ತೀರ್ಥಹಳ್ಳಿ : ಪಟ್ಟಣದ ಸೀಬಿನಕೆರೆ ಸಮೀಪದ ಯಡೆಹಳ್ಳಿ ಕೆರೆ ಬಳಿ ಬೈಕ್ ಹಾಗೂ ಕೆ ಎಸ್ ಆರ್ ಟಿ ಸಿ ಬಸ್‌ಗೆ ನಡುವೆ ಭೀಕರ ಅಪಘಾತವಾದ ಘಟನೆ ನಡೆದಿದೆ.
ಯಡೆಹಳ್ಳಿ ಕೆರೆ ಏರಿ ಮೇಲೆ ಬಸ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನಿಗೆ ಗಂಭೀರವಾಗಿ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ತೀರ್ಥಹಳ್ಳಿಯ ಮಾರ್ಕೆಟ್ ರಸ್ತೆಯ ಸಿರಾಜ್ ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿರಾಜ್ ಅವರು ತೀರ್ಥಹಳ್ಳಿ ಯಿಂದ ಯಡೆಹಳ್ಳಿ ಕೆರೆ ಕಡೆ ಹೋಗುವಾಗ ಅಪಘಾತವಾಗಿದೆ.
ಭೀಕರ ಅಪಘಾತದಲ್ಲಿ ಸಿರಾಜ್ ಗೆ ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.