ಹೊಸನಗರ : ಒಕ್ಕಲು ಮಾಡುವಾಗ ಮಿಷನ್ ಗೆ ಸಿಲುಕಿ ರೈತನ ಕೈ ತುಂಡಾಗಿದೆ. ಕೂಡಲೆ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಹೊಸನಗರ ತಾಲೂಕು ದೇವಗಂಗೆ ಗ್ರಾಮದ ರೈತ ವಿಶ್ವಾನಾಥ್ ಅವರ ಬಲಗೈ ತುಂಡಾಗಿದೆ. ಗ್ರಾಮದ ಮಹೇಶ ಗೌಡ ಎಂಬುವವರ ಜಮೀನಿನಲ್ಲಿ ಭತ್ತದ ಒಕ್ಕಲು ಮಾಡಲಾಗುತ್ತಿತ್ತು. ಈ ವೇಳೆ ವಿಶ್ವನಾಥ್ ಅವರ ಬಲಗೈ ಒಕ್ಕಲು ಯಂತ್ರಕ್ಕೆ ಸಿಲುಕಿ ತುಂಡಾಗಿದೆ.
ತಕ್ಷಣ ವಿಶ್ವನಾಥ್ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಪ್ರಾಥಮಿಕ ಚಿಕಿತ್ಸೆ ಬಳಿಕ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆ ಕರೆದೊಯ್ಯಲಾಯಿತು. ಆದರೆ ಕೈ ಜೋಡಿಸಲು ಅಸಾಧ್ಯ ಎಂದು ವೈದ್ಯರು ತಿಳಿಸಿದ್ದಾರೆ.