ರಿಪ್ಪನ್‌ಪೇಟೆ : ಕೌಟುಂಬಿಕ ಕಲಹದಿಂದ ಬೇಸತ್ತು ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಸಮೀಪದ ನೇರಲಮನೆ ಗ್ರಾಮದಲ್ಲಿ ನಡೆದಿದೆ.
ನೇರಲೆಮನೆ ಗ್ರಾಮದ ಬೀರಪ್ಪ (50) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.
ನೇರಲಮನೆ ಗ್ರಾಮದ ಬೀರಪ್ಪ ರವರ ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ಗಂಡನನ್ನು ಬಿಟ್ಟು ಬೆಂಗಳೂರಿನಲ್ಲಿ ನೆಲೆಸಿದ್ದು, ಕಳೆದ ಒಂದು ವರ್ಷದ ಹಿಂದೆ ತನ್ನ ಗಂಡನ ವಿರುದ್ಧ ಹೊಸನಗರ ನ್ಯಾಯಾಲಯದಲ್ಲಿ ವಿಚ್ಛೇಧನ ಹಾಗೂ ಜೀವನಾಂಶಕ್ಕಾಗಿ ಧಾವೆ ಹೂಡಿರುತ್ತಾರೆ.ಸಂಸಾರದ ವಿಚಾರವಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಬೀರಪ್ಪ ಮದ್ಯಪಾನ ಮಾಡುವ ಅಭ್ಯಾಸ ಹೊಂದಿದ್ದ.ಕೌಟುಂಬಿಕ ವಿಚಾರದಲ್ಲಿ ತೀವ್ರ ಮನನೊಂದಿದ್ದ ಬೀರಪ್ಪ ಮಂಗಳವಾರ ಸಂಜೆ 06 ಗಂಟೆಯ ಸುಮಾರಿಗೆ ಮನೆಯ ಮುಂದಿನ ಜಗಲಿಯಲ್ಲಿ ಪಕಾಸಿಗೆ ತನ್ನ ಪಂಚೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.