ಶಿವಮೊಗ್ಗ ನಗರದಲ್ಲಿ ಕಳೆದ 2021-22ರ ಬಜೆಟ್ನಲ್ಲಿ ಮುಖ್ಯಮಂತ್ರಿಗಳಾದ ಬೊಮ್ಮಾಯಿಯವರು ಮಂಜೂರು ಮಾಡಿ, 20 ಕೋಟಿ ರೂಪಾಯಿ ಹಣವನ್ನು ಮೀಸಲಿಡಲಾಗಿದ್ದ ಆಯುಷ್
ವಿಶ್ವ ವಿದ್ಯಾಲಯದ ಯೋಜನೆಯ ಭರವಸೆಯು ಖಾಸಗಿ ಆಯುರ್ವೇದ ಮತ್ತು ಖಾಸಗಿ ನರ್ಸಿಂಗ್ ಹೋಂಗಳ ಚಿತಾವಣೆಯಿಂದ ಠುಸ್ಸ್ ಆಗಿದೆ ಎಂದು ಸಮಾಜವಾದಿ ಗೋಪಾಲಗೌಡ ಅಧ್ಯಯನ ಟ್ರಸ್ಟ್ ನ ಕಲ್ಲೂರು ಮೇಘರಾಜ್ ಮತ್ತು ಆರ್ ಎ ಚಾಬುಸಾಬ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಇಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಶಿವಮೊಗ್ಗದಲ್ಲಿ ಆಯುಷ್ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಿದರೆ ಖಾಸಗಿ ಮತ್ತು ಸರ್ಕಾರಿ ಆಯುರ್ವೇದ, ಯುನಾನಿ, ಹೋಮಿಯೋಪತಿ, ಯೋಗ, ನ್ಯಾಚುಯೋಪತಿ ಮುಂತಾದ ಕಾಲೇಜುಗಳು ಈ ವಿ. ವಿ. ಯ ವ್ಯಾಪ್ತಿಗೆ ಒಳಪಡುತ್ತವೆ. ಈ ಹಿಂದೆ ಶಿವಮೊಗ್ಗ ಹೊರವಲಯದ ಸೋಗಾನೆ ಸರ್ವೆ ನಂ. 120 ರಲ್ಲಿ ಆಯೂಶ್ ವಿ. ವಿ. ಯನ್ನು ಸ್ಥಾಪನೆ ಮಾಡಬಹುದಾಗಿದೆ.
ಸರ್ವೆ ನಂ. 120ರಲ್ಲಿ ಆಯುರ್ವೇದಿಕ್ ಕಾಲೇಜಿಗೆ ಮಂಜೂರಾತಿ ಜಾಗಕ್ಕೆ ಕಾಂಪೌಂಡ್ ನಿರ್ಮಿಸಲು ಕರ್ನಾಟಕ ಸರ್ಕಾರ 92 ಲಕ್ಷ ರೂಪಾಯಿಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ಈ ಪೈಕಿ ರೂ. 41,22,000-00 ಹಣ ಖರ್ಚಾಗಿ ಕಾಲೇಜಿಗಾಗಿ 100-00 ಎಕರೆ ಜಮೀನು ಮೀಸಲಿಡಲಾಗಿದೆ. ನೀಡಲಾಗಿದೆ. ಸುಮಾರು 100 ಮೀಟರ್ ಕಾಂಪೌಂಡ್ ನಿರ್ಮಿಸಲಾಗಿದೆ. ಉಳಿದ ಹಣ ರೂ. 48,08,000-00 ಗಳು ಶಿವಮೊಗ್ಗ ಪಿ.ಡಬ್ಲೂಡಿ ನಂ.1 ಉಪವಿಭಾಗದಲ್ಲಿ ಡೆಪಾಜಿಟ್ ಆಗಿದೆ.
ಸೋಗಾನೆ ಸರ್ವೆ ನಂ. 120 ರಲ್ಲಿ ಇದ್ದ 53 ಬಗರ್ಹುಕುಂ ರೈತರಿಗೆ ರೂ. 2.00 ಲಕ್ಷದಂತೆ ಒಟ್ಟು 33 ಬಗರ್ಹುಕುಂ ರೈತರಿಗೆ ಪರಿಹಾರದ ಹಣ ನೀಡಲಾಗಿದೆ ಉಳಿದ 20 ಬಗರ್ಹುಕುಂ ರೈತರು ಪರಿಹಾರ ಪಡೆಯದೇ ಹೈಕೋರ್ಟಿನಲ್ಲಿ ಮೊಕದ್ದಮೆ ಹೂಡಿದ್ದಾರೆ. ಈ ಮೊಕದ್ದಮೆಯನ್ನು ರಾಜ್ಯ ಸರ್ಕಾರ ಸಾರ್ವಜನಿಕರ ಹಿತಾಸಕ್ತಿಯಿಂದ ವಜಾ ಗೊಳಿಸಬೇಕಾಗಿದೆ.
ಇಷ್ಟೆಲ್ಲಾ ಸಕಾರಾತ್ಮಕ ಅಂಶಗಳನ್ನೇ ಗಮನಿಸಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಿ. ಎಸ್. ಯಡಿಯೂರಪ್ಪನವರು ಶಿವಮೊಗ್ಗಕ್ಕೆ ನೂತನ ಆಯುಷ್ ವಿ. ವಿ. ಯನ್ನು ನಮ್ಮ ಸಂಘಟನೆಯ ಕೋರಿಕೆಯ ಮೇರೆಗೆ ಮತ್ತು ಹಿರಿಯ ಮುಖಂಡ ಡಿ. ಹೆಚ್. ಶಂಕರಮೂರ್ತಿಯವರ ಶಿಫಾರಸ್ಸಿನ ಮೇಲೆ ಮಂಜೂರು ಮಾಡಿದ್ದರು. ಆದರೆ ಈ ಮಂಜೂರಾತಿ ಆದೇಶವನ್ನು ಜಾರಿಗೊಳಿಸದೇ ಶ್ರೀ ಬೊಮ್ಮಾಯಿಯವರ ಸರ್ಕಾರ ಅಸಡ್ಡೆ ತೋರುತ್ತಿರುವುದು ಖಂಡನೀಯ ವಿಚಾರವಾಗಿದೆ ಎಂದು ಈ ಸಂಧರ್ಭದಲ್ಲಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹೊಳೆಮಡಿಲು ವೆಂಕಟೇಶ್, ಡಾ. ಶೇಖರ್ ಗೌಳೇರ್, ಎಸ್. ಸಿ. ರಾಮಚಂದ್ರ, ಹೆಚ್. ಎಂ. ಸಂಗಯ್ಯ, ಶಂಕ್ರಾನಾಯ್ಕ, ಮುಂತಾದವರು ಹಾಜರಿದ್ದರು.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇