Headlines

ಹೊಸನಗರದ ಮಾವಿನಕೊಪ್ಪ ಸರ್ಕಲ್ ನಲ್ಲಿ ಕಾರು ಡಿವೈಡರ್ ಗೆ ಡಿಕ್ಕಿ – ಇಬ್ಬರು ಗಂಭೀರ|accident

ಸಿಗಂದೂರಿನಿಂದ ಭೀಮಸಮುದ್ರಕ್ಕೆ ತೆರಳುತ್ತಿದ್ದ ಕಾರು ಡಿವೈಡರ್ ಡಿಕ್ಕಿ ಹೊಡೆದು ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ಪಟ್ಟಣದಲ್ಲಿ ತಡರಾತ್ರಿ ನಡೆದಿದೆ.




 ಪಟ್ಟಣದ ಮಾವಿನಕೊಪ್ಪ ಸರ್ಕಲ್ ನಲ್ಲಿ ಖಾಸಗಿ ಪ್ರವಾಸಿ ಬಸ್‌ನಿಂದ ಇಳಿದ ವ್ಯಕ್ತಿಯೊಬ್ಬ ಅಡ್ಡ ಬಂದ ಕಾರಣ, ಕಾರು ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ಕಾರು ಚಾಲಕನ ಸಹಿತ ಅಡ್ಡ ಬಂದ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ.




ತಾಲೂಕಿನ ಕಸಬಾ ಹೋಬಳಿ ಮಳವಳ್ಳಿ ವಾಸಿ ಶೇಖರ(45) ಕಾರಿಗೆ ಅಡ್ಡ ಬಂದ ವ್ಯಕ್ತಿ. ಚಿತ್ರದುರ್ಗ ಜಿಲ್ಲೆ ಭೀಮಸಮುದ್ರ ಮೂಲಕ ಕೆಎ-16-ಸಿ-9400 ಸ್ವಿಫ್ಟ್ ಕಾರು ಸಿಗಂದೂರು ದೇವಿ ದರ್ಶನ ಮಾಡಿ ವಾಪಸಾಗುವ ವೇಳೆ ಘಟನೆ ಸಂಭವಿಸಿದೆ.

ಕಾರು ಚಾಲಕ ಚಂದ್ರಪ್ಪ ಅವರ ತಲೆಗೆ ಪೆಟ್ಟಾಗಿದ್ದು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಆದರೆ, ಕಾರಿಗೆ ಅಡ್ಡಬಂದ ವ್ಯಕ್ತಿ ಶೇಖರ್ ತಲೆಗೆ ತೀವ್ರ ತರಹದ ಪೆಟ್ಟಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ರವಾನಿಸಲಾಗಿದೆ.

ಹೊಸನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.



Leave a Reply

Your email address will not be published. Required fields are marked *