Headlines

ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸದ ಶಾಸಕ ಹರತಾಳು ಹಾಲಪ್ಪ : ಬೇಳೂರು ಗೋಪಾಲಕೃಷ್ಣ ಆರೋಪ.

ರಿಪ್ಪನ್ ಪೇಟೆ: ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಹಾಗೂ ಅನುಷ್ಠಾನಗೊಂಡಿರುವ ಸರಕಾರಿ ಯೋಜನೆಗಳು ಜಾರಿಗೊಳ್ಳುತ್ತಿಲ್ಲ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಸಾಗರ ಪಟ್ಟಣದ ಗಣಪತಿ ಕೆರೆ ಅಭಿವೃದ್ಧಿಗೆ ಮಾತ್ರ ಆದ್ಯತೆ ನೀಡುತ್ತಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣ ಆರೋಪಿಸಿದರು.


ಪಟ್ಟಣದ ಗ್ರಾಮಪಂಚಾಯಿತಿಯ ಕುವೆಂಪು ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಗರ  ವಿಧಾನಸಭಾ ಕ್ಷೇತ್ರದಲ್ಲಿ ಉದ್ಯೋಗಖಾತ್ರಿ ಯೋಜನೆ ಹಾಗೂ ಆಶ್ರಯ ಯೋಜನೆಗಳು ಕಾಣೆಯಾಗಿದ್ದು ಕಳೆದ ಕೆಲವು ವರ್ಷಗಳಿಂದ 94ಸಿ ಅಡಿಯಲ್ಲಿ ಬಡವರಿಗೆ ಹಕ್ಕು ಪತ್ರ ನೀಡಿಲ್ಲ ಹಾಗೆಯೇ ಒಂದೇ ಒಂದು ಆಶ್ರಯ ಮನೆಯನ್ನು ಸಹ ನೀಡಲಿಲ್ಲ. ಸರಕಾರದ ಹಣವನ್ನು ನಂಬಿ ಆಶ್ರಯ ಯೋಜನೆಯಡಿಯಲ್ಲಿ ಅರೆಬರೆ ಮನೆಯನ್ನು ನಿರ್ಮಿಸಿ  ಪೂರ್ಣಗೊಳ್ಳದೆ  ತೀವ್ರ ಸಂಕಷ್ಟದಲ್ಲಿದ್ದಾರೆ ಫಲಾನುಭವಿಗಳು  ಮತ್ತು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾರ್ಯನಿರ್ವಹಿಸಿದವರಿಗೆ ಹಣ ಪಾವತಿ ಆಗಿರುವುದಿಲ್ಲ. ಪುಕ್ಕಟೆ ಪ್ರಚಾರಕ್ಕಾಗಿ ಹುಟ್ಟುಹಬ್ಬ ಗೃಹಪ್ರವೇಶ, ಮದುವೆ ಮನೆಗಳ  ಕಾರ್ಯಕ್ರಮದಲ್ಲಿ ಭಾಗಿಯಾಗಲು ಕ್ಷೇತ್ರದಲ್ಲಿ ಸುತ್ತಾಡುವ ಶಾಸಕರಿಗೆ ಕ್ಷೇತ್ರದ ಅಭಿವೃದ್ಧಿಗಿಂತ ಮರಳು ಮಾಫಿಯಾದವರ ಅಭಿವೃದ್ಧಿ ಹಾಗೂ ಸಾಗರ ಪಟ್ಟಣದ ಗಣಪತಿ ಕೆರೆಯ ಅಭಿವೃದ್ಧಿಯ ಬಗ್ಗೆ ಹಗಲಿರುಳು ಶ್ರಮಿಸುತ್ತಿದ್ದು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯನ್ನು ಮರೆತುಬಿಟ್ಟಿದ್ದಾರೆ ಮುಂದಿನ ಚುನಾವಣೆಯಲ್ಲಿ ಕ್ಷೇತ್ರದ ಜನತೆ ಹಾಲಿ ಶಾಸಕರಿಗೆ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ಹೇಳಿದರು.

ರೋಹಿತ್ ಚಕ್ರತೀರ್ಥರ ಪರಿಷ್ಕೃತ ಪಠ್ಯ ಪುಸ್ತಕವನ್ನು ರದ್ದುಪಡಿಸಲಿ :

ಬಸವೇಶ್ವರ, ಶ್ರೀ ನಾರಾಯಣ ಗುರು,ಕುವೆಂಪು ಸೇರಿದಂತೆ  ರಾಷ್ಟ್ರ ಮತ್ತು ನಾಡಿನ ಅನೇಕ ಗಣ್ಯರ ಕುರಿತು ಜನಸಾಮಾನ್ಯರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ತಪ್ಪುಗ್ರಹಿಕೆ ಬರುವಂತೆ ಪಠ್ಯಪುಸ್ತಕದಲ್ಲಿ ಅಳವಡಿಸಿಕೊಂಡಿದ್ದಾರೆ ಆದ್ದರಿಂದ ಪರಿಷ್ಕೃತ ಪಠ್ಯ ಪುಸ್ತಕವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ನೆನಪಿಸಿಕೊಂಡ ಬೇಳೂರು  ಗೋಪಾಲಕೃಷ್ಣ: 

ದೇಶದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸರ್ವ ಶಿಕ್ಷಣ ಅಭಿಯಾನದ ಮೂಲಕ   ದೇಶದಲ್ಲಿನ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡಬೇಕು ಎಂದು ಅಭಿಲಾಷೆಯನ್ನು ಹೊಂದಿ ಅದನ್ನು ಜಾರಿಗೊಳಿಸಿದ್ದರು. ಮಹಾನ್ ವ್ಯಕ್ತಿಯ ಹೆಸರಿಗೆ ಕಳಂಕ ತರಲು ಹೊರಟಿರುವ ಇಂದಿನ ರಾಜ್ಯದ ಬಿಜೆಪಿ ಸರಕಾರ ಜಾತಿಮತಗಳ ವಿಷಬೀಜವನ್ನು ಬಿತ್ತುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ಮಾಡಿದ ಅಭಿವೃದ್ಧಿ ಕಾರ್ಯವನ್ನು ಕ್ಷೇತ್ರದ ಶಾಸಕರು ಒಮ್ಮೆ ಪರಿಶೀಲಿಸಲಿ : 

ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಅಧಿಕಾರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು  ಹೊಸನಗರ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಬಸ್ ನಿಲ್ದಾಣ. ನ್ಯಾಯಾಲಯದ ಕಟ್ಟಡ. ಪೊಲೀಸ್ ವಸತಿ ಗೃಹ. ಕೃಷಿ ಇಲಾಖೆಯ ಕಟ್ಟಡಗಳು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡಗಳು. ಶಿಕ್ಷಣ ಇಲಾಖೆ ತೋಟಗಾರಿಕೆ ಇಲಾಖೆ ಹಾಗೂ ಕಂದಾಯ ಇಲಾಖೆಯ ಕಟ್ಟಡಗಳು  ಸೇರಿದಂತೆ ಸರ್ಕಾರದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಲಾಗಿದೆ  ಎಂದರು
 ಪತ್ರಿಕಾಗೋಷ್ಠಿಯಲ್ಲಿ ಸಾಗರ ನಗರಸಭಾ ವಿರೋಧ ಪಕ್ಷದ ನಾಯಕ ಗಣಪತಿ ಮಂಡಗಳಲೆ,ಅರಸಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮಾಕರ್ ರಿಪ್ಪನ್ ಪೇಟೆ ಗ್ರಾಪಂ ಸದಸ್ಯರಾದ ಆಸಿಫ್  ಭಾಷಾ ಸಾಬ್. ಡಿ. ಈ ಮಧುಸೂದನ್, ಗವಟೂರು ಗಣಪತಿ. ಕಾಂಗ್ರೆಸ್ ಮುಖಂಡರುಗಳಾದ ಉಲ್ಲಾಸ್.ರವೀಂದ್ರ ಕೆರೆಹಳ್ಳಿ, ಫ್ಯಾನ್ಸಿ ರಮೇಶ್. ರಾಜುಗೌಡ,ಇನ್ನಿತರಿದ್ದರು.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇



Leave a Reply

Your email address will not be published. Required fields are marked *