ರಿಪ್ಪನ್‌ಪೇಟೆ : ಅಥ್ಲೆಟಿಕ್ಸ್ 17 ವರ್ಷದೊಳಗಿನ ವಿಭಾಗದಲ್ಲಿ ಶ್ರೀ ಶಾರದಾ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿಗಳಾದ ಆಯುಷ್ ಮತ್ತು ಅನೀಶ್ ರವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಿವಮೊಗ್ಗದ ನೆಹರು ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ 17 ವರ್ಷ ವಯೋಮಿತಿಯೊಳಗಿನ ಅಥ್ಲೆಟಿಕ್ಸ್ ಪಂದ್ಯಾವಳಿಯಲ್ಲಿ ರಾಮಕೃಷ್ಣ ವಿದ್ಯಾಲಯದ 10 ನೇ ತರಗತಿ ವಿದ್ಯಾರ್ಥಿ ಆಯುಷ್ 800 ಮೀ ಹಾಗೂ 1500 ಮೀ ಓಟ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
7 ನೇ ತರಗತಿಯ ಅನೀಶ್ 100 ಮೀ ಓಟದಲ್ಲಿ ಎರಡನೇ ಸ್ಥಾನ ಪಡೆದು ಮುಂದಿನ ತಿಂಗಳು ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಶಿವಮೊಗ್ಗ ಜಿಲ್ಲಾ ತಂಡವನ್ನು ಪ್ರತಿನಿಧಿಸುತಿದ್ದಾರೆ.
ಪಟ್ಟಣದ ಸಮೀಪದ ಹಾಲುಗುಡ್ಡೆ ನಿವಾಸಿಗಳಾದ ರಾಜೇಶ್ ಗೌಡ ಮತ್ತು ಶಿಲ್ಪಾ ದಂಪತಿಗಳ ಪುತ್ರನಾದ ಆಯುಷ್ ಶಾರದ ಶಾಲೆಯಲ್ಲಿ ಹತ್ತನೆ ತರಗತಿ ವ್ಯಾಸಂಗ ಮಾಡುತಿದ್ದಾರೆ.
ಚಂದಳ್ಳಿ ನಿವಾಸಿಗಳಾದ ವೀರೇಶ್ ಮತ್ತು ಸುಮಾ ದಂಪತಿಗಳ ಪುತ್ರ ಅನೀಶ್ ರಾಮಕೃಷ್ಣ ವಿದ್ಯಾಲಯದಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತಿದ್ದಾರೆ.
ಜಾವೆಲಿನ್ ವಿಭಾಗದಲ್ಲಿ 3 ನೇ ಸ್ಥಾನ
17 ವರ್ಷದ ಬಾಲಕಿಯರ ಜಾವೆಲಿನ್ ವಿಭಾಗದಲ್ಲಿ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿನಿ ಖುಷಿ ಮೂರನೇ ಸ್ಥಾನ ಪಡೆದಿದ್ದಾರೆ.
ಹೆದ್ದಾರಿಪುರ ನಿವಾಸಿಗಳಾದ ಗುರು ಮತ್ತು ನಯನ ದಂಪತಿಗಳ ಪುತ್ರಿ ಖುಷಿ ರಾಮಕೃಷ್ಣ ವಿದ್ಯಾಲಯದಲ್ಲಿ 9 ನೇ ತರಗತಿ ವ್ಯಾಸಂಗ ಮಾಡುತಿದ್ದಾರೆ.
ಅಪ್ರತಿಮ ಸಾಧನೆಯ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಯುವ ಪ್ರತಿಭೆಗೆ ಶ್ರೀ ರಾಮಕೃಷ್ಣ ಮಹಾವಿದ್ಯಾಲಯದ ಮುಖ್ಯಸ್ಥರಾದ ದೇವರಾಜ್ ,ದೈಹಿಕ ಶಿಕ್ಷಕರಾದ ವಿನಯ್ ಮತ್ತು ಶಾಲಾ ಆಡಳಿತ ಮಂಡಳಿ ಹಾಗೂ ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಹಾಗೂ ಪೋಷಕರು ದೈಹಿಕ ಶಿಕ್ಷಕರು ಮತ್ತು ಪಟ್ಟಣದ ಸಂಘ ಸಂಸ್ಥೆಗಳು ಅಭಿನಂದನೆ ಸಲ್ಲಿಸಿರುತ್ತಾರೆ.