ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಹೊಸನಗರ ತಾಲೂಕು ಘಟಕ ಅಸ್ತಿತ್ವಕ್ಕೆ |SJKPS

ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಹೊಸನಗರ ತಾಲೂಕು ಘಟಕ ಇಂದು ಅಸ್ತಿತ್ವಕ್ಕೆ ಬಂದಿದೆ.

ಹೊಸನಗರ ಪಟ್ಟಣದ ಪ್ರವಾಸಿ ಮಂದಿರದಲ್ಲಿಂದು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಗೋಪಾಲ್ ಯಡಗೆರೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಘಟಕ ಅಸ್ತಿತ್ವಕ್ಕೆ ಬಂದಿತು.


ನೂತನ ಅಧ್ಯಕ್ಷರಾಗಿ ವೆಂಕಟೇಶ್ ಮೂರ್ತಿ,ಉಪಾಧ್ಯಕ್ಷರಾಗಿ ನಾರಾಯಣ್ ಕಾಮತ್ ಮತ್ತು ರಫಿ ರಿಪ್ಪನ್‌ಪೇಟೆ ಪ್ರಧಾನ ಕಾರ್ಯದರ್ಶಿಯಾಗಿ ರಿ.ರಾ. ರವಿಶಂಕರ್ ಕಾರ್ಯದರ್ಶಿಯಾಗಿ ಹೆಚ್ ಎಸ್ ನಾಗರಾಜ್ ಕೋಶಾಧಿಕಾರಿಯಾಗಿ ರವಿರಾಜ್ ಎಂ.ಜಿ. ಭಟ್ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ದೀಪಕ್ ಸ್ವರೂಪ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ನಿರ್ದೇಶಕರುಗಳಾಗಿ ಟಿ ಎಂ ಸುಧಾಕರ್ ,ಹೆಚ್ ಎಸ್ ರಾಘವೇಂದ್ರ 
ಮಹೇಶ ಹಿಂಡ್ಲೆಮನೆ ,ಪಿಯೂಸ್ ರೋಡ್ರಿಗಸ್ ಮತ್ತು ಯು.ಎಸ್. ಸದಾನಂದ,ಮಾಸ್ತಿಕಟ್ಟೆ ವಾಸಪ್ಪ ಅಯ್ಕೆಯಾಗಿದ್ದಾರೆ

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಗೋಪಾಲ್ ಯಡಗೆರೆ ಅವರು ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿ, ಈ ಸಂಘ ಯಾರ ವಿರುದ್ಧವೂ ಅಲ್ಲ. ಸೃಜನಾತ್ಮಕ ಕೆಲಸಗಳನ್ನು ಮಾಡೋಣ. ಈ ಮೂಲಕ ಎಲ್ಲರ ಮೆಚ್ಚುಗೆ ಪಡೆಯೋಣ ಎಂದರು.

ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಅವರು ಮಾತನಾಡಿ, ಪತ್ರಕರ್ತರ ಬದುಕಿನ ಭದ್ರತೆಗೆ ಬೇಕಾದ ಕೆಲಸಗಳನ್ನು ಒಟ್ಟಿಗೆ ಮಾಡೋಣ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ, ಖಜಾಂಚಿ ನಂದನ್ ಸೇರಿದಂತೆ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *