ರಿಪ್ಪನ್ಪೇಟೆ : ಇತಿಹಾಸ ಪ್ರಸಿದ್ದ ನಾಗರಹಳ್ಳಿಯ ಶ್ರೀ ನಾಗೇಂದ್ರಸ್ವಾಮಿಯ ದೇವಸ್ಥಾನದಲ್ಲಿ 02-08-2022 ರ ಮಂಗಳವಾರ ನಾಗರಪಂಚಮಿ ಅಂಗವಾಗಿ ವಾರ್ಷಿಕ ಜಾತ್ರಾ ಮಹೋತ್ಸವ ಏರ್ಪಡಿಸಲಾಗಿದೆ.
ಅಗಸ್ಟ್ 02 ರಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚಾ ಸಮೀಪದ ನಾಗರಹಳ್ಳಿಯ ಶ್ರೀ ನಾಗೇದ್ರಸ್ವಾಮಿಯ ದೇವಸ್ಥಾನದಲ್ಲಿ ನಾಗರಪಂಚಮಿ ಅಂಗವಾಗಿ ವಾರ್ಷಿಕ ಜಾತ್ರಾ ಮಹೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ ಹಾಗೂ ಮಧ್ಯಾಹ್ನ ಭಕ್ತಾಧಿಗಳಿಗೆ ಸಾಮೂಹಿಕ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ನಾಗೇಂದ್ರಸ್ವಾಮಿ ದೇವಸ್ಥಾನದ ಅಧ್ಯಕ್ಷರಾದ ಗೇರುಗಲ್ ಸತೀಶ್ ತಿಳಿಸಿದ್ದಾರೆ.