪ್ರತಿಭೆಗೆ ಶುಭ ಕೋರಿವೆ.
ರಾಷ್ಟ್ರ ಮಟ್ಟದಲ್ಲಿ ಯುವ ಪ್ರತಿಭೆ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಿ ನಮ್ಮೂರಿಗೆ, ನಮ್ಮ ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತರುವಂತಾಗಲಿ ಎಂಬುವುದೇ ಪೋಸ್ಟ್ ಮ್ಯಾನ್ ನ್ಯೂಸ್ ಸುದ್ದಿ ಸಂಸ್ಥೆಯ ಆಶಯ.