Headlines

ಒಬ್ಬಂಟಿ ಮಹಿಳೆಯರಿರುವ ಮನೆಗೆ ನುಗ್ಗಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಕಾಮುಕನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು:

ರಾತ್ರಿ ವೇಳೆ ಒಂಟಿ ಮಹಿಳೆಯರಿದ್ದ ಮನೆಗಳಿಗೆ ನುಗ್ಗಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತಿದ್ದ ಯುವಕನನ್ನ್ನು ಗ್ರಾಮಸ್ಥರೇ ಹಿಡಿದು ಕೈಕಾಲು ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಘಟನೆ ಶಿವಮೊಗ್ಗ ತಾಲೂಕಿನ ಆಯನೂರಿನ ಕೋಟೆ ತಾಂಡದಲ್ಲಿ‌ ನಡೆದಿದೆ.ಕೋಟೆ ತಾಂಡದ ಸುಂದರ್ ನಾಯ್ಕ ಬಂಧಿತ ಆರೋಪಿಯಾಗಿದ್ದಾನೆ.


ತಾಂಡದ ಮಹಿಳೆಯೋರ್ವರ ಪತಿ ನಾಲ್ಕು ದಿನದಿಂದ ಮನೆಯಲ್ಲಿಲ್ಲದಿರುವುದನ್ನು ಗಮನಿಸಿದ್ದ ಸುಂದರ್ ನಾಯ್ಕ, ನಿನ್ನೆ ರಾತ್ರಿ ಆ ಮನೆಗೆ ನುಗ್ಗಿದ್ದಾನೆ. ಮಹಿಳೆಯ ಮನೆಗೆ ನುಗ್ಗಿದ ಸುಂದರ್ ನಾಯ್ಕ ಮಹಿಳೆಗೆ ಲೈಂಗಿಕ ಕಿರುಕುಳ ನೀಡಲಾರಂಭಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ನಿದ್ರೆಯಿಂದ ಎಚ್ಚರಗೊಂಡ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾಳೆ.ಈ ವೇಳೆ ಪಕ್ಕದ ಕೋಣೆಯಲ್ಲಿದ್ದ ಮಲಗಿದ್ದ ಮಹಿಳೆಯ ಮಾವ ಎಚ್ಚರಗೊಂಡು ಸೊಸೆಯ ಕೋಣೆಗೆ ಹೋಗಿದ್ದಾನೆ. ಈ ವೇಳೆ ಸುಂದರ್ ನಾಯ್ಕ ಅಲ್ಲಿಂದ ಪರಾರಿಯಾಗಿದ್ದಾನೆ.


 ಇಂದು ಬೆಳಗ್ಗೆ ವಿಷಯ ತಿಳಿದು ಗ್ರಾಮಸ್ಥರು ಸೆರೆ ಹಿಡಿದು ದೇವಸ್ಥಾನದ ಬಳಿ ಕಟ್ಟಿ ಹಾಕಿ ಧರ್ಮದೇಟು ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಸುಂದರ್ ನಾಯ್ಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

ಈ ಹಿಂದೆಯೂ ಇದೇ ರೀತಿಯ ಹಲವು ಪ್ರಕರಣಗಳಲ್ಲಿ ಸುಂದರ್‌ನಾಯ್ಕ ಭಾಗಿಯಾಗಿದ್ದ ಎನ್ನಲಾಗಿದೆ.ಆದರೆ ಮರ್ಯಾದೆಗೆ ಅಂಜಿ ಯಾರೂ ಪ್ರಕರಣ ದಾಖಲಿಸಿರಲಿಲ್ಲ.ಈ  ನಂಬಿಕೆಯ ಮೇಲೆ ಸುಂದರ್ ನಾಯಕ್ ತನ್ನ ಹಳೆ ಚಾಳಿಯನ್ನು ಮುಂದುವರೆಸಿದ್ದಾನೆ ಎನ್ನಲಾಗಿದೆ.


ಇದೀಗ  ಕುಂಸಿ ಪೊಲೀಸರು ಈತನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಿದ್ದಾರೆ.

Leave a Reply

Your email address will not be published. Required fields are marked *