ರಿಪ್ಪನ್‌ಪೇಟೆ : ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಹಾಗೂ ಅರಣ್ಯ ವಿಚಕ್ಷಣದಳದ ಪೊಲೀಸರು ಜಂಟಿ ದಾಳಿ ಮಾಡಿ ಲಾರಿ ಸಹಿತ ಅಕ್ರಮ ಕಡತಲೆ ಮಾಡಿದ್ದ ಅಕೇಶಿಯ ತುಂಡುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಹುಂಚ ಹೋಬಳಿ ಹುಳಿಗದ್ದೆ ಗ್ರಾಮದ ಸ.ನಂ. 43ರ ಪೋಡಿ ಕಾಣದ ಜಮೀನಿನಲ್ಲಿ ಬೆಳೆದಿದ್ದ ಅಕೇಶಿಯ ಪಲ್ಪ್ ತುಂಡುಗಳನ್ನು ಅಕ್ರಮವಾಗಿ ಕಡತಲೆ ಮಾಡಿ ಲಾರಿ ಮೂಲಕ ಸಾಗಾಟಕ್ಕೆ ಯತ್ನಿಸುತ್ತಿದ್ದ ವೇಳೆ ದಾಳಿ ನಡೆದಿದೆ.
ಅರಣ್ಯ ಗುತ್ತಿಗೆದಾರ ರವಿ ಬಿನ್ ಷಣ್ಮುಖಪ್ಪ ಎಂಬಾತ ಅಕ್ರಮ ಕಡತಲೆ ಮಾಡಿದ್ದು, ಅಕೇಶಿಯ ಪಲ್ಪ್ ಗಳ ಮೊತ್ತ ರೂ 20 ಸಾವಿರ ಎಂದು ಅಂದಾಜಿಸಲಾಗಿದೆ. ಕೃತ್ಯಗೆ ಬಳಸಿದ ಲಾರಿ ಕೆಎ-22-ಎ-8262 ವಶಕ್ಕೆ ಪಡೆದು ಅರಣ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಲಯ ಅರಣ್ಯ ಅಧಿಕಾರಿ ಎಂ.ರಾಘವೇಂದ್ರ ಮಾರ್ಗದರ್ಶನದಲ್ಲಿ ದಾಳಿ ನಡೆದಿದ್ದು, ಪೊಲೀಸ್ ಅರಣ್ಯ ವಿಚಕ್ಷಣದಳದ ಪಿಎಸ್‌ಐ ವಿನಾಯಕ್, ಹುಂಚ ಉಪ ವಲಯ ಅರಣ್ಯಾಧಿಕಾರಿ ಅಕ್ಷಯ್,ತ್ಯಾವರ್ಯ ನಾಯ್ಕ್ ಅರಣ್ಯ ರಕ್ಷಕ ಹರೀಶ್ ದಾಳಿಯಲ್ಲಿ ಪಾಲ್ಗೊಂಡಿದ್ದರು.