ಹೊಸನಗರ ಅರಣ್ಯ ಇಲಾಖೆ ವ್ಯಾಪ್ತಿಯ ಕಾರಕ್ಕಿ-ಹೊಸಹಳ್ಳಿ ಮರುಜೇವಣಿ ಗ್ರಾಮ ಅರಣ್ಯ ಸಮಿತಿಯ ಮುಂದಿನ ಐದು ವರ್ಷದ ಅವಧಿಗೆ ನೂತನ ಅಧ್ಯಕ್ಷರಾಗಿ ಉಮೇಶ್ ಸಿ ಜಾಗದ್ದೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂದು ಕೋಡೂರು ಸಮೀಪದ ಮುತ್ತಲ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರು ಒಕ್ಕೊರಲಿನಿಂದ ಉಮೇಶ್ ಸಿ ಜಾಗದ್ದೆ ರವರನ್ನು ಮರುಜೇವಣಿ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರನ್ನಾಗಿ ಅವಿರೋಧ ಆಯ್ಕೆ ಮಾಡಿದ್ದಾರೆ.
ಕಾರ್ಯದರ್ಶಿಯಾಗಿ ಉಪವಲಯ ಅರಣ್ಯಾಧಿಕಾರಿ ಮಂಜುನಾಥ್, ನಿರ್ವಹಣಾ ಸಮಿತಿ ಸದಸ್ಯರುಗಳಾಗಿ
ರಮೇಶ್ ,ರಾಧಾ , ಪದ್ಮಾವತಿ , ಗಂಗಾಧರ , ದಿನೇಶ್ , ಶಶಿಕಲಾ, ಅಶಾ, ಗಣೇಶ್ ಮತ್ತು ರೂಪ ಇವರುಗಳನ್ನು ಆಯ್ಕೆ ಮಾಡಲಾಯಿತು.
ಚುನಾವಣಾಧಿಕಾರಿಯಾಗಿ ರಾಜಸ್ವ ನಿರೀಕ್ಷಕರಾದ ಸೈಯದ್ ಅಪ್ರೋಜ್ ಕಾರ್ಯ ನಿರ್ವಹಿಸಿದ್ದರು.
ಈ ಸಂಧರ್ಭದಲ್ಲಿ ಚಿಕ್ಕ ಜೇನಿ ಗ್ರಾಪಂ ಅಧ್ಯಕ್ಷೆ ರಾಧಮ್ಮ ಕೃಷ್ಣಪ್ಪ, ಗ್ರಾಮ ಲೆಕ್ಕಾಧಿಕಾರಿ ಶ್ವೇತಾ,ಅರಣ್ಯ ವೀಕ್ಷಕರಾದ ಕೃಷ್ಣಮೂರ್ತಿ ಕೆ ಆರ್ ,ಆರಣ್ಯ ರಕ್ಷಕ ಭರತ್ ಮತ್ತು ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.