Headlines

ಸಾಗರ ನಗರಸಭೆ ವಿರುದ್ದ ಪ್ರತಿಭಟನೆ ನಡೆಸಿದ್ದ ಹೋರಾಟಗಾರನಿಗೆ ಪೌರಕಾರ್ಮಿಕ ಸಂಘದ ಅಧ್ಯಕ್ಷರಿಂದ ಧಮ್ಕಿ : ಆಡಿಯೋ ವೈರಲ್

ಸಾಗರ: ಚುನಾಯಿತ ಪ್ರತಿನಿಧಿಗೆ ಗೌರವ ಕೊಡದ ನಗರಸಭೆ ಆಡಳಿತ ವೈಖರಿಯನ್ನು ಖಂಡಿಸಿ ಬುಧವಾರ ನಗರಸಭಾ ಕಾಂಗ್ರೆಸ್ ಸದಸ್ಯೆ ಮಧುಮಾಲತಿ ಪೌರಾಯುಕ್ತರ ಕೊಠಡಿ ಎದುರು ಏಕಾಂಗಿ ಧರಣಿ ನಡೆಸಿ, ಆಡಳಿತದ ವಿರುದ್ಧ ಧಿಕ್ಕಾರ ಕೂಗಿದ್ದರು ಈ ಸಂಧರ್ಭದಲ್ಲಿ ಅವರಿಗೆ ಬೆಂಬಲಿಸಿದ ಹೋರಾಟಗಾರ ಅನ್ವರ್ ಭಾಷಾ ರವರಿಗೆ ನಗರಸಭೆ ಪೌರ ಕಾರ್ಮಿಕ ಸಂಘದ ಅಧ್ಯಕ್ಷರಾದ ನಾಗರಾಜ್ ರವರು ಕರೆ ಮಾಡಿ ಧಮ್ಕಿ ಹಾಕಿದ್ದಾರೆ ಎನ್ನುವ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಏಕೋ ಏನೋ ಇತ್ತೀಚೆಗೆ ಸಾಗರ ನಗರಸಭೆ ಜಿಲ್ಲೆಯಲ್ಲಿ ಹೆಚ್ಚು ಸುದ್ದಿ ಮಾಡುತ್ತಿದೆ..ಆದರೆ ಅದು ಪ್ರಗತಿಯಲ್ಲಿ ಅಲ್ಲ…ಹೋರಾಟ,ಫೈಲ್ ನಾಪತ್ತೆ,ದೂರು ದುಮ್ಮಾನ ತರಹದ ಪ್ರಕರಣಗಳಲ್ಲಿ ಹೆಚ್ಚು ಸುದ್ದಿಯಲ್ಲಿದ್ದು ಇಂದು ಸಹ ಪ್ರಜಾಪ್ರಭುತ್ವ ತಲೆತಗ್ಗಿಸುವ ಘಟನೆ ನಡೆದಿದೆ ಎನ್ನಲಾಗುತ್ತಿದೆ.

ಘಟನೆಯ ಹಿನ್ನಲೆ :

ನಿನ್ನೆಯ ದಿನ ನಗರಸಭೆ ಸದಸ್ಯೆ ಮಧುಮಾಲತಿ ಕಲ್ಲಪ್ಪ, ನಗರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳ ಮಾತಿಗೆ ಬೆಲೆ ಇಲ್ಲದಂತೆ ಆಗಿದೆ.ಕೆಲ ಮಾಹಿತಿ ಕೇಳಿದಾಗ ವೆಂಕಟೇಶ್ ಎಂಬುವವರು ಅವರು ನಾನು ಸದಸ್ಯೆ ಎನ್ನುವುದನ್ನು ಸಹ ನೋಡದೆ ದಬಾಯಿಸಿದ್ದಾರೆ ಎಂದು ಶಾಸಕರು ಮತ್ತು ನಗರಸಭೆ ಅಧ್ಯಕ್ಷರು ಸ್ಥಳಕ್ಕೆ ಬಂದು ನ್ಯಾಯ ಕೊಡಿಸುವ ತನಕ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದು ಕುಳಿತುಕೊಂಡಿದ್ದರು ಈ ಸಂಧರ್ಭದಲ್ಲಿ ಹೋರಾಟಗಾರ ಅನ್ವರ್ ಭಾಷಾ ಮಧುಮಾಲತಿ ರವರಿಗೆ ಬೆಂಬಲವಾಗಿ ನಿಂತು ಅಧಿಕಾರಿಗಳ ವಿರುದ್ದ ಧಿಕ್ಕಾರ ಕೂಗಿದ್ದರು.


ಈ ಹಿನ್ನಲೆಯಲ್ಲಿ ಇಂದು ಹೋರಾಟಗಾರ ಅನ್ವರ್ ಭಾಷಾ ರವರಿಗೆ ಕರೆ ಮಾಡಿರುವ ನಗರಸಭೆ ಪೌರ ಕಾರ್ಮಿಕ ಸಂಘದ ಅಧ್ಯಕ್ಷ ನಾಗರಾಜ್ ರವರು ಕರೆ ಮಾಡಿ “ನೀನು ಏನಕ್ಕಾಗಿ ಧಿಕ್ಕಾರ ಕೂಗಿದೀಯಾ – ನಾಳೆ ಬೆಳಿಗ್ಗೆ ನೀನು ನಗರಸಭೆಗೆ ಬರಬೇಕು ಇಲ್ಲದಿದ್ದಲ್ಲಿ ನಿನ್ನ ಮನೆಯ ಬಾಗಿಲಿಗೆ ನಾವು ಬರುತ್ತೇವೆ ಎಂದು ಏಕವಚನದಲ್ಲಿ ಧಮ್ಕಿ ಹಾಕಿರುವ ಆಡಿಯೋ ಕ್ಲಿಪ್ ವೈರಲ್ ಆಗಿದೆ.

ದೂರು ದಾಖಲು :

ಬೆದರಿಕೆ ಕರೆ ಬಂದ ಹಿನ್ನಲೆಯಲ್ಲಿ ಸಾಗರದ ಡಿವೈಎಸ್ಪಿ ಕಛೇರಿಗೆ ಅನ್ವರ್ ಭಾಷಾರವರು ದೂರು ನೀಡಿದ ನಂತರ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ “ಪ್ರಜಾಪ್ರಭುತ್ವದಲ್ಲಿ ಧಿಕ್ಕಾರ ಕೂಗುವ ಹಾಗೂ ಅನ್ಯಾಯದ ವಿರುದ್ದ ಸೆಟೆದು ನಿಲ್ಲುವ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇದೆ. ಈ ತರಹದ ದಬ್ಬಾಳಿಕೆಗೆ ಮಣಿಯುವುದಿಲ್ಲ” ಎಂದಿದ್ದಾರೆ.

ಒಟ್ಟಾರೆಯಾಗಿ ನಗರಸಭೆಯ ಮಹಿಳಾ ಸದಸ್ಯೆಗೆ ಆದ ಅಗೌರವದ ವಿರುದ್ದ ಪ್ರತಿಭಟಿಸಿದ ಸಾಮಾಜಿಕ ಹೋರಾಟಗಾರ ಅನ್ವರ್ ಭಾಷಾ ರವರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಮಗೆ ಹಳೆ ಬ್ರಿಟಿಷ್ ಆಡಳಿತವನ್ನು ನೆನಪಿಸುವಂತಿದೆ.

ಬೆದರಿಕೆ ಹಾಕಿದ್ದಾರೆನ್ನಲಾಗುವ ವೈರಲ್ ಆಡಿಯೋ ಇಲ್ಲಿ ಕೇಳಿ 👇👇👇


Leave a Reply

Your email address will not be published. Required fields are marked *