ರಿಪ್ಪನ್ಪೇಟೆ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ಪೇಟೆ ಪಟ್ಟಣದಲ್ಲಿ ಶನಿವಾರ ತಡರಾತ್ರಿ ಚಿರತೆ ಪ್ರತ್ಯಕ್ಷವಾಗಿ ಜಾನುವಾರು ಬಲಿ  ಪಡೆದುಕೊಂಡ  ಘಟನೆ ನಡೆದಿದೆ.
ರಿಪ್ಪನ್ಪೇಟೆ – ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ಸಮೀಪದ ಮಳವಳ್ಳಿ ಗ್ರಾಮದ ಸಂಪರ್ಕ ರಸ್ತೆಯ ಬದಿಯಲ್ಲಿ ತಡರಾತ್ರಿ ಚಿರತೆಯೊಂದು ಹಸುವಿನ ಮೇಲೆ ದಾಳಿ ನಡೆಸಿ, ಸಾಯಿಸಿ ಹಸುವಿನ ಹೊಟ್ಟೆಯೊಳಗಿದ್ದ ಕರುವನ್ನು ಎಳೆದು ಸುಮಾರು ನೂರು ಅಡಿಯಷ್ಟು ದೂರದಲ್ಲಿ ಎಳೆದು ಹಾಕಿ ಹೋಗಿರುವಂತಹ ಹೃದಯಾ ವಿದ್ರಾವಕ ಘಟನೆ ನಡೆದಿದೆ.
ಮಳವಳ್ಳಿ ಗ್ರಾಮದ ಬಡ ರೈತ ವಿಶ್ವನಾಥ್ ರವರಿಗೆ ಸೇರಿದ ಪಶು ಸಾವಿಗೀಡಾಗಿದೆ.ಚಿರತೆಯ ದಾಳಿಯ ಸುದ್ದಿ ತಿಳಿದ ಗ್ರಾಮಸ್ಥರು ಸ್ಥಳದಲ್ಲಿ ಜಮಾವಣೆಗೊಂಡಿದ್ದರು.
ಮಾಹಿತಿ ತಿಳಿದ ಸ್ಥಳಕ್ಕೆ ತಕ್ಷಣ ಧಾವಿಸಿ ಬಂದ ಅರಣ್ಯ ಅಧಿಕಾರಿಗಳ ತಂಡ ಸ್ಥಳ ಪರಿಶೀಲಿಸಿದ ಅವರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಪರಿಹಾರ ಕೊಡಿಸುವುದಕ್ಕೆ ಪ್ರಯತ್ನಿಸುವುದಾಗಿ ತಿಳಿಸಿದರು.
ಮಳವಳ್ಳಿ ಸಂಪರ್ಕ ರಸ್ತೆಯಲ್ಲಿ ಪ್ರತಿನಿತ್ಯ ಶಾಲಾ ಮಕ್ಕಳು, ಮಹಿಳೆಯರು ವಯೋವೃದ್ದರು ಓಡಾಡುತಿದ್ದು ಈ ಚಿರತೆ ದಾಳಿಯಿಂದ ಆತಂಕಕ್ಕೆ ಓಳಗಾಗಿದ್ದಾರೆ  ಕೊಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು ಸಾರ್ವಜನಿಕರಿ ಭದ್ರತೆ ಕಲ್ಪಿಸಬೇಕೆಂದು ಸ್ಥಳದಲ್ಲಿ ಹಾಜರಿದ್ದ ಗ್ರಾಪಂ ಸದಸ್ಯ ಮಳವಳ್ಳಿ ಚಂದ್ರು ಹಾಗೂ ಅನಿಲ್ ಕೃಷ್ಣಮೂರ್ತಿ ಆಗ್ರಹಿಸಿದರು.
 
                         
                         
                         
                         
                         
                         
                         
                         
                         
                        
