Headlines

ಹರತಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲ್ಲಿ ಯೋಗೇಂದ್ರ ವಿರುದ್ದ ಅವಿಶ್ವಾಸ ನಿರ್ಣಯ, ಅಧ್ಯಕ್ಷ ಸ್ಥಾನಕ್ಕೆ ಹಕ್ಕು ಚ್ಯುತಿ|Haratalu

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಹರತಾಳು ಗ್ರಾಮ ಪಂಚಾಯಿತಿ ಹಾಲಿ‌ ಅಧ್ಯಕ್ಷರಾಗಿದ್ದ ಕಲ್ಲಿ ಯೋಗೇಂದ್ರ ಇವರನ್ನು ಗ್ರಾಮ ಪಂಚಾಯತಿ ಸದಸ್ಯರ ಅವಿಶ್ವಾಸ ನಿರ್ಣಯದಿಂದ ಅಧ್ಯಕ್ಷ ಸ್ಥಾನಕ್ಕೆ ಹಕ್ಕುಚ್ಯುತಿ ನಿರ್ಣಯ ಮಾಡಲಾಗಿದೆ.

ಕಾಂಗ್ರೆಸ್‌ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಕಲ್ಲಿ ಯೋಗೇಂದ್ರ ಇತ್ತಿಚೆಗೆ ಬಿಜೆಪಿ ಸೇರ್ಪಡೆಯಾಗಿದ್ದರೆಂಬ ಕಾರಣವೇ ಅಧ್ಯಕ್ಷ ಸ್ಥಾನದ ಅವಿಶ್ವಾಸ ನಿರ್ಣಯಕ್ಕೆ ಕಾರಣ ಎಂದು ಹೇಳಲಾಗಿದೆ.

ಅವಿಶ್ವಾಸ ನಿರ್ಣಯ ಪರವಾಗಿ ಸದಸ್ಯರಾದ ಸಾಕಮ್ಮ ಮನೋಹರ,ಕಣಕಿ ನಾರಾಯಣಪ್ಪ,  ನಾರಿ ರವಿ,ನಾಗರತ್ನ ವಾಸುದೇವ,ಸತ್ಯವತಿ ಚಂದ್ರಪ್ಪ,, ಶಿವಮೂರ್ತಿ ಮತ ಚಲಾಯಿಸಿದರು. 8 ಜನ ಸದಸ್ಯರಲ್ಲಿ 6 ಜನ ಅವಿಶ್ವಾಸದ ನಿರ್ಣಯದ ಪರವಾಗಿ ಮತ ಚಲಾಯಿಸಿದರು.ಅಧ್ಯಕ್ಷರು ಮತ್ತು ಇನ್ನೊಬ್ಬ ಸದಸ್ಯೆಯಾದ ಪ್ರೇಮ ಪುರುಷೋತ್ತಮ ಅಧ್ಯಕ್ಷರ ಪರವಾಗಿ ಗೈರಾಗಿದ್ದರು.      

 ಈ ಹಿಂದೆ ಅಧ್ಯಕ್ಷ ಸ್ಥಾನಕ್ಕೆ  ಕಲ್ಲಿ ಯೋಗೇಂದ್ರಪ್ಪ ಆಯ್ಕೆಯಾಗುವಾಗ ಕಣಕಿ ನಾರಾಯಣಪ್ಪ ರವರಿಗೆ 15 ತಿಂಗಳ ನಂತರ ಬಿಟ್ಟು ಕೊಡುವುದಾಗಿ ಮಾತುಕತೆ ನಡೆದಿತ್ತು ಆದಾಗ್ಯೂ ಅಧಿಕಾರ ಬಿಟ್ಟು ಕೊಡದೇ ಅಧಿಕಾರಕ್ಕೆ ಅಂಟಿಕೊಂಡು ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಸೇರಿ ತಮ್ಮ ಸ್ಥಾನದ ಭದ್ರತೆಯಲ್ಲಿ ಇದ್ದರು ಎನ್ನಲಾಗುತ್ತಿದೆ.

ಅಧ್ಯಕ್ಷರ ವರ್ತನೆಯಿಂದ ಸದಸ್ಯರೆಲ್ಲ ಬೇಸತ್ತು ಅವಿಶ್ವಾಸ ನಿರ್ಣಾಯ ಮಾಡುವ ನಿರ್ಧಾರಕ್ಕೆ ಬಂದು ಇಂದು ಅವರನ್ನು ಅಧ್ಯಕ್ಶ ಸ್ಥಾನದಿಂದ ಕೆಳಗಿಳಿಸಿದ್ದಾರೆ.

Leave a Reply

Your email address will not be published. Required fields are marked *