Headlines

ಅಗ್ನಿಪಥ್ ಯೋಜನೆ ಹಿಂಪಡೆಯುವಂತೆ ಆಗ್ರಹಿಸಿ ಕಿಮ್ಮನೆ ರತ್ನಾಕರ್ ನೇತ್ರತ್ವದಲ್ಲಿ ತೀರ್ಥಹಳ್ಳಿಯಲ್ಲಿ ಪ್ರತಿಭಟನೆ :

ತೀರ್ಥಹಳ್ಳಿ : ತಾಲೂಕಿನಲ್ಲಿ ಲಂಚವಿಲ್ಲದೆ ಎಲ್ಲೂ ಕೂಡ ಕೆಲಸ ನೆಡೆಯುತ್ತಿಲ್ಲ. ಜ್ಞಾನೇಂದ್ರರವರ ಇಲಾಖೆಯ ಪಿಎಸ್ಐ ನೇಮಕಾತಿಯಲ್ಲೂ ಹಗರಣ ಮಾಡಿ ಮೋಸ ಮಾಡಿದರು ಎಂದು ಆರಗ ಜ್ಞಾನೇಂದ್ರ ವಿರುದ್ಧ ವಾಗ್ದಾಳಿ ನೆಡೆಸಿದರು.

ಪಟ್ಟಣದ ತಾಲೂಕು ಕಚೇರಿ ಎದುರು ಕೇಂದ್ರ ಬಿಜೆಪಿ  ಸರ್ಕಾರದ ಅವೈಜ್ಞಾನಿಕ ಅಗ್ನಿಪಥ್ ಯೋಜನೆಯನ್ನು ಹಿಂಪಡೆಯುವಂತೆ ಆಗ್ರಹಿಸಿ  ನೆಡೆದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿ ಭಾರತೀಯ ಸೇನೆಯಲ್ಲಿ ನೇಮಕಾತಿ ಸಂಬಂಧ ಕೇಂದ್ರದ ಬಿಜೆಪಿ ಸರ್ಕಾರ ಇತ್ತೀಚಿಗೆ ಅನುಷ್ಠಾನಗೊಳಿಸಿರುವ ಅಗ್ನಿಪಥ್ ಯೋಜನೆ ಜನವಿರೋಧಿಯಾಗಿದ್ದು ದೇಶದ ಯುವಜನತೆಯ ನಿರುದ್ಯೋಗ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸುವ ಕೆಲಸ ಈ ಯೋಜನೆಯಿಂದಾಗಿದ್ದು ಕಾಂಗ್ರೆಸ್ ಪಕ್ಷದಿಂದ ಈ ಯೋಜನೆಯನ್ನು ತೀವ್ರವಾಗಿ ಖಂಡಿಸುತ್ತೇನೆಂದು ತಿಳಿಸಿದರು.


ಹಿಂದಿನ 2014 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿವರ್ಷ 2 ಕೋಟಿ ಉದ್ಯೋಗ ನೀಡುವ ಭರವಸೆ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಯುವ ಜನತೆಗೆ ಹೊಸ ಉದ್ಯೋಗ ಸೃಷ್ಟಿ ಮಾಡದೇ ನಿರುದ್ಯೋಗ ಹೆಚ್ಚಳಕ್ಕೆ ಕಾರಣಿ ಭೂತರಾಗಿದ್ದಾರೆ. ನಿರುದ್ಯೋಗ ಸಮಸ್ಯೆ ಜೊತೆಗೆ ನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ, ನೋಟು ಅಮಾನ್ಯಕರಣ, ಜಿ ಎಸ್ ಟಿ ಅನುಷ್ಠಾನದ ಮೂಲಕ ಮತ್ತಷ್ಟು ನಿರುದ್ಯೋಗ ಸಮಸ್ಯೆಯನ್ನು ತೀವ್ರಗೊಳಿಸಿದೆ. ಹಾಗೂ ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ಸೃಷ್ಟಿಸಿದ ಆಸ್ತಿಗಳಾದ, ರೈಲ್ವೆ ಬಿ ಎಸ್ ಎನ್ ಎಲ್, ವಿಮಾನಯಾನ, ಎಲ್ ಐ ಸಿ, ಬ್ಯಾಂಕ್ ಗಳನ್ನು ಮುಂತಾದ ಅನೇಕ ಆಸ್ತಿಗಳನ್ನು ಖಾಸಗಿ ಶ್ರೀಮಂತರಿಗೆ ಮಾರಾಟ ಮಾಡುತ್ತಿದ್ದು ಬಡವರು ಬಡವರಾಗಿಯೇ ಉಳಿದು ಬಂಡವಾಳ ಶಾಹಿಗಳು ಶ್ರೀಮಂತರಾಗಲು ಹೊರಟಿದ್ದಾರೆ ಎಂದರು.

ಅಗ್ನಿಪಥ್ ಯೋಜನೆಯಲ್ಲಿ ನಾಲ್ಕು ವರ್ಷವಾದ ಮೇಲೆ ಅವರನ್ನು ಬೀದಿಗೆ ಬಿಸಾಕುವ ಪ್ರಯತ್ನವನ್ನು ಮೋದಿ ಸರ್ಕಾರ ಮಾಡುತ್ತಿದೆ ಆ ರೀತಿ ಮಾಡಬಾರದು. ಈ ದೇಶವನ್ನು ಜಾತಿ ಮತ್ತು ಧರ್ಮ ಮತ್ತು ಹಣದ ಮೇಲೆ ಅಧಿಕಾರವನ್ನು ಉಳಿಸಿಕೊಳ್ಳುವ ಪ್ರಯತ್ನ ನೆಡೆಯುತ್ತಿದೆ ಮೋದಿಯವರ ಆಡಳಿತ ಅನೈತಿಕತೆಯಿಂದ ಕೊಡಿದೆ. ಕರ್ನಾಟಕ, ಗುಜರಾತ್, ಮಹಾರಾಷ್ಟ್ರ ಈ ಎಲ್ಲದರಲ್ಲೂ ಬೇರೆ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ತರುತ್ತಿದ್ದಾರೆ ಎಂದರೆ ಇದರ ಹಿಂದೆ ನರೇಂದ್ರ ಮೋದಿ ಇದ್ದಾರೆ ಎಂದು ಕಿಡಿಕಾರಿದರು.
 
ಈ ಸಂದರ್ಭದಲ್ಲಿ ತೀರ್ಥಹಳ್ಳಿ  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆಸ್ತೂರ್ ಮಂಜುನಾಥ್ , ಗ್ರಾಮಾಂತರ ಬ್ಲಾಕ್ ಅಧ್ಯಕ್ಷರಾದ ಮುಡುಬ  ರಾಘವೇಂದ್ರ , ಯುವ ಕಾಂಗ್ರೆಸ್ ಅಧ್ಯಕ್ಷರುಗಳಾದ  ಅಮರ್ ನಾಥ್ ಶೆಟ್ಟಿ , ರಾಘವೇಂದ್ರ ,ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರರಾದ ಹುಂಚದಕಟ್ಟೆ ಆದರ್ಶ್ , ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶಬನಂ, ಉಪಾಧ್ಯಕ್ಷರಾದ ಜಯಪ್ರಕಾಶ್ ಶೆಟ್ಟಿ, ಆಮ್ರಪಾಲಿ ಸುರೇಶ್,  ವಿಲಿಯಮ್ ಮಾರ್ಟಿಸ್  ಪೂರ್ಣೇಶ್ ಕೆಳಕೆರೆ ಸೇರಿ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *