Headlines

ಎಲ್ಲ ಧರ್ಮಗಳಿಗಿಂತ ಮಾನವ ಧರ್ಮ ಶ್ರೇಷ್ಠ : ಫಾದರ್ ವೀರೇಶ್ ವಿ ಮೋರಸ್ |ರಿಪ್ಪನ್‌ಪೇಟೆಯಲ್ಲಿ ನಡೆದ ಸೌಹಾರ್ದ ಸಮ್ಮಿಲನ ಕಾರ್ಯಕ್ರಮ

ರಿಪ್ಪನ್‌ಪೇಟೆ : ಎಲ್ಲಾ ಧರ್ಮಗಳಿಗಿಂತ ಮಾನವ ಧರ್ಮ ಶ್ರೇಷ್ಠ ಎಂಬುವುದನ್ನು ಕೋವಿಡ್ ಎಂಬ ಖಾಯಿಲೆ ಇಡೀ ಮನುಕುಲಕ್ಕೆ ಉತ್ತಮ ಪಾಠವನ್ನು ಕಲಿಸಿಕೊಟ್ಟಿದೆ.ಇಂದಿನ ಕಾಲದಲ್ಲಿ ಮನುಷ್ಯತ್ವ ಮಾತ್ರ ಜೀವಂತವಾಗಿದೆ ಎಂದು ಶಿವಮೊಗ್ಗ ಕ್ರೈಸ್ತ ಧರ್ಮ ಕ್ಷೇತ್ರದ ಧರ್ಮ ಗುರು ಫಾದರ್ ವೀರೇಶ್ ವಿ. ಮೋರಸ್ ಹೇಳಿದರು.


ಗುರುವಾರ ಸಂಜೆ ರಿಪ್ಪನ್ ಪೇಟೆಯ ಮೊಹಿಯುದ್ದೀನ್ ಜುಮ್ಮಾ ಮಸೀದಿ ವತಿಯಿಂದ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಇಲಾಲ್ ಹಬೀಬ್ ಮಿಲಾದ್ ಧಾರ್ಮಿಕ ಸಮ್ಮೇಳದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಮಾತನಾಡಿ ಎಲ್ಲಾ ಧರ್ಮಗಳು ಒಂದೇಯಾಗಿದೆ ,ಸೌಹಾರ್ದತೆ ಯಲ್ಲಿ ಬದುಕುವುದ ಮಾತ್ರ ಅತಿ ಮುಖ್ಯ. ಧರ್ಮದ ಸತ್ವವನ್ನು ಆಳವಾಗಿ ತಿಳಿಯಬೇಕು. ತತ್ವ ಸಿದ್ಧಾಂತಗಳು ಬೇರೆ, ಧಾರ್ಮಿಕ ಆಚರಣೆ ಬೇರೆ,ಎಲ್ಲಾ ಧರ್ಮಗಳ ಧಾರ್ಮಿಕ ಹಿನ್ನೆಲೆ ಅರಿತಾಗ ಮಾತ್ರ ಸೌಹಾರ್ದತೆ ಸಾಧ್ಯ ಎಂದು ಹೇಳಿದರು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೊಹಿಯುದ್ದೀನ್ ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷ ಆರ್ ಎ ಚಾಬುಸಾಬ್ 
ಮುಸ್ಲಿಂ ಸಮುದಾಯದಲ್ಲಿ ಪ್ರವಾದಿ ಮಹಮದ್ ಪೈಗಂಬರ್‌ಗಿಂತ ಮೊದಲು ಮಹಿಳೆಯರ ಮೇಲೆ ಶೋಷಣೆ ಸೇರಿದಂತೆ ಹೆಂಡ ಸೇವನೆ ಕಳ್ಳತನ ಸುಲಿಗೆಯಂತಹ ದೃಶ್ಯಕೃತ್ಯಗಳು ಪ್ರವಾದಿಗಳ ಕಾಲದಲ್ಲಿಯೂ ನಡೆಯುತ್ತಿತ್ತು ಇಂತಹ ದುಶ್ಚಟಗಳಿಗೆ ಜಗತ್ತಿನಲ್ಲಿ ವಿರಾಮ ಹಾಕಿದವರು  ಮಹಮದ್‌ಪೈಗಂಬರ್ ಎಂದರು.

1400 ವರ್ಷಧರ್ಮ ಭೋಧಕರಾಗಿ ಯಾವುದೇ ಕಳಂಕವಿಲ್ಲದೆ ಪ್ರಪಂಚದಲ್ಲಿ ಇದ್ದವರು ಪ್ರವಾದಿ ಮಹಮದ್ ಪೈಗಂಬರ್‌ರವರು ಅವರ ವಿಚಾರಧಾರೆಗಳೇ ನಮಗೆ ಸ್ಪೂರ್ತಿಯಾಗಿವೆ. ಕ್ರೀಶ್ಚಿಯನ್ ಧರ್ಮಗುರುಗಳೇ ಮಹಮದ್ ಪೈಗಂಬರ್ ಕುರಿತು ಭವಿಷ್ಯ ನುಡಿಯುವುರೊಂದಿಗೆ ಇವನೊಬ್ಬ ಸರ್ವ ಶ್ರೇಷ್ಟ ಪ್ರವಾದಿ ಮಹಮದ್ ಅಗುವ ಲಕ್ಷಣ ಕಾಣುತಿದ್ದೆ ಎಂದಿದ್ದರು ಅದರಂತೆ ಮಹಮದ್ ಪೈಗಂಬರ್‌ರವರಿಗೆ ದೇವದೂತರು ನಾಲಿಗೆ ಮೇಲೆ ಜ್ಞಾನದ ವಿಶ್ವರೂಪವನ್ನು ಬರೆದವರಾಗಿದ್ದು ಪೈಗಂಬರ್ ಮುಸ್ಲಿಂ ಜನಾಂಗದ ಸರ್ವಶ್ರೇಷ್ಟ ಪ್ರವಾದಿ ಪೈಗಂಬರ್‌ರಾಗಿದ್ದು ಅವರು ನಿತ್ಯ ಐದು ಬಾರಿಯದರೂ ಅಲ್ಲಾನ ಪ್ರಾರ್ಥನೆ ಮಾಡಿದರೆ ದೈವಿಕೃಪೆಯಾಗುವುದು ಇಲ್ಲದಿದ್ದರೆ ಅವನ್ನು ಮುಸ್ಲಿಂನೇ ಅಲ್ಲ ಎಂದು ಹೇಳಿ ನಮಾಜ್ ಮಾಡುವವನಿಗೆ ಕೆಟ್ಟ ಕೆಲಸ ಮಾಡಲು ಮನಸ್ಸು ಬರುವುದಿಲ್ಲ ಎಂದರು.

ಮೊಹಿಯುದ್ದೀನ್ ಜಮಾ ಮಸೀದಿಯ ರಿಪ್ಪನ್ ಪೇಟೆಯ ಧರ್ಮ ಗುರು ಬಹು ಮುನೀರ್ ಸಖಾಫಿ ಮಾತನಾಡಿ ಇಸ್ಲಾಂನ ಕೊನೆಯ ಪ್ರವಾದಿ ಪೈಗಂಬರರು ನೊಂದವರು, ಶೋಷಿತರ ಪರವಾಗಿ ಹತ್ತಾರು ಕ್ರಾಂತಿಕಾರಿ ಹೋರಾಟಗಳ ಮೂಲಕವಾಗಿ ತಮ್ಮ ಗಟ್ಟಿತನದಿಂದ ಶೋಷಣೆಗೆ ಒಳಗಾದವರಿಗೆ ದನಿಯಾಗಿ ನಿಂತರು. ಸಮಾಜ ಮತ್ತು ಸಮುದಾಯದಲ್ಲಿ ನಡೆಯುತ್ತಿದ್ದ ಶೋಷಣೆಯನ್ನು ತೊಡೆದು ಹಾಕಿದರು. ಅವರ ಸಂದೇಶಗಳು ಸರ್ವ ಕಾಲಕ್ಕೂ ಮಾರ್ಗದರ್ಶನವಾಗಿವೆ. ನಿತ್ಯವು ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕು ಎಂದರು.



ಗ್ರಾಪಂ ಸದಸ್ಯರಾದ ಪಿ ರಮೇಶ್ ಹಾಗೂ ಆಸೀಫ಼್ ಭಾಷಾಸಾಬ್ ಸೌಹಾರ್ಧತೆಯ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮೊಹಿಯುದ್ದೀನ್ ಜುಮ್ಮಾ ಮಸೀದಿ ಅದ್ಯಕ್ಷ ಮಹಮ್ಮದ್ ರಫೀಕ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮೆಕ್ಕಾ ಮಸೀದಿ ಅಧ್ಯಕ್ಷ ಫ಼ಾಝಿಲ್, ಈದ್ ಮಿಲಾದ್ ಸಮಿತಿ ಅಧ್ಯಕ್ಷ ಮುಸ್ತಫಾ ಕೆಹೆಚ್ ಆರ್,ಗ್ರಾಪಂ ಅಧ್ಯಕ್ಷೆ ಮಂಜುಳಾ ಕೆ ರಾವ್,ಕೆಂಚನಾಲ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಶರೀಫ್,ರಿಪ್ಪನ್‌ಪೇಟೆ ಗ್ರಾಪಂ ಉಪಾಧ್ಯಕ್ಷೇ ಮಹಾಲಕ್ಷ್ಮಿ,  ಸದಸ್ಯರುಗಳಾದ ಮಧುಸೂಧನ್, ಸುಧೀಂದ್ರ ಪೂಜಾರಿ, ಸುಂದರೇಶ್, ನಿರೂಪ್ ಕುಮಾರ್, ಗಣಪತಿ ,ಪ್ರಕಾಶ್ ಪಾಲೇಕರ್,ನಿರುಪಮಾ ರಾಕೇಶ್, ಅಶ್ವಿನಿ ರವಿಶಂಕರ್,ವೇದಾವತಿ ಪರಮೇಶ್,ಸಾರಾಭಿ,ದಾನಮ್ಮ ಮುಖಂಡರಾದ ಎಂ.ಬಿ. ಲಕ್ಷ್ಮಣಗೌಡ,ಎನ್ ವರ್ತೇಶ್ ಇನ್ನು ಮುಂತಾದವರು ಹಾಜರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಹಸನಬ್ಬ ಸ್ವಾಗತಿಸಿ ಹನೀಫ್ ನಿರೂಪಿಸಿದರು.

ಕಾರ್ಯಕ್ರಮದ ಅಂಗವಾಗಿ ಸಂಜೆ ಹೊಸನಗರ ರಸ್ತೆಯ ಜುಮ್ಮಾ ಮಸೀದಿ ಸರ್ಕಲ್ ನಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.ಧ್ವಜಾರೋಹಣವನ್ನು ಈದ್ ಮಿಲಾದ್ ಸಮಿತಿ ಅಧ್ಯಕ್ಷ ಕೆ ಮುಸ್ತಫಾ ಮತ್ತು ಮೊಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಮಹಮ್ಮದ್ ರಫ಼ಿ ನೆರವೇರಿಸಿದರು.


ಈದ್ ಮಿಲಾದ್ ಅಂಗವಾಗಿ ನಡೆದ ಬೈಕ್ ರ್‍ಯಾಲಿ ವೀಡಿಯೋ ಇಲ್ಲಿ ವೀಕ್ಷಿಸಿ👇

Leave a Reply

Your email address will not be published. Required fields are marked *