ಮಹಿಳೆ ನಾಪತ್ತೆಯಾಗಿದ್ದ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ. ಪತಿಯೆ ಈ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ.
ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯ ಕೆರೆಕೊಪ್ಪ ಗ್ರಾಮದಲ್ಲಿ ದಿನಾಂಕ 04-08-2022ರಂದು ಮಹಿಳೆ ಕಾಣೆಯಾಗಿದ್ದಾಳೆಂದು ಮಹಿಳೆಯ ಅಣ್ಣ ಅಣ್ಣಪ್ಪ ಸೊರಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕಾಣೆಯಾದ ಪುಷ್ಪಾವತಿ ಯನ್ನು ಆಕೆಯ ಗಂಡ ದಯಾನಂದ ಕೊಲೆ ಮಾಡಿ ವರದಾ ನದಿಯಲ್ಲಿ ಎಸೆದಿರುವುದು ಪೊಲೀಸ್ ತನಿಖೆಯಲ್ಲಿ ದೃಢಪಟ್ಟಿದೆ.
ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ರಾಜಶೇಖರ್ ವೃತ್ತ ನಿರೀಕ್ಷಕರು ಸೊರಬ ಹಾಗೂ ದೇವರಾಯ ಉಪನಿರೀಕ್ಷಕರು ಸೊರಬ ಠಾಣೆ ಹಾಗೂ ಸಿಬ್ಬಂದಿ ವರ್ಗದವರು ಈ ಪ್ರಕರಣವನ್ನ ಬೇಧಿಸಿದ್ದಾರೆ.