ಗವಟೂರು-ಮಾವಿನಸರ ಕಳಪೆ ರಸ್ತೆ ಕಾಮಗಾರಿ ವಿರೋಧಿಸಿ ಬೇಳೂರು ನೇತ್ರತ್ವದಲ್ಲಿ ಪ್ರತಿಭಟನೆ | ಪೇ..ಸಿಎಂ ಅಲ್ಲಾ ಪೇ ಹಾಲಪ್ಪ…ಪೇ. ಸಂಸದ… ಮಾಜಿ ಶಾಸಕ ಗಂಭೀರ ಅರೋಪ |

ರಿಪ್ಪನ್‌ಪೇಟೆ : ಇಲ್ಲಿನ ಗವಟೂರು-ಪೂಜಾರದಿಂಬ ಸಂಪರ್ಕ ರಸ್ತೆಯ ಪಿಎಂಜಿಎಸ್‌ವೈ ಯೋಜನೆಯಡಿ 4.41 ಕೋಟಿ ವೆಚ್ಚದಲ್ಲಿ ನಿರ್ವಹಿಸಲಾಗಿರುವ ಕಾಮಗಾರಿ ಕೇವಲ ಮೂರು ತಿಂಗಳಲ್ಲಿ ಕಿತ್ತು ಹೋಗಿರುವುದನ್ನು ಖಂಡಿಸಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ನೇತೃತ್ವದಲ್ಲಿ ಕಾಂಗ್ರೇಸ್ ಪಕ್ಷದವರು ಇಂದು ಪ್ರತಿಭಟನೆ ನಡೆಸಿದರು.


ಪ್ರತಿಭಟನಾ ಸಭೆಯನುದ್ದೇಶಿಸಿ ಮಾತನಾಡಿದ ಬೇಳೂರು ಪೇ.ಸಿಎಂ ಅಲ್ಲ……ಪೇ.ಹಾಲಪ್ಪ….ಪೇ.ಸಂಸದ  ಎಂದು  ಟೀಕಿಸುವುದರೊಂದಿಗೆ ಬಾಳೆಹಣ್ಣು ತಿಂದು………! ಸಿಪ್ಪೆಯನ್ನು ಗುತ್ತಿಗೆದಾರರಿಗೆ ಬಿಟ್ಟಿದಾರೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಾ ಎಂಬುವ ಹಾಗಿದೆ ಈ ಕಾಮಗಾರಿ. ರಾಜ್ಯ ಸರ್ಕಾರ ಶೇಕಡಾ 40 ಪರ್ಸೇಂಟ್ ಆಗಿ ಉಳಿದಿಲ್ಲ ಈಗ 80% ಕಮಿಷನ್ ಸರ್ಕಾರವಾಗಿದೆ ಎಂದರು.

ಕೇಂದ್ರದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಗ್ರಾಮಗಳ ಸಂಪರ್ಕ ರಸ್ತೆಯಲ್ಲಿಯೂ ಕಮೀಷನ್ ತಿನ್ನುವುದರ ಮೂಲಕ 4.40 ಕೋಟಿ ಹಣವನ್ನು ನೀರಿನಲ್ಲಿ ಹೋಮ ಮಾಡಿದ್ದಾರೆ. ಈಬಗ್ಗೆ ಸಮಗ್ರ ತನಿಖೆ ನಡೆಸುವ ಮೂಲಕ ಗುತ್ತಿಗೆದಾರ ಮತ್ತು ಪಿಎಂಜಿಎಸ್‌ವೈ ಯೋಜನೆಯ ಅಧಿಕಾರಿಗಳನ್ನು ಅಮಾನತು ಪಡಿಸುವಂತೆ ಸಭೆಯಲ್ಲಿ ಸರ್ಕಾರವನ್ನು ಆಗ್ರಹಿಸಿದರು.

ನಾನು ಸೊರಬದಲ್ಲಿ ಮಾಡಿದ ಕಾಮಗಾರಿಗಳ ಬಗ್ಗೆ ಬೀಗುವ ಶಾಸಕ ಹರತಾಳು ಹಾಲಪ್ಪನವರಿಗೆ ಕ್ಷೇತ್ರದಲ್ಲಿ ಮಾಡಲಾಗಿರುವ ಕಳಪೆ ಕಾಮಗಾರಿ ಕಣ್ಣಿಗೆ ಬೀಳಲಿಲ್ಲವೇ ,ಕಳೆದ ಮೂರು ತಿಂಗಳ ಹಿಂದೆ ಮಾಡಲಾದ ಡಾಂಬರ್ ರಸ್ತೆಯೂ ಕಳಪೆಯಾಗಿರುವ ಬಗ್ಗೆ ಮಾಧ್ಯಮದಲ್ಲಿ ಪ್ರಕಟಗೊಳ್ಳುತ್ತಿದ್ದಂತೆ ಬೆಳಗಾಗುವುದರೊಳಗೆ ಸಿಮೆಂಟ್ ರಸ್ತೆಯಾಗಿ ಪರಿವರ್ತನೆಯಾಗಿದೆ ಎಂದರು.

ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಮಾತನಾಡಿ ಇದೊಂದು ಭಷ್ಟಾಚಾರದ ಸರ್ಕಾರವಾಗಿದೆ.ಅಧಿಕಾರಿಗಳಿಗೆ ಜನಪ್ರತಿನಿಧಿಗಳ ಭಯವೇ ಇಲ್ಲದಂತಾಗಿ ತಾವು ಸಿಪ್ಪೆ ತಿನ್ನುವುದರಲ್ಲಿ ಏನು ಗುಣಮಟ್ಟದ ಕಾಮಗಾರಿ ಮಾಡಲು ಸಾಧ್ಯವೆಂದು ಹೇಳಿ ಈ ಬಗ್ಗೆ ಸಂಬAಧ ಪಟ್ಟ ಇಂಜಿನಿಯರ್ ಮತ್ತು ಅಧಿಕಾರಿಗಳನ್ನು ಅಮಾನತ್ತು ಪಡಿಸುವುದರೊಂದಿಗೆ ಕಾಮಗಾರಿಯನ್ನು ಹೊಸದಾಗಿ ಮಾಡುವುದು ಮತ್ತು ಈಗ ಮಾಡಲಾಗಿರುವ ಕಾಮಗಾರಿಯ ಹಣವನ್ನು ತಡೆಹಿಡಿಯುವಂತೆ ಅಗ್ರಹಿಸಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಅಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಜಿ.ಪಂ.ಸ.ಬಿ.ಪಿ.ರಾಮಚಂದ್ರ,ಕೆಂಚನಾಲ ಗ್ರಾ.ಪಂ. ಅಧ್ಯಕ್ಷ ಉಬೇದುಲ್ಲಾ ಷರೀಪ್,ಅರಸಾಳು ಗ್ರಾ.ಪಂ ಅಧ್ಯಕ್ಷ ಉಮಾಕರ,ಬ್ಲಾಕ್ ಕಾಂಗ್ರೇಸ್ ಆಧ್ಯಕ್ಷ ಬಿ.ಜಿ.ನಾಗರಾಜ್,ಪಕ್ಷದ ಮುಖಂಡರಾದ ಎಂ ಎಂ ಪರಮೇಶ್, ಡಿ.ಈ.ಮಧುಸೂಧನ್,ಅಶೀಫ್, ಎನ್.ಚಂದ್ರೇಶ್, ಅಮೀರ್ ಹಂಜಾ, ಗಣಪತಿ,ಸೋಮಶೇಖರ್‌ಲಾವಿಗೆರೆ, ಗಣಪತಿ ಮಂಡಗಳಲೇ,ರವಿಂದ್ರಕೆರೆಹಳ್ಳಿ,ಉಲ್ಲಾಸ್,ಸದಾಶಿವ ಶೆಟ್ಟಿ,ಶ್ರೀಧರ್,ದೇವರಾಜ್‌ಹಾಲುಗುಡ್ಡೆ, ಜಿ.ಆರ್.ಗೋಪಾಲಕೃಷ್ಣ, ರತೇಶ್ವರಪ್ಪಗೌಡ,ಪ್ರಕಾಶಪಾಲೇಕರ್,ರಮೇಶ್ ಫ಼್ಯಾನ್ಸಿ,ಚಿನ್ಮಯ್ ಹಾಗೂ
ಇನ್ನಿತರ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

Leave a Reply

Your email address will not be published. Required fields are marked *