ರಿಪ್ಪನ್ಪೇಟೆ: ಜ್ಯಾತ್ಯಾತೀತ ಜನತಾದಳ ಪಕ್ಷದ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಪಟ್ಟಣದ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಜೆಡಿಎಸ್ ರಾಜ್ಯ ಮುಖಂಡ ಆರ್.ಎ. ಚಾಬುಸಾಬ್ ಚಾಲನೆ ನೀಡಿದರು.
ನಂತರ ಮಾತನಾಡಿ ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಕ್ಷದಿಂದ ಹತ್ತು ಸಾವಿರ ಸದಸ್ಯತ್ವ ನೋಂದಣಿಮಾಡಿ ಪಕ್ಷ ಬಲಪಡಿಸಿ ಮುಂಬರುವ ಸ್ಥಳೀಯ ಸಂಸ್ಥೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧವೊಡ್ಡುವ ಸವಾಲಿದ್ದು ಮುಂದಿನ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಜನಪರ ಕಾರ್ಯಕ್ರಮಗಳ ಬಗ್ಗೆ ಜನತೆಗೆ ತಲುಪಿಸುವ ಕಾರ್ಯ ಮಾಡಬೇಕು ಎಂದರು.
2023 ರಲ್ಲಿ ಜೆಡಿಎಸ್ ಪಕ್ಷ ಸಂಪೂರ್ಣ 5 ವರ್ಷದ ಸರ್ಕಾರ ನಡೆಸಲು ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕೈಬಲಪಡಿಸಲು ಶಿವಮೊಗ್ಗ ಜಿಲ್ಲೆಯಲ್ಲಿ 4 ಶಾಸಕರನ್ನು ಗೆಲ್ಲಿಸುವ ಪಣ ತೊಡಲು ಎಲ್ಲರು ಬದ್ದರಾಗ ಬೇಕೆಂದು ಹೇಳಿದರು. 
ಬಿಜೆಪಿ ಮತ್ತು ಕಾಂಗ್ರೆಸ್ನಿಂದ ರಾಜ್ಯಕ್ಕೆ ಯಾವುದೇ ಪ್ರಯೋಜನವಿಲ್ಲ. ಕನ್ನಡ ನಾಡಿನ ನೆಲ-ಜಲ ಭಾಷೆಗಳಿಗೆ ಆದ್ಯತೆ ನೀಡದ ಕನ್ನಡ್ನ ವಿರೋಧಿ ನಿಲುವನ್ನು ಅನುಸರಿಸಿ. ರಾಜಕೀಯ ಮಾಡುತ್ತಿದ್ದು ಪ್ರಾದೇಶಕ್ಕೆ ಪಕ್ಷಕ್ಕೆ ಜನ ಮನ್ನಣೆ ನೀಡಿದರೆ ಉತ್ತಮ ಕಾರ್ಯಕ್ರಮ ಜಾರಿಗೊಳಿಸಬಹುದು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದ್ದು, ಪಿಎಸ್ಐ ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಆ ಸಚಿವರುಗಳು ತಕ್ಷಣ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಆರ್.ಎನ್. ಮಂಜುನಾಥ ಕಲ್ಲೂರು ಈರಣ್ಣ. ಜಿ.ಎಸ್. ವರದರಾಜ್ ಎನ್. ವರ್ತೇಶ್ ಮಂಜುನಾಥಾಚಾರಿ ಹಾಲುಗುಡ್ಡ ತಮ್ಮಯ್ಯ ಇನ್ನಿತರರಿದ್ದರು.
ನೇಮಕ :
ಬಾಳುರು ಗ್ರಾಮ ಪಂಚಾಯತ್ ಜನತಾದಳ ಯುವ ಸಮಿತಿ ಅದ್ಯಕ್ಷರನ್ನಾಗಿ ಚಂದಳ್ಳಿಯ ದೇವರಾಜ ರವರನ್ನು  ಪಕ್ಷದ ಆದೇಶದಂತೆ ನೇಮಕ ಮಾಡಿ ಅಭಿನಂದಿಸಲಾಯಿತು. 
 ಕಾರ್ಯಕ್ರಮಕ್ಕೆ ಎನ್ ವರ್ತೇಶ್ ಸ್ವಾಗತಿಸಿದರು.  ಜಿ. ಎಸ್. ವರದ ರಾಜ್ ವಂದಿಸಿದರು.
		 
                         
                         
                         
                         
                         
                         
                         
                         
                         
                        
