ಆನಂದಪುರ : ಸಾಗರ ತಾಲೂಕಿನ ಆನಂದಪುರದ ಸಾಧನಾ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಕಲಾ ಹೆಗಡೆಗೆ ರಾಜ್ಯ ಮಟ್ಟದ ಚಿನ್ಮಯ ಜ್ಞಾನಿ ಪ್ರಶಸ್ತಿ ದೊರೆತಿದೆ.
ಮೈಸೂರಿನ ಶರಣು ವಿಶ್ವವಚನ ಪೌಂಡೇಶನ್ ವತಿಯಿಂದ ಭಾನುವಾರ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಜ್ಯದಲ್ಲಿ ವಿಶಿಷ್ಟ ಸಾಧನೆ ಮಾಡಿದ ಆಯ್ದ ಶಿಕ್ಷಕರಿಗೆ ಚಿನ್ಮಯ ಜ್ಞಾನಿ ಪ್ರಶಸ್ತಿ ಯನ್ನು ಪ್ರತಿ ವರ್ಷ ನೀಡಲಾಗುತ್ತಿದೆ. ಬಾನುವಾರ ಮೈಸೂರಿನ ನಟರಾಜ ಸಭಾಭವನದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಶಿಕ್ಷಕಿ ಕಲಾ ಹೆಗಡೆ ಇವರು ಬಹುಮುಖ ಪ್ರತಿಭಾ ಸಂಪನ್ನ ಶಿಕ್ಷಕಿ ಆಗಿದ್ದು ಅನೇಕ ಪರಿಸರ ಕವನ,ಕಥೆ ,ಲೇಖನ ಬರೆಯುತ್ತಿದ್ದು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಶಾಲೆಯಲ್ಲಿ ವಿಜ್ಞಾನ ಕಲಿಕೆ ಯನ್ನು ವಿದ್ಯಾರ್ಥಿಗಳಿಗೆ ಅರ್ಥೈಸುವ ದೃಷ್ಟಿಯಿಂದ ಶಾಲೆಯ ಪ್ರಯೋಗಾಲಯದಲ್ಲಿ ಅನೇಕ ನಾವಿನ್ಯಯುತ ವಿಜ್ಞಾನ ಪ್ರಯೋಗ ಮಾಡುವುದರ ಮೂಲಕ ವಿದ್ಯಾರ್ಥಿಗಳ ಪ್ರೀತಿಯ ಶಿಕ್ಷಕಿ ಎನಿಸಿರುತ್ತಾರೆ.
ಎರಡು ವರ್ಷಗಳ ಹಿಂದೆ ಕೋವಿಡ್ ಬಂದು ಭೌತಿಕ ತರಗತಿ ಸ್ಥಗಿತಗೊಂಡಿದ್ದ ಸಮಯದಲ್ಲಿ ಡಿ. ಎಸ್. ಇ. ಆರ್ . ಟಿ ಕಡೆಯಿಂದ ಆಯೋಜನೆಗೊಂಡ ಇ- ಕಲಿಕಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು 6 ಮತ್ತು 7ನೇ ತರಗತಿಯ ವಿಜ್ಞಾನ ವಿಷಯದ 10 ಅವಧಿಯನ್ನು ಸಂವೇದ ಪಾಠ ನೀಡಿದ್ದು ಚಂದನ ಟಿವಿ ಯಲ್ಲಿ ಪ್ರಸಾರ ವಾಗಿತ್ತು.ಈ ಸಾಧನೆ ಮಾಡಿದ ಶಿವಮೊಗ್ಗ ಜಿಲ್ಲೆಯ ಏಕೈಕ ಶಿಕ್ಷಕಿಯಾಗಿ ಶ್ಲಾಘನೆ ಪಡೆದಿದ್ದರು.ಇವರ ಬಹುಮುಖ ಪ್ರತಿಭೆ ಗುರ್ತಿಸಿ ಶರಣು ವಿಶ್ವ ಪೌಂಡೇಶನ್ ಚಿನ್ಮಯ ಜ್ಞಾನಿ ಪ್ರಶಸ್ತಿ ನೀಡಿ ಗೌರವಿಸಿದೆ.