ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳು ವಿದೇಶಿ ವಿಶ್ವ ವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕೆ ಶೈಕ್ಷಣಿಕ ಸಾಲ ನೀಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಮಾಸ್ಟರ್ ಡಿಗ್ರಿ, ಪಿ.ಹೆಚ್.ಡಿ. ಹಾಗೂ ಪೋಸ್ಟ್ ಡಾಕ್ಟರಲ್ ಕೋರ್ಸ್ಗಳ ವ್ಯಾಸಂಗಕ್ಕೆ ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ಪ್ರವೇಶ ಪಡೆದಿರುವ ಅಭ್ಯರ್ಥಿಗಳಿಗೆ ವಾರ್ಷಿಕ ರೂ. 3.50 ಲಕ್ಷಗಳಂತೆ ಕೋರ್ಸ್ನ ಅವಧಿಗೆ ಗರಿಷ್ಟ ರೂ. 10.00 ಲಕ್ಷಗಳ ಸಾಲವನ್ನು ಶೇ. 2ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು.
ವಿದ್ಯಾರ್ಥಿ ಕುಟುಂಬದ ವಾರ್ಷಿಕ ವರಮಾನ ರೂ. 3.50 ಲಕ್ಷಗಳ ಮಿತಿಯಲ್ಲಿರಬೇಕು. ಮಂಜೂರು ಮಾಡುವ ಸಾಲದ ಭದ್ರತೆಗೆ ಪೋಷಕರು/ಜಮೀನುದಾರರು ಸ್ಥಿರಾಸ್ತಿ ಭದ್ರತೆಯನ್ನು ನೀಡಬೇಕು.
ಆಸಕ್ತರು ಅರ್ಜಿಯನ್ನು ಸೇವಾಸಿಂಧು ಪೊರ್ಟಲ್ ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾಕೇಂದ್ರಗಳಲ್ಲಿ ಆನ್ಲೈನ್ ಮೂಲಕ ದಿ: 30/11/2022 ರೊಳಗಾಗಿ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್ಸೈಟ್ www.kvcdc.karnataka.gov.in
ದೂ.ಸಂ.: 080-29904268 ಅಥವಾ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಭಾಗ್ಯ ನಿಲಯ, ಭಂಡಾರಿ ಗ್ಯಾಸ್ ಏಜೆನ್ಸಿ ಹತ್ತಿರ, 1ನೇ ತಿರುವು, ಗಾಂಧಿನಗರ, ಶಿವಮೊಗ್ಗ ದೂ.ಸಂ.: 08182-229634 ನ್ನು ಸಂಪರ್ಕಿಸುವುದು.
ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ವತಿಯಿಂದ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮವು 2022-23ನೇ ಸಾಲಿಗೆ ಬಸವ ಬೆಳಗು, ವಿದೇಶ ವಿದ್ಯಾವಿಕಾಸ, ಜೀವಜಲ, ಸ್ವಸಹಾಯ ಸಂಘಗಳಿಗೆ ಉತ್ತೇಜನ ಹಾಗೂ ಕಾಯಕ ಕಿರಣ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಲ ಹಾಗೂ ಸಹಾಯಧನ ಸೌಲಭ್ಯಕ್ಕಾಗಿ ವೀರಶೈವ ಲಿಂಗಾಯತ ಸಮುದಾಯದ ಅರ್ಹ ಫಲಾಪೇಕ್ಷಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಆಸಕ್ತರು ಅರ್ಜಿಯನ್ನು ಸೇವಾಸಿಂಧು ಪೊರ್ಟಲ್ ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾಕೇಂದ್ರಗಳಲ್ಲಿ ಎಲ್ಲಾ ದಾಖಲೆಗಳೊಂದಿಗೆ ಆನ್ಲೈನ್ ಮೂಲಕ ದಿ: 30/11/2022 ರೊಳಗಾಗಿ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್ಸೈಟ್ www.kvldcl.karnataka.gov.in, whatsapp No. – 9900012351, ದೂ.ಸಂ.: 080-22865522, ಅಥವಾ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಭಾಗ್ಯ ನಿಲಯ, ಭಂಡಾರಿ ಗ್ಯಾಸ್ ಏಜೆನ್ಸಿ ಹತ್ತಿರ, 1ನೇ ತಿರುವು, ಗಾಂಧಿನಗರ, ಶಿವಮೊಗ್ಗ ದೂ.ಸಂ.: 08182-229634 ನ್ನು ಸಂಪರ್ಕಿಸುವುದು.
		 
                         
                         
                         
                         
                         
                         
                         
                         
                         
                        
