Headlines

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ರಸ್ತೆ ಬಲಿ – ದಿವ್ಯ ಮೌನಕ್ಕೆ ಶರಣಾದ ಶಾಸಕರು

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ರಸ್ತೆ ಬಲಿ – ದಿವ್ಯ ಮೌನಕ್ಕೆ ಶರಣಾದ ಶಾಸಕ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಣಗೆರೆ ಗ್ರಾಂ ಪಂ ವ್ಯಾಪ್ತಿಯ ಬಸವನಗದ್ದೆ ಸಮೀಪದ ಶಿರನಲ್ಲಿ ಬಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಹೊಂಡ ತೆಗೆದು ಕಳಪೆ ಕಾಮಗಾರಿ ನಡೆಸಿದ ಹಿನ್ನಲೆಯಲ್ಲಿ ಉತ್ತಮ ರಸ್ತೆ ಹದಗೆಟ್ಟು ಸಾರ್ವಜನಿಕರು ಓಡಾಡಲು ಹೆದರುವ ಪರಿಸ್ಥಿತಿ ಉಂಟಾಗಿದೆ.

ತೀರ್ಥಹಳ್ಳಿ – ಹಣಗೆರೆ – ಶಿವಮೊಗ್ಗಕ್ಕೆ ಹಾದು ಹೋಗುವ ಮುಖ್ಯ ರಸ್ತೆ ಅರ್ಧಕರ್ದ ಬಿರುಕು ಬಿಟ್ಟಿದ್ದು ವಾಹನ ಸವಾರರು ವಾಹನ ಚಲಿಸಲು ಭಯಭೀತರಾಗಿದ್ದಾರೆ.

ಆಯನೂರು – ಮಾಳೂರು ಮುಖ್ಯ ರಸ್ತೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ವೇಳೆ ರಸ್ತೆ ಬದಿಯಲ್ಲಿ ದೊಡ್ಡದಾದ ಟ್ರೆಂಚ್ ಗಳನ್ನು ಹೊಡೆದಿದ್ದು ಜುಲೈ 22 ರ ಸಂಜೆ 6 ಗಂಟೆಯ ಹೊತ್ತಿಗೆ ರಸ್ತೆ ಕುಸಿದಿದ್ದು. ಹಣಗೆರೆ ಗ್ರಾಮ ಪಂಚಾಯತಿ ಸಿಬ್ಬಂದಿ ಮಣಿಕಂಠ ಎಸ್ ಡಿ ತಕ್ಷಣ ಪಿ ಡಿ ಓ ಅಧಿಕಾರಿ & ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಕರೆ ಮಾಡಿ ತಿಳಿಸಿ ತಕ್ಷಣ ಬ್ಯಾರಿಕೆಡ್ ಹಾಕಲಾಯಿತು.

ಈ ಬಗ್ಗೆ ಮೌನ ವಹಿಸಿರುವ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ತೀರ್ಥ ಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರರಿಗೆ ಸ್ಥಳೀಯರು ಅಕ್ರೋಶ ಹೊರ ಹಾಕಿದ್ದಾರೆ. ತಕ್ಷಣ ಸ್ಪಂದಿಸಿ ರಸ್ತೆ ಸರಿ ಪಡಿಸಲು ಮನವಿ ಮಾಡಿದ್ದಾರೆ.