ರಿಪ್ಪನ್‌ಪೇಟೆ : ಭವ್ಯ ಭಾರತ ದೇಶದ ಅಭಿವೃದ್ಧಿಯಲ್ಲಿ ಬ್ರಾಹ್ಮಣ ಸಮಾಜದ ಕೊಡುಗೆ ಅಪಾರವಾಗಿದೆ ಎಂದು ಸಾಗರ-ಹೊಸನಗರ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.
ಪಟ್ಟಣದ ಸಾಗರ ರಸ್ತೆಯಲ್ಲಿನ ಬ್ರಾಹ್ಮಣ ಸಮಾಜದ ಶ್ರೀರಾಮಮಂದಿರದ ಸಮುದಾಯ ಭವನದ ಮೇಲಂತಸ್ತು ಕಟ್ಟಡದ ಕಾಮಗಾರಿಯನ್ನು ವೀಕ್ಷಿಸಿ ನಂತರ ಬ್ರಾಹ್ಮಣ ಸಮಾಜದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ದೇಶದ ಅಭಿವೃದ್ಧಿಯಲ್ಲಿ ಬ್ರಾಹ್ಮಣ ಸಮಾಜದ ಕೊಡುಗೆ ಅಪಾರವಾಗಿದೆ.ಧಾರ್ಮಿಕ ,ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಈ ಸಮಾಜ ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಬ್ರಾಹ್ಮಣ ಸಮುದಾಯ ಸ್ವಂತ ಶಕ್ತಿ,ಬುದ್ದಿವಂತಿಕೆ ಹಾಗೂ ದೂರ ದೃಷ್ಟಿಯಿಂದ ದೇಶಕ್ಕೋಸ್ಕರ ನಾನಾ ಕೊಡುಗೆಗಳನ್ನು ನೀಡಿದೆ.ಬ್ರಾಹ್ಮಣರು ಭಾರತ ದೇಶದಲ್ಲಿ ಸಂಖ್ಯಾ ಬಲದಲ್ಲಿ ಅಲ್ಪಸಂಖ್ಯಾತರು ಬುದ್ದಿವಂತಿಕೆ ಮತ್ತು ಪ್ರತಿಭೆಯಲ್ಲಿ ಬಹುಸಂಖ್ಯಾತರು ಎಂದರು.
ಬ್ರಾಹ್ಮಣ ಮಹಿಳಾ ಸಮಾಜದ ಪ್ರಮುಖರಾದ ಪದ್ಮಾ ಸುರೇಶ್ ಸಮುದಾಯ ಭವನಕ್ಕೆ ಬೋರ್ ವೆಲ್ ಅವಶ್ಯಕತೆ ಇರುವ ಬಗ್ಗೆ ಶಾಸಕರ ಗಮನ ಸೆಳೆದಾಗ ತಕ್ಷಣ ಸ್ಪಂದಿಸಿದ ಶಾಸಕ ಹರತಾಳು ಹಾಲಪ್ಪ ಕೆಲವೇ ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು ಭರವಸೆ ನೀಡಿದರು.
ಬ್ರಾಹ್ಮಣ ಸಮಾಜದ ಅಧ್ಯಕ್ಷ ಹೆಚ್.ಪಿ.ಸುರೇಶ್ ಅಧ್ಯಕ್ಷತೆ ವಹಿಸಿದ್ದರು.
ಗ್ರಾ.ಪಂ.ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಉಪಾಧ್ಯಕ್ಷೆ ಮಹಾಲಕ್ಷ್ಮಿ,ಸವಿತಾ ರಾಧಕೃಷ್ಣ,ಸೌಮ್ಯ ಅರುಣ್ ಕುಮಾರ್ ,ಸರಸ್ವತಿ ಪ್ರೇಮಚಂದ್ರ, ಶಿವಾನಂದ,ಗಣಪತಿ ಪುರಾಣಿಕ್ ,ಮಾನಸ ಪುರುಷೋತ್ತಮ್ ,ಉಮಾ ಸುರೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಅಮಿತಾ ಬಲ್ಲಾಳ್ ಸ್ವಾಗತಿಸಿ, ಪದ್ಮಾಸುರೇಶ್ ವಂದಿಸಿದರು.