ರಿಪ್ಪನ್ಪೇಟೆಯ ಮಹಿಳೆಯೋರ್ವರ ಮೊಬೈಲ್ ಗೆ ಅಶ್ಲೀಲ ವಿಡಿಯೋ ರವಾನಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಪ್ರಕರಣದ ಆರೋಪಿಯ ಹೆಡೆಮುರಿ ಕಟ್ಟಿ ಬಂಧಿಸುವಲ್ಲಿ ರಿಪ್ಪನ್ಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ದೇವಳ್ಳಿ ಗ್ರಾಮದ ಬಾಬು ಬೈರುಗವಳಿ ಬಿನ್ ಬೈರುಗವಳಿ ಎಂಬ (22) ವರ್ಷದ ಆರೋಪಿಯನ್ನು ರಿಪ್ಪನ್ಪೇಟೆ ಪಿಎಸ್ ಐ ಶಿವಾನಂದ ಕೋಳಿ ನೇತ್ರತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಿಪ್ಪನ್ಪೇಟೆಯ ಗವಟೂರು ಗ್ರಾಮದ ನಿವಾಸಿಯಾಗಿರುವ ಮಹಿಳೆಯೊಬ್ಬರ ಮೊಬೈಲ್ ಗೆ ಮೇ.10 ರಂದು ಅಶ್ಲೀಲ ವಿಡಿಯೋಗಳನ್ನ ಎರಡು ಅಪರಿಚಿತ ನಂಬರ್ ನಿಂದ ರವಾನಿಸಿ ಮೇಲಿಂದ ಮೇಲೆ ಕರೆ ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದ ಬಗ್ಗೆ ಮಹಿಳೆ ರಿಪ್ಪನ್ಪೇಟೆ ಠಾಣೆಗೆ ದೂರು ನೀಡಿದ್ದರು.
ಇದನ್ನು ತನಿಖೆ ನಡೆಸಿದ ರಿಪ್ಪನ್ಪೇಟೆ ಪೊಲೀಸ್ ತಂಡ ಉತ್ತರ ಕನ್ನಡ ಜಿಲ್ಲೆಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕಾರ್ಯಾಚರಣೆಯು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿಪ್ರಸಾದ್ ಹಾಗೂ ಡಿವೈಎಸ್ಪಿ ಶಾಂತವೀರ ರವರ ಮಾರ್ಗದರ್ಶನದಲ್ಲಿ ಹೊಸನಗರ ಸಿಪಿಐ ಗಿರೀಶ್ ಬಿ ಸಿ ರವರ ನೇತೃತ್ವದಲ್ಲಿ ರಿಪ್ಪನ್ಪೇಟೆ ಪೊಲೀಸ್ ಪಿಎಸ್ ಐ ಶಿವಾನಂದ ಕೋಳಿ,ಎಎಸೈ ಹಾಲಪ್ಪ ಮತ್ತು ಸಿಬ್ಬಂದಿಗಳಾದ ಶಿವಕುಮಾರ್,ಉಮೇಶ್ ಮತ್ತು ಮಧೂಸುಧನ್ ಪಾಲ್ಗೊಂಡಿದ್ದರು.