HOSANAGARA | ಮದ್ಯದ ವಿಚಾರಕ್ಕೆ ನಡುರಸ್ತೆಯಲ್ಲಿ ಯುವಕನ ಮೇಲೆ ಹಲ್ಲೆ -ಯುವಕ ಆಸ್ಪತ್ರೆ ದಾಖಲು , ಸಿಸಿಟಿವಿ ದೃಶ್ಯಾವಳಿ ವೈರಲ್
ಆರೋಪಿಗಳೊಬ್ಬರು ಜೀಪ್‌ನ ಟಯರ್ ಬಿಚ್ಚುವ ರಾಡ್‌ನಿಂದ ಲಕ್ಷ್ಮೀಶನ ತಲೆಗೆ ಹೊಡೆದಿದ್ದು, ಈ ಪರಿಣಾಮವಾಗಿ ಅವರು ತೀವ್ರ ಗಾಯಗೊಂಡಿದ್ದಾರೆ. ಪ್ರಾಥಮಿಕ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ…
ಹೊಸನಗರ, ಜುಲೈ 22: ಮದ್ಯದ ವಿಚಾರವಾಗಿ ತಕರಾರು ಉಂಟಾಗಿ ನಡುರಸ್ತೆಯಲ್ಲೇ ಯುವಕನೊಬ್ಬನ ಮೇಲೆ ತೀವ್ರ ಹಲ್ಲೆ ನಡೆಸಿರುವ ಘಟನೆ ನಿಟ್ಟೂರು ಸಮೀಪದ ಸಂಪೆಕಟ್ಟೆ ಸರ್ಕಲ್‌ನಲ್ಲಿ ನಡೆದಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ತುಂಬೆಗದ್ದೆ ಗ್ರಾಮದ ಲಕ್ಷ್ಮೀಶ ಎಂಬ ಯುವಕ ಗಾಯಗೊಂಡಿದ್ದು, ಪ್ರಸ್ತುತ ತೀರ್ಥಹಳ್ಳಿಯ ಜೆ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮದ್ಯ ತರಬೇಕೆಂದು ಒತ್ತಾಯ, ನಿರಾಕರಿಸಿದ್ದಕ್ಕೆ ಹಲ್ಲೆ
ಸಂಪೆಕಟ್ಟೆಯ ಅಂಗಡಿಗೆ ರಾತ್ರಿ 10 ಗಂಟೆ ಸುಮಾರಿಗೆ ತೆರಳಿದ್ದ ಲಕ್ಷ್ಮೀಶನಿಗೆ, ಜೀಪಿನಲ್ಲಿ ಬಂದ ಸುಬ್ರಹ್ಮಣ್ಯ, ಅವಿನಾಶ ಹಾಗೂ ರಾಘವೇಂದ್ರ ಎಂಬವರು ಮದ್ಯ ತರಬೇಕೆಂದು ಕೇಳಿದ್ದಾರೆ. ಆದರೆ, “ನಾನೇಕೆ ತರಬೇಕು?” ಎಂದು ಪ್ರಶ್ನಿಸಿದ ಲಕ್ಷ್ಮೀಶನ ಮೇಲೆ ಕೋಪಗೊಂಡು ಅವರು ಮನಬಂದಂತೆ ಹಲ್ಲೆ ನಡೆಸಿದ್ದಾರೆ.
ಜೀಪ್ ಟಯರ್ ರಾಡ್‌ನಿಂದ ತಲೆಗೆ ಹೊಡೆದು ಗಾಯ
ಆರೋಪಿಗಳೊಬ್ಬರು ಜೀಪ್‌ನ ಟಯರ್ ಬಿಚ್ಚುವ ರಾಡ್‌ನಿಂದ ಲಕ್ಷ್ಮೀಶನ ತಲೆಗೆ ಹೊಡೆದಿದ್ದು, ಈ ಪರಿಣಾಮವಾಗಿ ಅವರು ತೀವ್ರ ಗಾಯಗೊಂಡಿದ್ದಾರೆ. ಪ್ರಾಥಮಿಕ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ತೀರ್ಥಹಳ್ಳಿಗೆ ಸ್ಥಳಾಂತರಿಸಲಾಗಿದೆ.
ಘಟನೆ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.