Headlines

ರಿಪ್ಪನ್‌ಪೇಟೆಯ ನೂತನ ಹೈಟೆಕ್ ಶೌಚಾಲಯ ಲೋಕಾರ್ಪಣೆ :

ರಿಪ್ಪನ್‌ಪೇಟೆ: ಪಟ್ಟಣದ ವಿನಾಯಕ ವೃತ್ತದ ಸಮೀಪ ಸ್ಥಳೀಯ ಗ್ರಾಮಾಡಳಿತ ನೂತನವಾಗಿ ನಿರ್ಮಿಸಿರುವ ಸಮುದಾಯ ಶೌಚಾಲಯವನ್ನು ಗುರುವಾರ ಗ್ರಾಪಂ ಅಧ್ಯಕ್ಷರಾದ ಮಂಜುಳ ಕೇತಾರ್ಜಿ ರಾವ್ ರವರು ಸರಳ ಸಮಾರಂಭದ ಮೂಲಕ ಲೋಕಾರ್ಪಣೆ ಮಾಡಿದರು.


ನಂತರ ಮಾತನಾಡಿದ ಗ್ರಾಪಂ ಅಧ್ಯಕ್ಷೆ  ಮಂಜುಳ ಕೇತಾರ್ಜಿ ರಾವ್ ದುರಸ್ಥಿಯಾಗಿದ್ದ ಹಳೆಯ ಶೌಚಾಲಯವನ್ನು ಕೆಡವಿ ನೂತನ ಕಟ್ಟಡ ನಿರ್ಮಾಣ ಯೋಜನೆಯನ್ನು ಗ್ರಾಮ ಪಂಚಾಯತಿ ಕೈಗೆತ್ತಿಕೊಂಡ ಸಂದರ್ಭದಲ್ಲಿ ಅನೇಕ ಅಡೆತಡೆಗಳು ಎದುರಾದವು ಎಂದರು. ಗ್ರಾಮ ಪಂಚಾಯತಿಯ 15 ಲಕ್ಷ ರೂ. ಅನುದಾನದಲ್ಲಿ ಶೌಚಾಲಯವು ನಿರ್ಮಾಣಗೊಂಡಿದ್ದು, ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕವಾದ ಶೌಚಗೃಹಗಳನ್ನು ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ಹಾಗೂ ಶುಚಿತ್ವದ ನಿರ್ವಹಣೆಗಾಗಿ ಸಿಬ್ಬಂದಿಯನ್ನು ನೇಮಿಸಿದೆ. ಸಾರ್ವಜನಿಕರು ಶುಚಿತ್ವವನ್ನು ಕಾಪಾಡಿಕೊಂಡು ಬಳಕೆ ಮಾಡುವಂತೆ ಮನವಿಮಾಡಿದರು.

ಗ್ರಾಪಂ. ಸದಸ್ಯ ಆಸೀಫ್ ಭಾಷಾಸಾಬ್ ಮಾತನಾಡಿ ರಿಪ್ಪನ್‌ಪೇಟೆಯಲ್ಲಿ ಕೆಲ ಹೋರಾಟಗಾರರು ಎಲ್ಲಾ ಅಭಿವೃದ್ಧಿಯನ್ನು ನಾವೇ ಮಾಡಿದ್ದು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ರಿಪ್ಪನ್‌ಪೇಟೆಗೆ ಸ್ವಾತಂತ್ಯ ತಂದವರು ನಾವೇ ಎಂದು ಹೇಳುತ್ತಿದ್ದಾರೆ. ಇದನ್ನು ನಾವು ಸಹಿತ ಒಪ್ಪಿಕೊಂಡಿದ್ದೆವು. ಆದರೆ ಶೌಚಾಲಯ ನಿರ್ಮಿಸುವ ಸಂದರ್ಭದಲ್ಲಿ ಕೆಲ ಹೊರಾಟಗಾರರು ದುಡ್ಡಿದ್ದವರ ಪರ ನಿಂತು ಶೌಚಾಲಯ ನಿರ್ಮಾಣಕ್ಕೆ ತೊಂದರೆ ಮಾಡಿದ್ದರು. ಇದರಿಂದ ಅವರ ನಿಜಬಣ್ಣ ಸಾರ್ವಜನಿಕವಾಗಿ ಬಯಲಾಗಿದೆ. ಇಂತಹ ಹೋರಾಟಗಾರರ ವಿರೋಧದ ನಡುವೆಯು ರಾತ್ರಿ ಹಗಲೆನ್ನದೆ ಶ್ರಮ ವಹಿಸಿದ್ದೇವೆ. ನಿಂದನೆಗಳು, ಗಲಾಟೆ, ಕಾನೂನು ಹೋರಾಟಗಳನ್ನು ಎದುರಿಸಿ ಶೌಚಾಲಯ ಅನುಷ್ಠಾನಗೊಳಿಸಿದ್ದೇವೆ. ಇನ್ನೂ ಕೆಲವು ಅಭಿವೃದ್ಧಿ ಕಾರ್ಯಗಳು ನಮ್ಮ ಯೋಜನೆಯಲ್ಲಿದ್ದು, ಒಳ್ಳೆಯ ಕಾರ್ಯಗಳಿಗೆ ಅನಾವಶ್ಯಕ ವಿರೋಧ ವ್ಯಕ್ತಪಡಿಸದೆ ಅಭಿವೃದ್ಧಿಯ ಜೊತೆಗೆ ಕೈಜೋಡಿಸಿ ಎಂದು ಕೆಲ ಹೋರಾಟಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಪಂ ಸದಸ್ಯ ಸುಧೀಂದ್ರ ಪೂಜಾರಿ ಮಾತನಾಡಿ ಕೆಲವರು ಅನಗತ್ಯವಾಗಿ ನಮ್ಮ ಯೋಜನೆಯನ್ನು ಹಾಳುಗೆಡವಲು ಪ್ರಯತ್ನ ಪಟ್ಟರು. ಒಳ್ಳೆಯ ಮನಸ್ಸಿಲ್ಲದವರಿಂದ ಕುಕೃತ್ಯಗಳು ನಡೆಸಿ, ನಿರ್ಮಾಣಕ್ಕೆ ತೆಡೆಯೊಡ್ಡಿದ್ದರು. ಅಭಿವೃದ್ಧಿ ಕೆಲಸಕ್ಕೆ ಗೊಂದಲ ಸೃಷ್ಠಿಸಿ ಖುಷಿಪಡುವ ವಿಘ್ನಸಂತೋಷಿಗಳೇ ಹೆಚ್ಚಾಗಿದ್ದರು. ಆದರೂ ಎಲ್ಲಾ ಸದಸ್ಯರ ಒಮ್ಮತದ ಗಟ್ಟಿ ಪ್ರದರ್ಶನದಿಂದ ಎಲ್ಲಾ ಸವಾಲುಗಳನ್ನು ಎದುರಿಸಿ ಶೌಚಾಲಯ ನಿರ್ಮಿಸಿದ್ದೇವೆ. ಇನ್ನಾದರೂ ಹೊರಾಟಗಾರರೆನಿಸಿಕೊಂಡವರು ಒಳ್ಳೆಯ ಕೆಲಸಗಳಿಗೆ ಸಹಕಾರ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಶೌಚಾಲಯ ನಿರ್ಮಾಣಕ್ಕೆ ಸಹಕರಿಸಿದ ಕುಕ್ಕಳಲೆ ಈಶ್ವರಪ್ಪ, ಅಮೀರ್ ಹಂಜ ಹಾಗೂ ನಾಗರಾಜ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.


ಗ್ರಾ.ಪಂ.ಸದಸ್ಯರುಗಳಾದ ಡಿ.ಈ. ಮಧೂಸೂದನ, ಗಣಪತಿ, ಜಿ.ಡಿ. ಮಲ್ಲಿಕಾರ್ಜುನ, ನಿರೂಪ್ ಕುಮಾರ್, ಪ್ರಕಾಶ್ ಪಾಲೇಕರ್, ಧನಲಕ್ಷಿ, ವೇದಾವತಿ, ನಿರೂಪಮ, ದೀಪಾ, ಸಾರಾಭಿ, ವನಮಾಲ, ಆಶ್ವಿನಿ, ವಿನೋದ, ಪಿಡಿಓ ಚಂದ್ರಶೇಖರ್, ಗ್ರಾ.ಪಂ.ಸಿಬ್ಬಂದಿಗಳು ಹಾಗೂ ಇನ್ನಿತರರಿದ್ದರು.



ಕಾರ್ಯಕ್ರಮದ ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇



Leave a Reply

Your email address will not be published. Required fields are marked *