Headlines

ಯಕ್ಷಗಾನ ಕಲೆಗೆ ಸಾವಿರ ವರ್ಷದ ಇತಿಹಾಸವಿದೆ : ಶ್ವೇತ ಶ್ರೀಧರ್

ಹೊಸನಗರ : ಯಕ್ಷಗಾನ ಕಲೆಗೆ ಸಾವಿರಾರು ವರ್ಷಗಳ ಇತಿಹಾಸ ವಿದೆ.ಕಲಾವಿದರು ತಮ್ಮ ಪ್ರತಿಭೆ ಯನ್ನು ಯಾವುದೇ ತಯಾರಿ ಇಲ್ಲದೆ ಕ್ಷಣ ಕ್ಷಣಕ್ಕೂ ಪ್ರದರ್ಶನ ನೀಡಿ..ಭಾಗವತರ ಪದ್ಯಕ್ಕೆ ಹೆಜ್ಜೆ ಹಾಕಿ ಅರ್ಥ ಹೇಳುವ ಸ್ಪಷ್ಟ ಕನ್ನಡ ಉಚ್ಚಾರಣೆ ಮಾಡುವ ಕಲೆ…ಸಾಂಪ್ರದಾಯಿಕ, ಸಾಂಸ್ಕೃತಿಕ, ಕಲೆ ಯಕ್ಷಗಾನವಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಮಹಿಳಾ ರ್ಮೋಚಾ ಕಾರ್ಯದರ್ಶಿ ಮಹಿಳಾ ಸಂಘಟನೆಯ ಮುಖ್ಯಸ್ಥೆ ಶ್ವೇತ ಶ್ರೀಧರ್ ಹೇಳಿದರು.


ಶುಕ್ರವಾರ  ಬೆಂಗಳೂರು ರವಿಂದ್ರ ಕಲಾ ಕ್ಷೇತ್ರದಲ್ಲಿ ಯಕ್ಷ ಮಿತ್ರ ಬಳಗ ಬೆಂಗಳೂರು ಹಾಗೂ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಡಿಯಲ್ಲಿ
ಆಯೋಜಿಸಿದ್ದ ಚಂದ್ರಮುಖಿ ಯಕ್ಷಗಾನ ದ 200ನೇ ಪ್ರದರ್ಶನ ದ ಸಭಾ ಕಾರ್ಯಕ್ರಮ ದಲ್ಲಿ “ಸಮಾಜ ಸೇವಾ ರತ್ನ” ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಅವರು ಕೊರೋನಾ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ರು ಸೇರಿದಂತೆ ಜಾನಪದ ಕಲಾವಿದರು ಸಂಕಷ್ಟದ ಕಣ್ಣಿರು ಸುರಿಸಿದ್ದಾರೆ.ಅರ್ಥಿಕ ಹೊಡೆತ ಅನುಭವಿಸಿದ್ದಾರೆ.ಕಲಾವಿದರು ತಮ್ಮ ನೋವುಗಳನ್ನು ಹೃದಯದಲ್ಲಿ ಬಚ್ಚಿಟ್ಟುಕೊಂಡು ರಂಗಸ್ಥಳದಲ್ಲಿ  ರಾಜರಂತೆ ಪ್ರದರ್ಶನ ನೀಡಿ ಕತೆಗೆ ಜೀವ ತುಂಬುತ್ತಾರೆ.ಕಲಾವಿದರನ್ನು ಬೆಳೆಸುವ ಕಾರ್ಯ ಎಲ್ಲರ ಕರ್ತವ್ಯ ವಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಿವಮೊಗ್ಗ ಗ್ರಾಮಂತರ ವಿಧಾನ ಸಭಾ ಕಾಂಗ್ರೆಸ್ ಅಭ್ಯರ್ಥಿ ಪಲ್ಲವಿ ಜಿ,ರಾಜ್ಯ ಡಿ ದರ್ಜೆ ನೌಕರರ ಸಂಘದ ಅಧ್ಯಕ್ಷರಾದ ನಾಗೇಂದ್ರ ಗೌಡ, ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು, ನಾಡಿ ತಜ್ಣ ಡಾ.ಸಚಿನ್ ಝಾಡಬೂಕಿ, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಮುಕ್ತಿ ವಾಹನ ದಾನಿ ರಿಪ್ಪನ್ ಪೇಟೆ ಕೆ.ಚಂದ್ರಶೇಖರ್, ಜಿಲ್ಲಾ ದೈವಜ್ಣಾ ಮಹಿಳಾ ಮುಖಂಡೆ ರೇವತಿ ಸತ್ತೀಶ್,ಹಿರಿಯ ಯಕ್ಷಗಾನ ಕಲಾವಿದ  ಬಲ್ಕೂರು ಕೃಷ್ಣ ಯಾಜಿ, ಸಾಲಿಗ್ರಾಮ ಮೇಳದ ಮುಖ್ಯ ಭಾಗವತ್ ರಾಮಕೃಷ್ಣ ಹಿಲ್ಲೂರು ಉಪಸ್ಥಿತರಿದ್ದರು.

ಪ್ರಸಂಗ ಕರ್ತ ದೇವದಾಸ್ ಈಶ್ವರ ಮಂಗಲ ಸ್ವಾಗತಿಸಿ,ಜೀ ಟಿವಿ ಪ್ರಣವ್ ಕಾರ್ಯಕ್ರಮ ನಿರೂಪಿಸಿದ್ದರು.

Leave a Reply

Your email address will not be published. Required fields are marked *