ಗರ್ತಿಕೆರೆ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬೀಗಗಳನ್ನು ತುಂಡರಿಸಿ ಒಳ ನುಗ್ಗಿದ ದುಷ್ಕರ್ಮಿಗಳು ಗಾಡ್ರೇಜ್ ಬೀರುಗಳನ್ನು ಮುರಿದು ಕಡತಗಳನ್ನು ಚೆಲ್ಲಾಪಿಲ್ಲಿ ಮಾಡಿ ಗಾಡ್ರೇಜ್ ಬೀರುನಲ್ಲಿದ್ದ ಅಂದಾಜು 20 ಸಾವಿರ ಕ್ಕೂ ಹೆಚ್ಚು ಹಣವನ್ನು ದೋಚಿಕೊಂಡು ಹೋಗಿರುವ ಘಟನೆ ತಡರಾತ್ರಿ ನಡೆದಿದೆ.
ಇಂದು ಬೆಳಿಗ್ಗೆ ಕಾಲೇಜು ಸಿಬ್ಬಂದಿಗಳು ಕಾಲೇಜಿಗೆ ಬಂದಾಗ ಬೀಗ ಮುರಿದ ಪರಿಸ್ಥಿತಿ ನೋಡಿ ಕಾಲೇಜಿನ ಕಡತಗಳು ಚೆಲ್ಲಾಪಿಲ್ಲಿಯಾಗಿ ಇರುವುದನ್ನು ಕಂಡು ದಂಗಾಗಿ ಕಾಲೇಜಿನ ಪ್ರಾಚಾರ್ಯರಿಗೆ ಹಾಗೂ ಪೊಲೀಸರಿಗೆ ಘಟನೆ ಬಗ್ಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ಭೇಟಿ ನೀಡಿದ್ದು,ರಿಪ್ಪನ್‌ಪೇಟೆ ಪಿಎಸ್ ಐ ಶಿವಾನಂದ ಕೋಳಿ ನೇತ್ರತ್ವದ ಸಿಬ್ಬಂದಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ
ಕೋಣಂದೂರಿ ಶಾಲೆಗಳಲ್ಲೂ ಕಳ್ಳತನ :
ನಿನ್ನೆ ದಿನ ರಾತ್ರಿ ಕೋಣಂದೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಮತ್ತು ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲೂ ಸಹ ಕಳ್ಳತನ ನಡೆದಿದ್ದು ಈ ಬಗ್ಗೆ ತೀರ್ಥಹಳ್ಳಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಕಳೆದ ಒಂದು ವಾರದಲ್ಲಿ ಹೊಸನಗರದ ಕೊಡಚಾದ್ರಿ ಕಾಲೇಜು ,ನಗರದ ಸರ್ಕಾರಿ ಕಾಲೇಜು ಮತ್ತು ಇಂದು ಕೋಣಂದೂರು ಹಾಗೂ ಗರ್ತಿಕೆರೆಯ ಶಾಲೆಗಳಲ್ಲಿ ಕಳ್ಳತನ ನಡೆದಿದ್ದು.ಈ ಸರಣಿ ಕಳ್ಳತನವನ್ನು ಪೊಲೀಸರು ಮಟ್ಟಹಾಕುತ್ತಾರೋ ಇಲ್ಲವೋ ಎಂಬುವುದನ್ನು ಕಾದು ನೋಡಬೇಕಾಗಿದೆ.