ಆನಂದಪುರ ವಲಯ ಅರಣ್ಯದ ಚೋರಡಿ ತುಪ್ಪೂರು ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚಿದೆ.
ಅದೇ ರೀತಿ ವನ್ಯ ಪ್ರಾಣಿಗಳ ಭೇಟೆ ಕೂಡ ಅವ್ಯಾಹತವಾಗಿ ನಡೆಯುತ್ತಿದೆ.
ಜಮೀನಿಗೆ ಲಗ್ಗೆ ಇಡುವ ಕಾಡುಹಂದಿಗಳ ಬೇಟೆಗೆ ಉರುಳು ಹಾಕುವುದು, ಎಲೆಕ್ಟ್ರಿಕ್ ಕರೆಂಟ್ ಕೊಡುವುದು ಸಾಮಾನ್ಯ ಎಂಬಂತಾಗಿದೆ.
ಇದಕ್ಕೆ ಪೂರಕ ಎಂಬಂತೆ, ಆನಂದಪುರ ರೇಂಜ್ ನ ಚೋರಡಿ ಸಮೀಪದ ಕೋಣೆಹೊಸೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಿಡಿಗೇಡಿಗಳು ಹಾಕಿದ ಉರುಳಿಗೆ ಸಿಲುಕಿ ಚಿರತೆಯೊಂದು ಒದ್ದಾಡಿ ಪ್ರಾಣಬಿಟ್ಟಿದೆ.
ಸುಮಾರು 5 ರಿಂದ 6 ವರ್ಷ ಪ್ರಾಯದ ಗಂಡು ಚಿರತೆ ಪ್ರಾಣ ಕಳೆದುಕೊಂಡಿದೆ. ಮಂಗಳವಾರ ಬೆಳಿಗ್ಗೆ ದನ ಹೊಡೆದುಕೊಂಡು ಹೋಗುವ ಸ್ಥಳೀಯರು ಅರಣ್ಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಅರಣ್ಯ ಇಲಾಖೆಯವರು ಅದನ್ನ ರಕ್ಷಣೆ ಮಾಡುವುದರೊಳಗೆ ಚಿರತೆ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.
ಬಳಿಕ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿ, ಕಾಡಿನಲ್ಲಿ ಶವವನ್ನು ನ್ಯಾಯಾಲಯದ ಅನುಮತಿ ಪಡೆದು ದಹನ ಮಾಡಲಾಗಿದೆ. ಚಿರತೆ ಎಲ್ಲಿ ಉರುಳಿಗೆ ಸಿಲುಕಿದೆ ಎಂಬುದು ಪ್ರಶ್ನೆ ಉದ್ಭವಿಸಿದೆ. ಯಾರು ಕಾಡು ಪ್ರಾಣಿಗೆ ಉರುಳಿ ಹಾಕಿದ್ದಾರೆ ಎಂಬುದು ಸತ್ಯ ಹೊರಬರಬೇಕಿದೆ.
ಸ್ಥಳಕ್ಕೆ ಸಾಗರ ಎಸಿವ್ ಶ್ರೀಧರ್, ವಲಯ ಅರಣ್ಯಾಕಾರಿ ಅರವಿಂದ್, ಡಿವೈಆರ್ವ್ಒ ದೀಪಕ್ಸಿಂಗ್, ಸೋಮಶೇಖರ್, ಅಶೋಕ್, ಮುಬಾರಕ್ ಬಾಷಾ, ಗಾರ್ಡ್ಗಳಾದ ಬಸವರಾಜ, ಮಂಜುನಾಥ ಮಲ್ಲಾದೊರೆ, ಗ್ರಾಪಂ ಸದಸ್ಯ ಸುದರ್ಶನ ಹಾಜರಿದ್ದರು. ಚಿರತೆ ಸಾವು ಸಂಬಂಧ ಅರಣ್ಯ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.