ಬಸ್ ಇಳಿಯಲು ಹೊರಟಿದ್ದ ಪ್ರಯಾಣಿಕರೊಬ್ಬರು ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಸಾಗರ ಪಟ್ಟಣದ ಸಂಜೀವಿನಿ ಆಯುರ್ವೇದಿಕ್ ಆಸ್ಪತ್ರೆಯ ಬಳಿ ಸಂಭವಿಸಿದೆ.
ಹೋಟೆಲ್ ಕೆಲಸಕ್ಕೆಂದು ಕಾರ್ಗಲ್ ಗೆ ತೆರಳಿದ್ದ ಮಹಾದೇವ ನಾಯ್ಕ್ ವಾಪಾಸ್ ಸಾಗರಕ್ಕೆ ಕುಮಧ್ವತಿ ಖಾಸಗಿ ಬಸ್ ನಲ್ಲಿ ಬಂದಿದ್ದಾರೆ. ಸಾಗರದ ಅಗಡಿಮಠ ಹತ್ತಿರ ಮನೆ ಮಾಡಿಕೊಂಡಿರುವ ಮಹದೇವ ನಾಯ್ಕ್ ಬಸ್ ಸಾಗರ ಕೆಎಸ್ ಆರ್ ಟಿ ಬಸ್ ನಿಲ್ದಾಣದ ಮುಂದೆ ಬರುತ್ತಿದ್ದಂತೆ ಸೀಟ್ ನಿಂದ ಎದ್ದು ಹಿಂಬದಿ ಡೋರ್ ಬಳಿ ಬಂದು ನಿಂತಿದ್ದಾರೆ.
ಸಂಜೀವಿನಿ ಆಯುರ್ವೇದಿಕ್ ಆಸ್ಪತ್ರೆಯ ಬಳಿ ಬಸ್ ಚಾಲಕ ನಿರ್ಲಕ್ಷತನದಿಂದ ಬ್ರೇಕ್ ಹಾಕುತ್ತಿದ್ದಂತೆ ಮಹದೇವ್ ನಾಯ್ಕ್ ಬಸ್ ನಿಂದ ಕೆಳಗೆ ಬೀಳುತ್ತಾರೆ. ತಕ್ಷಣವೇ ಆಸ್ಪತ್ರೆಗೆ ದಾಖಲಾದರೂ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಲು ಸೂಚಿಸಿದ್ದಾರೆ. ಆದರೆ ಮೆಗ್ಗಾನ್ ನಲ್ಲಿ ಚಿಕಿತ್ಸೆ ಫಲನೀಡದೆ ಹಿನ್ನಲೆಯಲ್ಲಿ ಸಾವನ್ನಪ್ಪಿದ್ದಾರೆ.
ನಿರ್ಲಕ್ಷತನದಿಂದ ವಾಹನ ಚಲಿಸಿದ ಬಸ್ ಚಾಲಕ ಮತ್ತು ನಿರ್ವಾಹಕನ ವಿರುದ್ಧ ಅವರ ಮಗ ದೂರು ದಾಖಲಿಸಿದ್ದಾರೆ. ಬಸ್ ನ ಚಾಲಕರ ನಿರ್ಲಕ್ಷ್ಯದಿಂದ ಜಿಲ್ಲೆಯಲ್ಲಿ ಇಂದು ಎರಡು ಸಾವಾಗಿದೆ. ಒಂದು ಆನವಟ್ಟಿ ಹೋಬಳಿಯಲ್ಲಿ ಸಂಭವಿಸಿದರೆ ಇನ್ನೊಂದು ಸಾಗರದಲ್ಲಿ ನಡೆದಿದೆ.