ರಿಪ್ಪನ್‌ಪೇಟೆ : ಪತ್ರಕರ್ತ ಬಿ ಡಿ ರವಿಕುಮಾರ್ ಮೇಲೆ ಹಲ್ಲೆ ನಡೆಸಿದವರ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ಮನವಿ|Ripponpet

ರಿಪ್ಪನ್‌ಪೇಟೆ : ಸಾಗರ ತಾಲೂಕಿನ ಆನಂದಪುರದ ಹೊಸದಿಗಂತ ಪತ್ರಿಕೆಯ ವರದಿಗಾರ  ಬಿ ಡಿ ರವಿಕುಮಾರ್ ರವರ ಮೇಲೆ ಹಲ್ಲೆಗೆ ಯತ್ನಿಸಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಗುರುವಾರ ಪಟ್ಟಣದ ಪತ್ರಕರ್ತ ಸಂಘಟನೆಗಳಿಂದ ಉಪವಿಭಾಗದಿಕಾರಿಗಳಿಗೆ ಗ್ರಾಮಲೆಕ್ಕಾಧಿಕಾರಿ ಜಾಕೀರ್ ಹುಸೇನ್ ಮೂಲಕ ಮನವಿ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ತ ಮ ನರಸಿಂಹ 19/10/2022 ರಂದು ಸಂಜೆ 4 ಗಂಟೆಗೆ ಹೊಸದಿಗಂತ ಪತ್ರಿಕೆ ವರದಿಗಾರರಾದ ಬಿ.ಡಿ ರವಿಕುಮಾರ್ ಅವರು ಸಾಗರ ತಾಲ್ಲೂಕಿನ ಆನಂದಪುರಂ ಬಳಿಯ ಕೆ. ಹೊಸಕೊಪ್ಪದಲ್ಲಿ ಕಲ್ಲು ಗಣಿಗಾರಿಕೆಯಿಂದ ಆಗುತ್ತಿರುವ ದುಷ್ಪರಿಣಾಮ ಮತ್ತು ರಸ್ತೆ ಹಾಳಾಗುತ್ತಿರುವ ಬಗ್ಗೆ ಗ್ರಾಮಸ್ಥರ ದೂರಿನ ಮೇರೆಗೆ ವರದಿಗಾಗಿ ತೆರಳಿದ್ದ ಸಂಧರ್ಭದಲ್ಲಿ ಪತ್ರಕರ್ತ ಬಿ.ಡಿ ರವಿಕುಮಾರ್‌ ಅವರು ಗ್ರಾಮಸ್ಥರ ಅಹವಾಲುಗಳನ್ನು ಆಲಿಸುತ್ತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಕಲ್ಲುಗಣಿಗಾರಿಕೆಯ ಬಸವರಾಜು ಎಂಬ ವ್ಯಕ್ತಿ ತನ್ನ ಸಹಚರದೊಂದಿಗೆ ಆಗಮಿಸಿ ಪತ್ರಕರ್ತ ರವಿಕುಮಾರ್ ಅವರನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿರುತ್ತಾನೆ. ಇಲ್ಲಿಗೆ ಬಂದು ಯಾವ ಪತ್ರಕರ್ತರು ವರದಿ ಮಾಡಬಾರದು ಎಂದು ಬೆದರಿಕೆ ಹಾಕಿದ್ದಲ್ಲದೆ, ಕೊಲೆ ಮಾಡುವುದಾಗಿಯೂ ಜೀವಬೆದರಿಕೆ ಹಾಕಿರುತ್ತಾರೆ.

ಪತ್ರಕರ್ತ ಬಿ.ಡಿ ರವಿಕುಮಾರ್ ಅವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬಸವರಾಜು ಮತ್ತಿತರರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕೆಂದು ಸಂಘವು ಆಗ್ರಹಿಸುತ್ತದೆ ಎಂದರು.
ಈ ಸಂಧರ್ಭದಲ್ಲಿ ಪತ್ರಕರ್ತರುಗಳಾದ ರಿ ರಾ ರವಿಶಂಕರ್ ,ಚಿದಾನಂದ ಸ್ವಾಮಿ ,ಪರಶುರಾಮ್ ,ಸೆಬಾಸ್ಟಿಯನ್ ಮ್ಯಾಥ್ಯೂಸ್ ,ಸುಧೀಂದ್ರ ಹೆಬ್ಬಾರ್ ,ರಫ಼ಿ ರಿಪ್ಪನ್‌ಪೇಟೆ ,ಪಿಯೂಸ್ ರೋಡ್ರಿಗಸ್ ಮತ್ತು ದೇವರಾಜ್ ಆರಗ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *