ಶಿವಮೊಗ್ಗದ ಕುಖ್ಯಾತ ರೌಡಿ ಹಂದಿ ಅಣ್ಣಿ ಬರ್ಬರ ಹತ್ಯೆಯ ಹಿಂದಿರುವ ಹಂತಕರು ಯಾರು??? ರೌಡಿ ಹಂದಿ ಅಣ್ಣಿ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಶಿವಮೊಗ್ಗದ ಕುಖ್ಯಾತ ಹಂದಿ ಅಣ್ಣಿ ಯನ್ನು ನಡು ರಸ್ತೆಯಲ್ಲಿ ಬರ್ನರ ಹತ್ಯೆ ಮಾಡಲಾಗಿದೆ. ಭೀಕರ ಹತ್ಯೆಗೆ ನಿಖರ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಿದೆ.

ಬಲ್ಲ ಮೂಲಗಳ ಪ್ರಕಾರ ಲೇಔಟ್ ಗೆ ಸಂಬಂಧ ಪಟ್ಟಂತೆ ನವುಲೆ ಆನಂದ್ ಗ್ಯಾಂಗ್, ಆಂಥೋಣಿ, ಭರತ್, ನಜ್ರೂ ಗ್ಯಾಂಗ್ ಗಳ ಮೇಲೆ ಅನುಮಾನಗಳಿವೆ. .

ಶಿವಮೊಗ್ಗ ಅಂದಿನ ಕಾಲದ  ಲವ ಕುಶ ಎಂಬ ರೌಡಿ ಸಹೋದರರ ಮರ್ಡರ್ ಪ್ರಕರಣದಲ್ಲಿ ರೌಡಿಸಂ ಲೋಕಕ್ಕೆ ಕಾಲಿಟ್ಟಿದ್ದ ಹಂದಿ ಅಣ್ಣಿ ಶಿವಮೊಗ್ಗ ಪಾತಕ ಲೋಕದಲ್ಲಿ ಭರ್ಜರಿ ಹೆಸರು ಮತ್ತು ಹವಾ ಸೃಷ್ಟಿ ಮಾಡಿದ್ದ.ಹಂದಿ ಅಣ್ಣಿಯನ್ನು ಗಡಿಪಾರು ಸಹ ಮಾಡಲು ಸಿದ್ದತೆ ನಡೆದಿತ್ತು. ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದ ಎನ್ನಲಾಗುತ್ತಿದೆ.

ಕೆಲ ದಿನಗಳ ಹಿಂದೆ ಹಂದಿ ಅಣ್ಣಿಯ ಸಹೋದರ ಗಿರೀಶ್ ನನ್ನು ಮರ್ಡರ್ ಮಾಡಲಾಗಿತ್ತು. ಗೋಪಾಳದಲ್ಲಿ ಕ್ಷುಲ್ಲಕ ವಿಚಾರದಲ್ಲಿ ನಸ್ರೂ ಗ್ಯಾಂಗ್ ಗಿರೀಶ್ ನನ್ನು ಮರ್ಡರ್ ಮಾಡಿತ್ತು. ಈ ವಿಚಾರದಲ್ಲಿ ನಸ್ರೂ ಮತ್ತು ಹಂದಿ ಅಣ್ಣಿ ನಡುವೆ ವೈಷಮ್ಯ ಉಂಟಾಗಿತ್ತು.

ಮೋಟಿ ವೆಂಕಿ ಮರ್ಡರ್ ಪ್ರಕರಣದಲ್ಲಿ ಹಂದಿ ಹಣ್ಣಿಯನ್ನ ಜೈಲಿಗೆ ಕಳುಹಿಸಲಾಗಿತ್ತು. ಜೀವಬೆದರಿಕೆ ವಿಚಾರದಲ್ಲಿ ಖುದ್ದಾಗಿ ಶಿವಮೊಗ್ಗದ ಜೈಲಿನಲ್ಲಿ ಮೂರು ತಿಂಗಳ ಹಿಂದೆ ಜೈಲಿಗೆ ಹೋಗಿ ಬಂದಿದ್ದ ಹಂದಿ ಅಣ್ಣಿ ಮರಳು ದಂಧೆಯಲ್ಲಿ, ಬಡ್ಡಿ ವ್ಯವಹಾರದಲ್ಲಿ ಭರ್ಜರಿ ಹೆಸರು ಮಾಡಿದ್ದ

ಆದರೆ ಇತ್ತೀಚೆಗೆ ಹಂದಿ ಅಣ್ಣಿ ಮರಳು ಮತ್ತು ರಿಯಲ್ ಎಸ್ಟೇಟ್ ಮತ್ತು ಬಡ್ಡಿವ್ಯವಹಾರಗಳಲ್ಲೂ ವಿರೋಧಿಗಳಿದ್ದರು ಎಂದು ಹೇಳಲಾಗುತ್ತಿದೆ.ತಮ್ಮ ಗಿರೀಶ್ ಮರ್ಡರ್ ನಂತರ ಹಂದಿ ಅಣ್ಣಿ ಎಲ್ಲಾ ಬಿಟ್ಟು ಸುಮ್ಮನಾಗಿದ್ದಾನೆ. ಆದರೆ ಹಂದಿ ಅಣ್ಣಿ ಪಾತಕ ಲೋಕದಿಂದ ದೂರವಾಗುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಪಾತಕ ಲೋಕದ ವಿರೋಧಿಗಳು ಹತ್ಯೆ ಮಾಡಿರಬಹುದು ಎಂದು ಹೇಳಲಾಗುತ್ತಿದೆ.

ತಿಂಗಳ ಹಿಂದೆಯೇ ಅಟ್ಯಾಕ್ ಬಗ್ಗೆ ಸುಳಿವು

ಪಾತಕ ಲೋಕದ ವಿರೋದಿಗಳು ತನ್ನನ್ನು ಕೊಲೆ ಮಾಡುವ ಹುನ್ನಾರ ಸಂಬಂಧ ತಿಂಗಳ ಹಿಂದೆಯೇ ಹಂದಿ ಅಣ್ಣಿಗೆ ವಿಚಾರ ಗೊತ್ತಾಗಿತ್ತು. ಏಕೆಂದರೆ ಒಂದು ತಿಂಗಳ ಹಿಂದೇಯೇ ಆತನ ಮನೆ ಬಳಿಯೇ ಆತನ ಮೆಲೆ ದಾಳಿ ಮಾಡುವ ಪ್ರಯತ್ನ ನಡೆದಿತ್ತು . ಈ ಬಗ್ಗೆ ಸಿಸಿ ಟಿವಿ ದೃಶ್ಯಗಳ ಸಮೇತ ಹಂದಿ ಅಣ್ಣಿ ವಿನೋಬನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದ ಎನ್ನಲಾಗುತ್ತಿದೆ.

ವಾಟ್ಸಾಪ್ ಸ್ಟೇಟಸ್ ಹಾಕಿ 15 ನಿಮಿಷದಲ್ಲಿಯೇ ಮರ್ಡರ್ :

ಹಂದಿ ಅಣ್ಣಿ ತನ್ನ ಸೋಶಿಯಲ್ ಮೀಡಿಯಾದ ಸ್ಟೇಟಸ್​ನಲ್ಲಿ ತೆಲುಗು ಭಾಷೆಯಲ್ಲಿರುವ ಡೈಲಾಗ್ ಒಂದನ್ನು ಹಾಕಿಕೊಂಡಿದ್ದ. ಅಲ್ಲದೆ ನನ್ನನ್ನು ತುಳಿಯೋಕೆ ಯಾರಿಂದಲೂ ಸಾಧ್ಯವಿಲ್ಲ ? ಎಂದು ಕನ್ನಡದ ಫೋಸ್ಟರ್​ ಸ್ಟೇಟಸ್​ನಲ್ಲಿ ಹಾಕಿಕೊಂಡಿದ್ದ. ಇದಾದ 15 ನಿಮಿಷದಲ್ಲಿಯೇ ಆತನ ಕೊಲೆಯಾಗಿದೆ.

ಮರ್ಡರ್ ಮಾಡಿದ್ದು ಬೆಂಗಳೂರು ಮೂಲದ ಹಂತಕರಾ?????


ಹಂದಿ ಅಣ್ಣಿಯನ್ನ ಕೊಲೆ ಮಾಡಿದ ಗ್ಯಾಂಗ್ ಬೆಂಗಳೂರಿನ ಮೂಲದವರು ಎನ್ನಲಾಗುತ್ತಿದೆ. ಏಕೆಂದರೆ ಈ ಹಿಂದೆ ಶಿವಮೊಗ್ಗದ ಕುಖ್ಯಾತ ರೌಡಿ ಮೆಂಟಲ್ ಸೀನಾ ಮರ್ಡರ್ ಕೇಸ್​ನಲ್ಲಿ ಬೆಂಗಳೂರು ಹುಡುಗರು ಇದ್ದರು.ಅಲ್ಲದೆ ಇವತ್ತು ಕೆಲವು ಪ್ರಕರಣಗಳಿಗೆ ಸಂಬಂದಿಸಿದಂತೆ ಬೆಂಗಳೂರಿನ ಹುಡುಗರು ಕೋರ್ಟ್ ಕೇಸ್​ಗೆ ಹಾಜರಾಗಿದ್ದರು.

ಜೈಲಲ್ಲಿ ಇರುವಾಗಲೇ ಹಂದಿ ಅಣ್ಣಿಯ ಪ್ರೇಮ್ ಕಹಾನಿ:

ಕೊಲೆ ಪ್ರಕರಣವೊಂದರಲ್ಲಿ ಬೆಂಗಳೂರಿನ ಜೈಲಿನಲ್ಲಿ ಕಾರಾಗೃಹ ಶಿಕ್ಷೆಗೆ ಒಳಗಾಗಿದ್ದಾಗ ಪರಿಚಯವಾಗಿದ್ದ ಯುವತಿಯೋರ್ವಳನ್ನ ಅಣ್ಣಿ ಮದುವೆಯಾಗುತ್ತಾನೆ. ಮದುವೆಯಾಗಿ ಬಹುತೇಕ ರೌಡಿಸಂ ಚಟುವಟಿಕೆಯಿಂದ ಹೊರಗುಳಿದಿದ್ದನು. ಆದರೆ ಯಮನ ರೂಪದಲ್ಲಿ ಬಂದ ಅಪರಿಚಿತ ಗ್ಯಾಂಗ್ ನಡುರಸ್ತೆಯಲ್ಲಿ ಹೊಡೆದು ಹಾಕಿದೆ.

ಒಟ್ಟಾರೆಯಾಗಿ ಶಿವಮೊಗ್ಗ ಪಾತಕಲೋಕದಲ್ಲಿ ಲವಕುಶ ಮರಣಾನಂತರ ವಿಜೃಂಭಣೆಯಿಂದ ಹವಾ ಸೃಷ್ಟಿಸಿ ಆಳುತಿದ್ದ ಕುಖ್ಯಾತ ರೌಡಿಯೊಬ್ಬನ ಅಂತ್ಯವಾಗಿದೆ.

ಹಂದಿ ಅಣ್ಣಿಯ ಹಂತಕರು ಯಾರು ಹಾಗೂ ಏನಕ್ಕಾಗಿ ಹತ್ಯೆ ನಡೆಯಿತು ಎಂಬುವುದ ಪೊಲೀಸ್ ತನಿಖೆಯಿಂದ ಹೊರ ಬರಬೇಕಾಗಿದೆ.



Leave a Reply

Your email address will not be published. Required fields are marked *